ಕೊರೋನಾ ಗೆ ಹೆದರಬೇಡ ಜಾಗೃತಿಯಿಂದಿರು..
ಕೊರೋನಾಗೆ ಹೆದರಿ ತಾಯಿಯ ಮಡಿಲಲ್ಲಿ ಬಚ್ಚಿಟ್ಟುಕೊಂಡು, ಮೈಚಳಿಬಿಟ್ಟು ಹೊರಗೆಲ್ಲೂ ಹೋಗದೆ. ಮನೆಯೊಳಗೇ ಬಂಧಿಯಾದಂತ ಅನುಭವದಲ್ಲಿರುವ ಮಕ್ಕಳಿಗೆ, ವಿದ್ಯಾಗಮ ಶಾಲೆಯೊಂದು ಮನಸೆಳೆದು ಸಂತಸ ನೀಡಿತು. ಪ್ರತಿಯೊಬ್ಬ ಶಿಕ್ಷಕರು ಕೊರೋನಾ ಬಗ್ಗೆ ಭಯವಿದ್ದರೂ, ತೋರ್ಪಡಿಸದೆ ಎಚ್ಚರಿಕೆಯಿಂದ ಮಕ್ಕಳ ಮನೆ ಮನೆ ಭೇಟಿ ಮಾಡಿ, ವಿದ್ಯಾಗಮ ಶಾಲೆಗೆ ಸಜ್ಜುಗೊಳಿಸಿದರು.
ಮಕ್ಕಳಿರುವಲ್ಲೇ ಒಂದು ವ್ಯವಸ್ಥಿತವಾದ ಜಾಗ ಗೊತ್ತು ಪಡಿಸಿ, ಸ್ಯಾನಿಟೈಸರ್ ಮಾಡಿ, ವಿದ್ಯಾಗಮ ಶಾಲೆಯನ್ನು ಪ್ರಾರಂಭಿಸಿದರು. ಕೊರೋನ ಬಗ್ಗೆ ಭಯ ಬೇಡ, ಎಚ್ಚರವಿರಲಿ ಸ್ವಚ್ಛತೆಯ ಕಡೆಗೆ ಗಮನವಿರಲಿ ಎಂದು ತಿಳಿಸಿ ಜಾಗೃತಿಯ ನಿಯಮಗಳನ್ನು ತಿಳಿಸಲಾಯಿತು. ಶಿಕ್ಷಕರ ಆದೇಶದಂತೆ ಮಕ್ಕಳೂ ಸಹ ಮಾಸ್ಕ ಧರಿಸಿ, ಅಂತರ ಕಾಯ್ದುಕೊಂಡು, ಕಲಿಕೆಯತ್ತ ಗಮನ ಹರಿಸಿದರು. ಕೂಡಿ ಆಡಬೇಕಾದ, ಗುಂಪು ಚಟುವಟಿಕೆಯಲ್ಲಿ ಪಾಲ್ಗೊಂಡು ಸಂತಸ ಪಡಬೇಕಾದ ಮಕ್ಕಳು, ವಿದ್ಯಾಗಮ ತರಗತಿಯಲ್ಲೂ ಕಲಿತು, ಮನೆಗೆ ಕೊಟ್ಟ ಗೃಹ ಪಾಠದ ಚಟುವಟಿಕೆಗಳನ್ನು ಹೆತ್ತವರ ಸಹಾಯದೊಂದಿಗೆ ಮಾಡಿ ಸಂತಸ ಪಟ್ಟರು. ಈ ಕಲಿಕೆ ಕಷ್ಟವಾದರೂ ಸ್ಪಷ್ಟವಾಯಿತು, ಮಕ್ಕಳಿಗೂ ಇಷ್ಟವಾಯಿತು. ಶಿಕ್ಷಕರ ಶ್ರಮ ಫಲಿಸಿತು.
ಸಕಾಲಿಕ ಬರಹ ಚೆನ್ನಾಗಿದೆ.ಅಭಿನಂದನೆಗಳು.
ಹೌದು, ಈ ವಿಚಾರದಲ್ಲಿ ಪ್ರತಿಯೊಬ್ಬ ಶಿಕ್ಷಕರದ್ದೂ ಒಂದು ಸಾಧನೆ ಯೇ ಸರಿ
ಹೌದು..ಇದನ್ನು ಪೇಪರಲ್ಲಿ ಓದಿದ್ದೆ. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಿ, ಅವರು ಇರುವೆಡೆಗೆ ಹೋಗಿ ಕಲಿಸುವಂತಹ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗುರುವೃಂದಕ್ಕೆ ನಮ್ಮೆಲ್ಲರ ನಮನ.
ವಠಾರ ಶಾಲೆ ಮಾಡುವ ಶಿಕ್ಷಕರ ಸೇವೆಗೆ ಶರಣು