Daily Archive: August 3, 2017
ಬೆಂದಕಾಳೂರಿನಲಿ ಬೆಚ್ಚಗಿರಲಿಲ್ಲವಳು ಬೇನೆಯ ಬದುಕಿನವಳು ನಮ್ಮ ಕಡಲೂರಿನವಳು ಬಿಸಿಲು ಎಂದೇನಲ್ಲ ಬಿರುಮಾತಿನಲ್ಲವಳು ಬಾಯಾರಿದ ಬೆಡಗಿ ನಮ್ಮ ಕಡಲೂರಿನವಳು ಬದುಕು ಕಟ್ಟಲೆಂದು ಬಂದಿದ್ದಳಿಲ್ಲಿಗವಳು ಬಾಣಲೆಬಿಸಿಗೆ ಬೆದರಿದಳು ನಮ್ಮ ಕಡಲೂರಿನವಳು ಬಾಗಿಲನು ತೆರೆಯುತ ಬಾಗುತ ಮುಗಿವವಳು ಭಾಗ್ಯವನರಸುವ ಹೆಣ್ಣು ನಮ್ಮ ಕಡಲೂರಿನವಳು ಬೇಗೆಗೆ ಬೆಚ್ಚೇಳುತ ಬಸವಳಿದಳವಳು ಭರವಸೆಗೆ ಸಾಕ್ಷಿ ಕಂಗಳು...
ಮನುಷ್ಯನನ್ನು ಅವನ ಮಾತೃ ಭಾಷೆಯು ಹಿಡಿದುಕೊಂಡಿರುವಂತೆ ಬೇರೆ ಯಾವುದೂ ಹಿಡಿದುಕೊಂಡಿರುವುದಿಲ್ಲ. ತಾಯಿಯ ಸ್ತನ್ಯಪಾನದೊಂದಿಗೆ ಹರಿದುಬಂದ ಅದು ಅವನ ಉಸಿರಿನಲ್ಲಿ ಇರುವವರೆಗೂ ಉಳಿದುಕೊಂಡಿರುತ್ತದೆ ಇದು ಅಪರಿಚಿತರನ್ನು ಸಮೀಪ ತರುತ್ತದೆ. ಒಬ್ಬರನ್ನೊಬ್ಬರನ್ನು ಆಕರ್ಷಿಸುವಂತಹ ಚುಂಬಕ ಶಕ್ತಿ ಅದಕ್ಕಿದೆ.ಜೀವವು ದೇವರ ವರದಾನವಾದರೆ ಭಾಷೆಯು ತಾಯಿದೇವರ ವರದಾನ. ಮನುಷ್ಯ ಉಪಯೋಗಿಸುವ ಭಾಷೆ...
‘ಧೋ’ ಎಂದು ಜಡಿಮಳೆ ಸುರಿದು ಭೂಮಿ ತಾಂಪಾಗಿರುವ ಈ ಕಾಲದಲ್ಲಿ, ವರ್ಷ ಧಾರೆಯಲ್ಲಿ ಮಿಂದು ಮೈ ಮನಸ್ಸು ಮಿದುವಾಗಿರುವ ಈ ಸುಂದರ ಪರಿಸರದಲ್ಲಿ, ಮಳೆ, ಇಳೆ, ಪ್ರಕೃತಿ .. ಹೀಗೊಂದು ಪುಟ್ಟ ಲಹರಿ. ಮಳೆಗೂ ಮನಸ್ಸಿಗೂ ಅವಿನಾ ಭಾವ ಸಂಬಂಧ. ನೋಟ್ ಬುಕ್ಕಿನ ಕೊನೆಯ ಪೇಜಿನಲ್ಲಿ ಹದಿಹರಯದಲ್ಲಿ...
ನನ್ನೊಳಗೆ ಸೆರೆಯಾಗಿ ಅವಿತಿರುವೆ ಏಕೆ ಹೊರಬಂದು ವಿಹರಿಸು ಸ್ವಚ್ಛಂದವಾಗಿ ಸ್ವತಂತ್ರನಲ್ಲವೆಂಬ ಭಯವೇಕೆ ಓ ಭಾವವೇ ಹರಿದುಹೋಗೊಮ್ಮೆ ನದಿಯಾಗಿ ನನ್ನ ನಿನ್ನ ನಡುವೆ ಭೇದವೆನೆಣಿಸದಿರು ಕಡಿದು ಹೋದೀತು ಸ್ನೇಹದ ಕೊಂಡಿ ವಿಧಿವಿಲಾಸಕೆ ಸುಮ್ಮನೆ ಬಲಿಯಾಗದಿರು ತೋಡದಿರು ಕಂದಾಚಾರದ ಗುಂಡಿ ಲೋಕಮಾನ್ಯವಾಗುವ ಆಸೆಯಿಲ್ಲವೆ ನಿನಗೆ ಈಜಿ ದಡಸೇರು ಕೈ...
ಪರಂಜ್ಯೋತಿ ಪರಮಾತ್ಮ ನಡೆಸು ಕೈ ಹಿಡಿದು ಕಷ್ಟಗಳ ಮೆಟ್ಟಿನಿಲೆ ಧೈರ್ಯ ತುಂಬುವುದು II ಸದ್ಗುಣಗಳೇ ಬರಲಿ ಎಲ್ಲೆಡೆಯು ಹರಿದು ಸತ್ಕರ್ಮ ಸಂಪ್ರೀತಿ ವೈಮನಸು ಮುರಿದುII ನಾವೆಲ್ಲ ಬಂಧುಗಳು ಪ್ರೀತಿಯೇ ಬದುಕು ಕರುಣಾಳು ಈ ಪಥದಿ ನೀ ನೀಡು ಬೆಳಕುII . -ಶಂಕರಿ ಶರ್ಮ ಪುತ್ತೂರು. +4
ಜೈಸಲ್ಮೇರ್ ನಗರವು ರಾಜಸ್ಥಾನ ರಾಜ್ಯದ ಪಶ್ಚಿಮ ಭಾಗದಲ್ಲಿದೆ. ಅಪ್ಪಟ ಮರುಭೂಮಿ ಪ್ರದೇಶವಾದ ಇಲ್ಲಿಂದ 120 ಕಿ. ಮಿ. ದೂರದಲ್ಲಿ ಪಾಕಿಸ್ಥಾನದ ಸೀಮಾರೇಖೆ ಇದೆ. ರಜಪೂತರು, ಮೊಘಲರು ಆಳಿದ ಈ ನಗರದಲ್ಲಿ ಹಳದಿ ಬಣ್ಣದ ಕಲ್ಲಿನಿಂದ ಕಟ್ಟಲಾದ ಹವೇಲಿಗಳು ಹಾಗೂ ಥಾರ್ ಮರುಭೂಮಿಯ ಮರಳುದಿಬ್ಬಗಳು ಮುಖ್ಯ ಪ್ರವಾಸಿ ಆಕರ್ಷಣೆ....
1969 ನೇ ಇಸ್ವಿ ಬಹುಶಃ ನವಂಬರ್,ಡಿಸೆಂಬರ್ ತಿಂಗಳಿರಬಹುದು.ಆಗ ನಾನು ಹಿಮಾಚಲ ಪ್ರದೇಶದ ಖನೇಟಿಯ ಹೈಸ್ಕೂಲೊಂದರಲ್ಲಿ ಹೆಡ್ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಜೆರೊಲ್ ಎಂಬ ದೊಡ್ಡ ಊರು ..ಅಲ್ಲಿಂದ 3000 ಅಡಿ ಕೆಳಗಿಳಿದರೆ ಖನೇಟಿ. ಅಲ್ಲಿದ್ದ ಎಂಟು – ಹತ್ತು ಜನ ‘ಹಾಟು ಶಿಖರದ’ ಚಾರಣಕ್ಕೆ ಹೋಗುವದೆಂದು...
ನಿಮ್ಮ ಅನಿಸಿಕೆಗಳು…