ಹುಟ್ಟು
ಧ್ವನಿ ತಟ್ಟೆಯಲ್ಲಿ ಹಾಡಿನ
ಜಾಡು ಕೊರೆದಿದೆ..
ಕಂಪಿಸುವ ಮುಳ್ಳು
ತಟ್ಟೆ ತಿರು ತಿರುಗಿದಂತೆಲ್ಲ
ಅದೇ ಜಾಡುಗಳಲ್ಲಿ ಮುಳ್ಳು
ಚಲಿಸಿ ..ಎದೆ ಗೀರಿ ಸೀಳಿ
ಹೊಮ್ಮುವ ಹಾಡು ..
ನೀನು ಕೇಳುತ್ತೀ –
ನಿನ್ನ ಹಾಡಿನಲ್ಲಿ
ಯಾಕೆ ಅಲುಗಿಸುವ
ಯಾತನೆ..
ಮುಳ್ಳು, ಕಂಪನ ಮತ್ತು
ಎದೆಯ ಗಾಯವಿರದೆ
ಹಾಡು ಹೊಮ್ಮೀತು ಹೇಗೆ ..?
– ಗೋವಿಂದ ಹೆಗಡೆ
ಕವನ ಇಷ್ಟವಾಯಿತು
ಹೆಗಡೆಯವರೆ ವಾಟ್ಸ್ ಆಪ್ ಗೆ ಕವಿತೆ ಹಾಕಿ
ಕವಿತೆ ಚೆನ್ನಾಗಿದೆ