ಬೆಳಕು-ಬಳ್ಳಿ

ಪರಿಸರ ರಕ್ಷಣೆ ಮಾಡೋಣ

Share Button

ಗಿಡಗಳ ನೆಟ್ಟು ಪೋಷಿಸಿ ಪೊರೆಯುತ
ಪರಿಸರ ರಕ್ಷಣೆ ಮಾಡೋಣ
ತಡೆಯುತ ನಮ್ಮಯ ಸುತ್ತಲ ಮಲಿನವ
ಶುದ್ಧದಿ ನಾವು ಬಾಳೋಣ//೧//

ಹಸಿರೇ ಉಸಿರು ಎಂಬುವ ತತ್ವವ
ನಂಬಿ ದಿನವೂ ಸಾಗೋಣ
ಭೂಮಿಯ ಒಡಲಿಗೆ ಕೇಡನು ಬಗೆಯದೆ
ಜೀವ ಜಾಲವ ಉಳಿಸೋಣ//೨//

ಪ್ಲಾಸ್ಟಿಕ್ ಎನ್ನುವ ಘನವಾದ ತ್ಯಾಜ್ಯವ
ಬಳಸದೆ ಬದುಕನು ಸಾಗಿಸುವ
ಪರಿಸರದಲ್ಲಿ ಹೊಗೆಯನು ಹರಡುವ
ವಾಯು ಮಾಲಿನ್ಯವ ತಡೆಯೋಣ//೩//

ಅನುದಿನ ನಮಗೆ ಪರಿಸರ ದಿನವು
ಎಂಬುದ ಜನರಿಗೆ ಅರುಹೋಣ
ವನಗಳ ಬೆಳೆಸಲು ನೀರನು ಉಳಿಸಲು
ಶಾಂತಿಯುಬದುಕಲಿ ಎನ್ನೋಣ//೪//

ಎಲೆಗಳು ಹಸಿರನು ಹೂಗಳು ಗಂಧವ
ಸೂಸಲು ಹಿತವು ಧರೆಯಲ್ಲಿ
ಸೊಂಪಿನ ಕಾಯ್ಗಳ ಮಾಗಿದ ಫಲಗಳ
ಕಾಣಲು  ಪಾವನ ಇಳೆಯಲ್ಲಿ//೫//

ನೆಟ್ಟಿಹ ಗಿಡಕೆ ನೀರು ಗೊಬ್ಬರ
ಹಾಕುತ ಸಂಪದ ಕಾಣೋಣ
ಸೊಂಪಲಿ ಬೆಳೆದ ಗಿಡಮರದಿಂದ
ಬಾಳಿನ ಸೊಗವನು ಪಡೆಯೋಣ//೬//

ಶುಭಲಕ್ಷ್ಮಿ  ಆರ್  ನಾಯಕ

4 Comments on “ಪರಿಸರ ರಕ್ಷಣೆ ಮಾಡೋಣ

  1. ಬಹಳ ಸೂಕ್ತ ಕವನ.
    ಪರಿಸರ ಸಂರಕ್ಷಣೆ ತುರ್ತು ಅಗತ್ಯ.
    ಮುಂದಿನ ಪೀಳಿಗೆಗೆ ನಾವು ಕೊಡಬೇಕಾದ ಆಸ್ತಿ

  2. ಪರಿಸರ ಪ್ರಜ್ಞೆ ಬೆಳೆಸುವ ಕವನ..ಚೆನ್ನಾಗಿ ದೆ ಮೇಡಂ

  3. ಪರಿಸರ ಕಾಳಜಿಯ ಹೊಂದಿರುವ ಕವನ ಲಯಬದ್ದವಾಗಿಯೂ ಸರಳವಾಗಿಯೂ ಹೆಣೆಯಲ್ಪಟ್ಠಿದೇ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *