Author: Smitha, smitha.hasiru@gmail.com

7

ಲಕ್ಷ್ಮೀ ಬಾರಮ್ಮಾ…

Share Button

ಹಳ್ಳಿ ಮನೆಗಳಲ್ಲಿ ಬಾಗಿಲು ಹಾಕುವ ಪದ್ದತಿಯಂತು ಇಲ್ಲವೇ ಇಲ್ಲ. ಎಲ್ಲೋ ಕೆಲಸದ ಮೇಲೆ ಗದ್ದೆಗೋ ತೋಟಕ್ಕೋ ಹೋಗುವ ಸಂದರ್ಭದಲ್ಲಿ ಬಾಗಿಲು ಎಳೆದು ಕೊಳ್ಳುತ್ತಾರೆ ಅಷ್ಟೇ. ಆದರೆ ಬೀಗ ಜಡಿಯುತ್ತಿರಲಿಲ್ಲ. ಹೊರಗೆಯಿಂದ ಬಂದವರಿಗೆ ಮನೆಯೊಳಗೆ ಯಾರೂ ಇಲ್ಲಾ ಅಂತ ತೋರಿಸಿ ಕೊಳ್ಳುವುದರ ಸಂಕೇತ ಅಷ್ಟೆ ಅದು. ಇನ್ನು ಸಂಜೆ...

1

ಇನ್ನೇನ ಬರೆಯಲಿ?

Share Button

ಮಳೆಗೆ ನೆನೆಯದ, ನೆನಪುಗಳಿಗೆ ಜಾರದ ಜೀವಗಳು ಎಲ್ಲಿ ತಾನೇ ಇದ್ದಾತು?. ಏನು ಬರೆದರೂ ಮಳೆಯ ಹನಿಯೊಂದು ಅಲ್ಲೇ ಎದೆಯತಳದಲ್ಲಿ ಅವಿತು ಕುಳಿತು ಕೈ ಹಿಡಿದು ಬರೆಸಿದಂತೆ ಭಾಸವಾಗುತ್ತದೆ. ಮಳೆಯ ಹನಿಗೆ ಹಿತವಾಗಿ ತೋಯಿಸಿಕೊಳ್ಳುತ್ತಾ ಬರೆದ ಬರಹದ ತುಂಬೆಲ್ಲಾ ಮಳೆಯ ಲಾಲಿತ್ಯವೇ. ಏನ್ರೀ.. ಎಷ್ಟೊಂದು ಮಳೆ ಕವಿತೆ?, ಎಷ್ಟೊಂದು...

5

ಬರೆದು ಬಿಡಬೇಕು ಏನನ್ನಾದರೂ..

Share Button

ಬರೆದು ಬಿಡಬೇಕು ಏನನ್ನಾದರೂ ಅಂತ ಹೇಳುತ್ತಲೇ ತನಗೆ ಗೊತ್ತೇ ಆಗದಂತೆ ಅದೆಷ್ಟೋ ಕವಿತೆಗಳನ್ನು ಬರೆದು ಇನ್ನೂ ಬರೆಯಬೇಕೆನ್ನುವ ತುಡಿತದಲ್ಲಿರುವ ಕವಯತ್ರಿ ರೇಣುಕಾ ರಮಾನಂದ. ಇದು ಒಳ್ಳೆಯ ಬೆಳವಣಿಗೆ. ಇಂತಹ ತುಡಿತ ಹೊಂದಿರುವುದರಿಂದಲೇ ನಮ್ಮ ಸಮಕಾಲೀನ ಪ್ರಮುಖ ಕವಯತ್ರಿಯರಲ್ಲಿ ರೇಣುಕಾರವರು ಕೂಡ ಒಬ್ಬರು. ಇಲ್ಲಿ ತನಕ ನಾನು ನೋಡಿಯೇ...

