ನೀನೆನ್ನ ಗುರು..
ನುಡಿಕಲಿಸಿ ನಗಿಸಿ ತಾಳ್ಮೆಯಿಂದಲಿ ತಿದ್ದಿತೀಡಿದ ಅಕ್ಕರೆಯ ಅಮ್ಮ ನೀನೆನ್ನ ಗುರುವು ಎಡರು ತೊಡರುಗಳ ದಾಟಿ ಚಿಂತನ ಮಂಥನ ಮಾಡಿ ಚಲಿಸುವ ನಡಿಗೆ ಕಲಿಸಿದ ಅಪ್ಪ ನೀನೆನ್ನ ಗುರುವು ಶಿಕ್ಷಣದ ಶಕ್ತಿಯಿಂದಲಿ ಅಕ್ಷರಗಳ ಅರ್ಥಕಲಿಸಿ ಜ್ಞಾನ ದೀವಿಗೆಯ ಜ್ಯೋತಿ ಹಚ್ಚಿ ಬುದ್ದಿ ಬೆಳಕನಿತ್ತು ವಿದ್ಯೆ ಕಲಿಸಿದವರು ನೀವೆನ್ನ ಗುರುವು...
ನಿಮ್ಮ ಅನಿಸಿಕೆಗಳು…