ನೀನೆನ್ನ ಗುರು..
ನುಡಿಕಲಿಸಿ ನಗಿಸಿ
ತಾಳ್ಮೆಯಿಂದಲಿ ತಿದ್ದಿತೀಡಿದ
ಅಕ್ಕರೆಯ ಅಮ್ಮ
ನೀನೆನ್ನ ಗುರುವು
ಎಡರು ತೊಡರುಗಳ ದಾಟಿ
ಚಿಂತನ ಮಂಥನ ಮಾಡಿ
ಚಲಿಸುವ ನಡಿಗೆ ಕಲಿಸಿದ ಅಪ್ಪ
ನೀನೆನ್ನ ಗುರುವು
ಶಿಕ್ಷಣದ ಶಕ್ತಿಯಿಂದಲಿ
ಅಕ್ಷರಗಳ ಅರ್ಥಕಲಿಸಿ
ಜ್ಞಾನ ದೀವಿಗೆಯ ಜ್ಯೋತಿ ಹಚ್ಚಿ
ಬುದ್ದಿ ಬೆಳಕನಿತ್ತು
ವಿದ್ಯೆ ಕಲಿಸಿದವರು
ನೀವೆನ್ನ ಗುರುವು
ಬದುಕಿನಾದಿಯಲಿ ಬೆರೆತೆನು
ಹಲವರೊಳು ಕಲಿತಿಹೆನು
ಅವರೊಳು ಅರಿವಿಲ್ಲದೆ ಕಲಿಸಿಹರು ಹಲವರು
ಅವರೆನ್ನ ಗುರುವು
– ತನುಜಾ, ಮೈಸೂರು
ಬದುಕಿನಲ್ಲಿ ಬಂದು ಕೈ ಹಿಡಿದು ನೆಡೆಸಿದ ಎಲ್ಲಾ ಗುರುಗಳಿಗೆ ತೋರಿದ ಗುರುವಂದನೆಯು ಕವನ ಚೆನ್ನಾಗಿದೆ ಮೂಡಿ ಬಂದಿದೆ
ಮನೆಯೇ ಮೊದಲ ಪಾಠ ಶಾಲೆ, ಅಮ್ಮ ತಾನೇ ಮೊದಲ ಗುರು.
ಚಂದದ ಕವನ
ಕಲಿಕೆಯೆಂಬುದು ನಿರಂತರ ನಡೆಯುವ ಪ್ರಕ್ರಿಯೆ. ಹೊಸತನ್ನು ಕಲಿಸುವವರೆಲ್ಲರೂ ಗುರುಸಮಾನರು. ಸಕಾಲಿಕ ಸುಂದರ ಕವನ.
ತುಂಬಾ ಚೆನ್ನಾಗಿದೆ. ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ
Nice One