ಸುವರ್ಣನಗರದ ಸಿರಿ..
ಈ ದಿನಗಳಲ್ಲಿ, ವಿವಿಧ ನೂತನ ವಿನ್ಯಾಸಗಳಲ್ಲಿ ನಿರ್ಮಿಸಲಾದ ಅಂದವಾದ ಮಂದಿರಗಳನ್ನು ನೋಡಿದ್ದೇವೆ. ಆದರೆ, ಇದೀಗ ಲೋಕಾರ್ಪಣೆಗೊಂಡ, ಪುರಾತನ ಶೈಲಿಯ ಅಧುನಿಕ ಶಿಲಾಮಯ ದೇಗುಲಕ್ಕೆ ಭೇಟಿ ಕೊಡಬೇಕೆ? ಹೀಗೆ ಬನ್ನಿ. ಮೈಸೂರಿನ ಹೊರವಲಯದಲ್ಲಿರುವ ವರ್ತುಲರಸ್ತೆಯನ್ನು ದಾಟಿ, ಬೋಗಾದಿ-ಗದ್ದಿಗೆ ರಸ್ತೆಯಲ್ಲಿ ಅಂದಾಜು 4 ಕಿ.ಮೀ ನಷ್ಟು ದೂರ ಬಂದು, ಎಡಗಡೆಗೆ ‘ಸುವರ್ಣನಗರ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುವ ದಾರಿ’ ಎಂಬ ರಸ್ತೆಸೂಚಕವನ್ನು ಅನುಸರಿಸುತ್ತಾ ಬಂದರೆ ವಿಶಾಲವಾದ ಬಡಾವಣೆಯಲ್ಲಿ ನಿರ್ಮಿಸಲಾದ ಭವ್ಯವಾದ ಶಿಲಾದೇಗುಲ ಕಾಣಿಸುತ್ತದೆ.
ಮೆಟ್ಟಿಲುಗಳುಳ್ಳ ಸುಂದರವಾದ ಕಲ್ಲಿನ ಪ್ರಾಕಾರವನ್ನು ದಾಟಿ ದೇವಾಲಯದ ಒಳಗೆ ಬಂದಾಗ, ಪ್ರಾಚೀನ ಶಿಲಾ ದೇಗುಲಗಳಲ್ಲಿ ಇರುವಂತಹ ಶಿಲಾ ವಾತಾಯನ ರಂಧ್ರಗಳು, ಕರಾವಳಿಯ ದೇವಾಲಯಗಳ ಮಾದರಿಯ ಕಲ್ಲಿನ ಮುಖಮಂಟಪ ಹಾಗೂ ಕಟ್ಟೆಯುಳ್ಳ ಪುಟ್ಟ ಬಾವಿಯನ್ನು ಗಮನಿಸಿ ಬೆರಗಾಗುತ್ತೇವೆ. ಇಲ್ಲಿಯ ಗರ್ಭಗುಡಿಯಲ್ಲಿ ಲಿಂಗಸ್ವರೂಪಿಯಾಗಿ ಚಾಮುಂಡೇಶ್ವರಿ ದೇವಿ ವಿರಾಜಮಾನಳಾಗಿದ್ದಾಳೆ. ದೇವಿಗೆ ನಮಿಸಿ ಪ್ರದಕ್ಷಿಣೆ ಮಾಡುವಾಗ ಪರಿವಾರ ದೇವತೆಗಳಾದ ಬಾಲಗಣಪತಿ, ಸುಬ್ರಹ್ಮಣ್ಯ ಹಾಗೂ ಪ್ರಸನ್ನ ಆಂಜನೇಯಸ್ವಾಮಿಯರ ಗುಡಿಗಳನ್ನೂ ಕಾಣಬಹುದು.
ಲಭ್ಯ ಮಾಹಿತಿ ಪ್ರಕಾರ, 1500 ವರ್ಷಗಳ ಹಿಂದೆ ಅವಧೂತ ಪರಂಪರೆಯ ಋಷಿಯೊಬ್ಬರು ‘ಗೋಹಳ್ಳಿ’ ಎಂದು ಕರೆಯಲ್ಪಡುವ ಈ ಜಾಗದಲ್ಲಿ, ಲಿಂಗಸ್ವರೂಪಿಯಾದ ಚಾಮುಂಡೇಶ್ವರಿಯನ್ನು ಸ್ಥಾಪಿಸಿ ಸಣ್ಣ ಗುಡಿಯಲ್ಲಿಟ್ಟು ಆರಾಧಿಸಿದ್ದರು. ಕಾಲಾನಂತರದಲ್ಲಿ ಆ ಗುಡಿಯು ನಿರ್ವಹಣೆ ಇಲ್ಲದೆ ಸೊರಗಿತ್ತು. ಮರವೊಂದರ ಕೆಳಗೆ ಇದ್ದ ಆ ಲಿಂಗವನ್ನು ಸ್ಥಳೀಯ ಗ್ರಾಮಸ್ಥರು ತಮ್ಮದೇ ಶೈಲಿಯಲ್ಲಿ ಪೂಜಿಸುತಿದ್ದರು. ಮುಂದೊಂದು ದಿನ, ಹಾಸನದ ಕಡೆಯಿಂದ ಬಂದ ‘ಬಸವ’ದೇವರನ್ನು ಬಡಾವಣೆಗೆ ಬರಮಾಡಿಕೊಂಡು ಪ್ರಾರ್ಥಿಸಿದಾಗ, ಬಸವ ತೋರಿಸಿದ ಜಾಗದಲ್ಲಿ ಅವಧೂತರ ಸಮಾಧಿ ಕಾಣಿಸಿತು. ಆ ‘ಬಸವ’ ಲಿಂಗಸ್ವರೂಪಿಯಾಗಿರುವ ಚಾಮುಂಡೇಶ್ವರಿಯ ಸುತ್ತಲೂ ಪ್ರದಕ್ಷಿಣೆ ಬಂದು ದೈವಿಕ ನೆಲೆಯನ್ನೂ ಗುರುತಿಸಿತ್ತು. ಆಮೇಲೆ, ದೀಪಾ ಗೃಹನಿರ್ಮಾಣ ಸಹಕಾರ ಸಂಘದ ಆಸ್ತಿಕರ ಪ್ರಯತ್ನದ ಫಲವಾಗಿ, ಪ್ರಸ್ತುತ ಕಾಣುವ ದೇವಾಲಯವನ್ನು ನಿರ್ಮಿಸಲಾಗಿದೆ.
2010 ರಲ್ಲಿ, ಇಲ್ಲಿ ಹೊಸ ಬಡಾವಣೆಯನ್ನು ನಿರ್ಮಿಸುವ ಸಲುವಾಗಿ ಕಾರ್ಯನಿರತವಾಗಿದ್ದ ಮೈಸೂರಿನ ದೀಪಾ ಗೃಹ ನಿರ್ಮಾಣ ಸಹಕಾರ ಸಂಘದ ತೀರ್ಮಾನದ ಫಲಶ್ರುತಿಯಾಗಿ, ಅದೇ ಸಂಘದ ಇನ್ನೊಂದು ಘಟಕವಾದ ಶ್ರೀ ಗೋಕರ್ಣನಾಥೇಶ್ವರ ಟ್ರಸ್ಟ್ ನವರು, ಈ ದೇವಾಲಯದ ನಿರ್ಮಾಣವನ್ನು ಆರಂಭಿಸಿದರು. ಮಂದಿರದ ನಿರ್ಮಾಣವು ಸಂಪೂರ್ಣವಾದ ಮೇಲೆ, 2018 ರ ಎಪ್ರಿಲ್ ತಿಂಗಳಿನಲ್ಲಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸಿದರು, ಅಂದಿನಿಂದ ಇಲ್ಲಿ ದೇವತಾರಾಧನೆ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಸಂಪೂರ್ಣ ಶಿಲಾಮಯವಾದ ಈ ದೇವಾಲಯದ ಸುತ್ತಲೂ ವಿಶಾಲವಾದ ಪ್ರಾಂಗಣವಿದೆ. ಒಟ್ಟಿನಲ್ಲಿ, ಮೈಸೂರಿನ ಮಟ್ಟಿಗೆ ಬಲು ಅಪರೂಪ ಎನ್ನಬಹುದಾದ ಕರಾವಳಿ ಶೈಲಿಯ ಮಂದಿರವಿದು.
ಇನ್ನೂ ಹೊಸ ಬಡಾವಣೆಯಾದುದರಿಂದ ‘ಸುವರ್ಣನಗರವು’ ಮೈಸೂರಿನಲ್ಲಿಯೇ ಬಹಳಷ್ಟು ಮಂದಿಗೆ ಅಪರಿಚಿತವಾಗಿದ್ದು, ಈ ದಿನಗಳಲ್ಲಿ ಇಲ್ಲಿಯ ಚಾಮುಂಡೇಶ್ವರಿ ಕ್ಷೇತ್ರವು ತನ್ನ ಭವ್ಯತೆಯಿಂದ ಆಸ್ತಿಕರನ್ನು ಸೆಳೆಯುತ್ತಿದೆ. ಜನದಟ್ಟಣೆಯಿಲ್ಲದ ಈ ಸ್ಥಳವು ಶಾಂತವಾಗಿದ್ದು, ಆಸ್ತಿಕ ಮನಸ್ಸಿನ ದೈವಾನುಭೂತಿಗೆ ಪೂರಕವಾಗಿದೆ.
– ಹೇಮಮಾಲಾ.ಬಿ. ಮೈಸೂರು
ಸುವರ್ಣನಗರದ ಸಿರಿದೇವಿಯ ದರುಶನ ಭಾಗ್ಯವು ಎಲ್ಲರಿಗೂ ಸಿಗುವಂತಾಗಲಿ. ಉತ್ತಮ ಮಾಹಿತಿಗೆ ಧನ್ಯವಾದಗಳು..
ದೇಗುಲದ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದ್ದೀರಿ ..ಧನ್ಯವಾದಗಳು .
ಬಹಳ ಉತ್ತಮ ಮಾಹಿತಿ. ದೇವಾಲಯದ ಚಿತ್ರಗಳು ನಮ್ಮ ಊರಾದ ಕಾಸರಗೋಡಿನ ಹಲವು ದೇಗುಲಗಳನ್ನು ನೆನಪಿಗೆ ತಂದಿತು.
Very good temple for a very good lay out.
Definitely everybody should visit
ವಿವರಣೆ ಚಿಕ್ಕದಾದರೂ ಚೂಕ್ಕವಾಗಿ ಬಂದಿದೆ. ದೇವಾಲಯಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚುವಸಾಧ್ಯತೆ ಇದೆ.
ಸೋಮಶೇಖರ್
ಧನ್ಯವಾದಗಳು
ಬರಹವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..
Very nice information
Thank you
Very beautiful temple with fine sculpture.
Godesses chamundeshwari bless all and give dharshan to all devoties.
ತುಂಬಾ ಸಂತೋಷ ಆಯಿತು.
ದೇವಾಲಯಕ್ಕೆ ಆದಷ್ಟೂ ಬೇಗ ಹೋಗಿರಬೇಕು ಅಂದುಕೊಂಡಿದ್ದೇನೆ
ತಮ್ಮ ಬರವಣಿಗೆ ಆಕಷ್ರಣೀಯವಾಗಿದೆ ಹೆಮಮಾಲಾ ಅವರಿಗೆ ಧನ್ಯವಾದಗಳು
ಸುಂದರ ದೇವಾಲಯ ನನ್ನ ಇಷ್ಟರ್ತಗಳನ್ನು ಆಶೀರ್ವದಿಸಿದ ಶ್ರೀ ಚಾಮುಂಡೆಶ್ವರಿ ತಾಯಿ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ನಿಮ್ಮ ಇಷ್ಟರ್ತ ನೇರವೇರುತ್ತದೆ
ಸುಂದರ ದೇವಾಲಯ. ನನ್ನ ಇಷ್ಟಾರ್ಥವನ್ನು ನೆರವೇರಿಸಿ ಆಶೀರ್ವದಿಸಿದ ಶ್ರೀ ಚಾಮುಂಡೇಶ್ವರಿ ತಾಯಿ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ.
ಧನ್ಯವಾದಗಳು
ಮನಶ್ಶಾಂತಿಗೆ ಮತ್ತು ದೇವರ ಧ್ಯಾನಕ್ಕೆ ಪ್ರಶಾಂತವಾದ ಸ್ಥಳ.
When temple annual Utsav sir. Send 2,3 photos of utsva sir
ನಾನು ಆದಷ್ಟು ಬೇಗ ದರ್ಶನ ಪಡೆಯಲು ಕಾತರ ಪಡುತ್ತಿದ್ದೇನೆ
Very peaceful and beautiful temple. The positive vibration were too good. I got an opportunity to visit this temple because of my friend’s son’s wedding. She was very particular to do it in this temple only. A big thanks to her . Thanks to Sri Srinivas Acharya sir for explaining the history of this temple.
We felt so happy and shanti when we went there.moreover Godess Chamundeshwari is so beautiful. Apart from kama kameshwari temple of Ramanuja road here I got shanti.thank you for the people who put their effort to build such a good temple.
Very beautiful place
ಇದು ನಮ್ಮ sbm ಬಡಾವಣೆ ಬೋಗಾದಿ ಬಡಾವಣೆಗೆ ತುಂಬಾ ಹತ್ತಿರದ ದೇವಸ್ಥಾನ. ತುಂಬಾ ವಿಶಾಲವಾದ ಜಾಗದಲ್ಲಿ ಸುಂದರ ಹಾಗೂ ಪ್ರಶಾಂತವಾದ ಮನಸ್ಸಿಗೆ ನೆಮ್ಮದಿ ನೀಡುವ ಚಾಮುಂಡೇಶ್ವರಿ ತಾಯಿ ಗಣೇಶ ಮಾರುತಿ ನವಗ್ರಹ ಎಲ್ಲವೂ ಇದೆ.. ನಾವು ಪ್ರಾರಂಭ ಅದಾಗಿನಿಂದ ಹೋಗುತೇವೆ. ಇಲ್ಲಿ ತಾಯಿ ಚಾಮುಂಡೇಶ್ವರಿಯ vardanthi ಜನ್ಮ ದಿನ ಆಷಾಡ ಶುಕ್ರವಾರ ಪೂಜೆ ನಡೆಯುತ್ತದೆ.. ನಮಗೆ ಕರೋನ ಸಮಯದಲ್ಲಿ ಇಲ್ಲಿಗೆ ಹೋಗುತಿದ್ದೆವು. ಇದು ಇನ್ನು ಪ್ರಶಾಂತವಾಗಿದೆ. ಜನಜಂಗೂಲಿ ಶಬ್ದ ಮಾಲಿನ್ಯವಿಲ್ಲ.. ಎಲ್ಲರೂ ತಾಯಿ ದರ್ಶನ ಮಾಡಿ ಪುನೀತರಾಗಿ.