1

ಕೃಷಿ ಮಹಿಳೆಯ ಬದುಕಿನ ಸುಗ್ಗಿಸಂಕಟ

Share Button

ಯಾರು ಕೃಷಿ ಮಾಡಿ ಕೃಶನಾಗುವನೋ ಅವನು ಕೃಷಿಕ ಅಂತ ಭಾಷಣಕಾರರೋರ್ವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಪರ ವಿರೋಧ ಅನಿಸಿಕೆಗಳು ಏನಿದ್ದರೂ ಇವತ್ತಿನ ಪರಿಸ್ಥಿತಿ ನೋಡುವಾಗ ಮಾತ್ರ ಈ ವಿಚಾರವನ್ನು ಅಲ್ಲಗಳೆಯುವ ಹಾಗಿಲ್ಲ. ಈ ಹಿಂದೆ ಕೃಷಿ ಎಂದರೆ ಬದುಕಿನ ಮೂಲ ಸೆಲೆಯಾಗಿತ್ತು. ಭೂ ಮಾಲಿಕನಿಗೆ ಸಮಾಜದಲ್ಲಿ...

4

ಮಳೆಯೆಂಬ ಮಧುರ ಆಲಾಪ

Share Button

ಈ ದಾಹ,ಉರಿ ಧಗೆ,ರಣ ಬಿಸಿಲು ಇವುಗಳಿಂದ ಬಸವಳಿದು ದೇಹ ಮನಸು ಸೋತು ಬಸವಳಿದು ತೊಪ್ಪೆಯಾಗಿ ಬಿದ್ದಿರುವಾಗ, ನೆನಪುಗಳೆಲ್ಲಾ ಮರೆವಿಗೆ ಸಂದು ಈ ಲೋಕಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಮನಸಿಗೆ ಮಂಕು ಕವಿದಿರುವಾಗ, ಏಕ್ ದಂ ಅಬ್ಭಾ! ಒಮ್ಮಿಂದೊಮ್ಮೆಗೇ ಅದೆಂಥಾ ಶಬ್ದ. ಆಕಾಶ ಸೀಳಿ ಎರಡು ಹೋಳಾಗಿ ದೇವಲೋಕದ...

9

ರಂಗಮನೆಯ ಅಂಗಳದಲ್ಲಿ

Share Button

ಪರೀಕ್ಷೆಗಳೆಲ್ಲಾ ಮುಗಿದು ಪಲಿತಾಂಶ ಬಂದು ಬೇಸಿಗೆ ರಜೆ ಸಿಕ್ಕ ತಕ್ಷಣ,ಈಗ ಮಕ್ಕಳಿಗೂ ಅವರ ಹೆತ್ತವರಿಗೂ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಸೇರಿಸುವ ತರಾತುರಿ. ಈಗ ಎರಡು ತಿಂಗಳ ರಜೆಯೊಳಗೆ ಒಂದು ಹತ್ತು ದಿನ ಬೇಸಿಗೆ ಶಿಬಿರಕ್ಕೆ ಪಾಲ್ಗೊಳ್ಳುವುದು ಒಂದು ಕಡ್ಡಾಯ ನಿಯಮದಂತೆ ಆಗಿ ಬಿಟ್ಟಿದೆ. ಮೊದಲೆಲ್ಲಾ ಕೆಲವೇ ಕೆಲವು...

0

ಚೈತ್ರವಾದರೇನು.. ಶಿಶಿರ ಬಂದರೇನು..

Share Button

ಮಕ್ಕಳಿಗೆ ಬೇಸಿಗೆ ರಜೆ ಸಿಕ್ಕಿ ಅವರಿಗೀಗ ಬಿಡುವಿನ ಕಾಲ. ಹೊತ್ತಾರೆ ಗಡಬಡಿಸಿ ಎದ್ದು ಹಲ್ಲುಜ್ಜುವ ಶಾಸ್ತ್ರ ಮುಗಿಸಿ ತೂಕಡಿಸುತ್ತಾ ಓದಲಿಕ್ಕೆ ಕೂರಬೇಕಿಲ್ಲ.ಲಗುಬಗೆಯಿ೦ದ ತಿ೦ಡಿ ತಿ೦ದು ಶಾಲೆಗೆ ಹೊರಡುವ ತರಾತುರಿಯಿಲ್ಲ.ಬೆಳಗ್ಗೆ ಏಳೋಕು ಅವರದೇ ಸಮಯ ,ಮಲಗೋಕು ಅವರದೇ ಸಮಯ.ಯಾರ ಮುಲಾಜಿಯಾಗಲಿ ಹೆದರಿಕೆಯಾಗಲಿ ಅವರಿಗಿಲ್ಲ.ಇಷ್ಟು ದಿನ ಟ್ಯೂಷನ್, ಓದು ,...

1

ಕವಿತೆಯಾಗು ಮನವೇ..

Share Button

ಈ ಕವಿತೆಗೂ ನಮಗೂ ಅದೆಂಥಾ ಅನುಬಂಧ ಅಂತೀರಿ..?ಕವಿತೆಯನ್ನ ಇಷ್ಟ ಪಡದವರೇ ಇಲ್ಲವೆನ್ನಬಹುದು.ಕವಿತೆಯೆಂದರೆ ಎಲ್ಲರಿಗೂ ಎಲ್ಲಿಲ್ಲದ ಅಕ್ಕರೆ.ಎಲ್ಲಾ ಬಿಡಿ,ಸಾಹಿತ್ಯದ ಗಂಧ ಗಾಳಿಯೇ ಇಲ್ಲದವರ ಮುಂದೆಯೂ ಕವಿತೆ ಓದಿ ನೋಡಿ.ಅವರಿಗೆ ಅರ್ಥವಾಗದಿದ್ದರೂ ಮಿಕಿ ಮಿಕಿ ನೋಡುತ್ತಾ ಕೇಳುವ ವ್ಯವಧಾನವಿದೆ.ದೊಡ್ಡ ದೊಡ್ಡ ಗಂಭೀರ ಲೇಖನ,ಪುಟಗಟ್ಟಲೆ ಪ್ರಬಂಧ,ಒಂದು ಪುಸ್ತಕಕ್ಕಾಗುವಷ್ಟು ನಾವು ಕಥೆ ಬರೆದರೂ...

4

ತಾರಕ್ಕ ಬಿಂದಿಗೆ

Share Button

ಮೊನ್ನೆ ಕೈ ಕೊಟ್ಟ ಕರೆಂಟು ಮೂರು ದಿನ ಆದರೂ ನಾಪತ್ತೆಯಾದಾಗಲೇ ಅದರ ಬಿಸಿ ತಟ್ಟಿದ್ದು.ನಲ್ಲಿ ತಿರುಗಿಸಿದರೆ ಸಾಕು ಭರ್ರೋ ಎಂದು ಪವಾಡದಂತೆ ಸುರಿಯುತ್ತಿದ್ದ ನೀರು,ಇದೀಗ ಬಿಕ್ಕಳಿಸಿ ಬಿಕ್ಕಳಿಸಿ ಕಣ್ಣ ಹನಿ ಉದುರಿಸುತ್ತಾ ಮೆಲ್ಲನೆ ಅಳೋಕೆ ಶುರು ಮಾಡಿದಾಗಲೇ ಕೊಂಚ ಭಯ ಹುಟ್ಟಿದ್ದು.ಇನ್ನೇನು ಮಾಡುವುದು?.ಯಾವುದೋ ಒಂದು ಬಲವಾದ ನಂಬಿಕೆ.ಮನೆಯಲ್ಲಿ...

0

ಪಾದುಕ ಪ್ರಸಂಗ

Share Button

ಬರಿಗಾಲಲ್ಲಿ ನಡೆಯುವ ಕಾಲದ ಅಧ್ಯಾಯ ಅದು ಯಾವಾಗಲೋ ಸಂದು ಓಬಿರಾಯನ ಕಾಲವಾಯಿತೋ ಏನೋ. ಈಗ ಪಾದಕ್ಕೊಂದು ಪಾದುಕೆ ಬೇಕೇ ಬೇಕು. ಇನ್ನೂ ಸರಿಯಾಗಿ ನಡೆಯಲು ಬಾರದ ಎಳೆ ಪಾಪುವಿನ ಗುಲಾಬಿ ಬಣ್ಣದ ಪಾದಕ್ಕೆ ಕೂಡ ಗೊಂಬೆ ಗೊಂಬೆ ಚಿತ್ರದ ಪಾದುಕೆ ತೊಡಿಸಿ ಸಂಭ್ರಮಿಸುತ್ತಾರೆ.ಹಾಗಾಗಿ ಪಾದುಕೆಯೊಂದು ಪಾದದ ಅನಿವಾರ್ಯತೆಯೋ...

Follow

Get every new post on this blog delivered to your Inbox.

Join other followers: