Author: Shruthi Sharma M, shruthi.sharma.m@gmail.com
ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳು: ೧) ಕಪಾಲಭಾತಿ : “ಕಪಾಲಭಾತಿ” ಪ್ರಾಣಾಯಾಮದ ವರ್ಗದಲ್ಲಿ ಬರುವಂಥಹುದಲ್ಲ. ಇದು ಶ್ವಾಸ ಸುಧಾರಣೆಯ ಒಂದು ತಂತ್ರ. ಪ್ರಾಣಾಯಾಮಕ್ಕೆ ಮುನ್ನ ಶ್ವಾಸ ನಾಳಗಳನ್ನು ಸ್ವಚ್ಚಗೊಳಿಸಿ ಉಸಿರಾಟವನ್ನು ಲಯಬದ್ಧವಾಗಿಸುವಲ್ಲಿ ಸಹಕಾರಿ. ’ಕಪಾಲ’ ಅಂದರೆ ತಲೆ ಬುರುಡೆ, ಮತ್ತು ಅದರೊಳಗೆ ಇರುವ ಅಂಗಾಂಗಗಳು. ’ಭಾತಿ’ ಎಂದರೆ ಹೊಳೆಯುವುದು ಎಂಬರ್ಥ. ಕಪಾಲಭಾತಿಯ ನಿಯಮಿತ...
ಪ್ರಾಣಾಯಾಮ ತಂತ್ರಗಳನ್ನು ಅರಿಯುವ ಮುನ್ನ ತಿಳಿಯಬೇಕಾದ ಕೆಲವು ವಿಷಯಗಳು: “ಸ್ಥಿರಂ, ಸುಂ, ಆಸನಂ” – ಎಂದರೆ, ಸ್ಥಿರವಾಗಿ ಆರಾಮದಾಯಕವಾಗಿ ನಿಧಾನವಾಗಿ ಆಸನಾಭ್ಯಾಸಗಳನ್ನ್ನು ಮಾಡಬೇಕು. ಆಸನಗಳನ್ನು ಹಾಕುವಾಗ ಅಥವಾ ಪ್ರಾಣಾಯಾಮ ಮಾಡುವಾಗ ಉದ್ವೇಗಕ್ಕೆಡೆಕೊಡಬಾರದು, ಮತ್ತು ಸತತ ಅಭ್ಯಾಸಗಳಿಂದ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ. ಪೂರಕ: ಉಚ್ವಾಸ – Inhale...
ಪ್ರಾಣಾಯಾಮ-ಎಂದರೆ? ’ಪ್ರಾಣ’ ಎಂದರೆ ಜೀವಶಕ್ತಿ ಅಥವಾ ಚೈತನ್ಯ. ಇನ್ನೂ ಸರಳ ಪದ ಉಪಯೋಗಿಸಬೇಕೆಂದರೆ, ಉಸಿರಾಟ ಅಥವಾ ಜೀವಿಸಲು ಅಗತ್ಯವಾದ ಮೂಲ ಚೈತನ್ಯ. ’ಆಯಾಮ’ ಎಂದರೆ ವಿಸ್ತರಿಸುವಿಕೆ. ’ಪ್ರಾಣಾಯಾಮ’ ಎಂಬುದರ ಅರ್ಥ ’ಉಸಿರಾಟದ ದೀರ್ಘಗೊಳಿಸುವಿಕೆ’, ಅಥವಾ ಸಮತೋಲಿತ ರೀತಿಯಲ್ಲಿ ಶ್ವಾಸೋಚ್ವಾಸವನ್ನು ವಿಸ್ತರಿಸುವುದು. ಉಸಿರಾಟದ ವೇಗ/ಗತಿ ಮತ್ತು ಆಯಸ್ಸಿನ ಮಧ್ಯೆ...
“Round Canteen.. Coffee.. After this class” ಪಕ್ಕ ಕುಳಿತ ಯಾರೇ ಆಗಲಿ, ಇಂತಹುದೇನಾದರೂ ಕೀವರ್ಡ್ ಗಳನ್ನು ನನ್ನ ಏಕಮಾತ್ರ ಪುಸ್ತಕದ ತೆರೆದಿಟ್ಟ ಪುಟದ ತುದಿಯಲ್ಲಿ ಬರೆದರೆ, ಬರೆದವರು ಪೆನ್ನು ಮೇಲೆತ್ತುವ ಮೊದಲೇ “Done..!” ಅಂತ ಗೀಚುವುದು ನನ್ನ ಅಭ್ಯಾಸ..! ನಿಜಕ್ಕೂ ಮಂಡೆ ಬಿಸಿ ಆಗಿಸುತ್ತಿದ್ದ ಘನ ಗಂಭೀರ ತರಗತಿಗಳು...
ಮಾಲಕ್ಕನ ಕನಸಿನ ಕಲ್ಪನೆ “ಸುರಹೊನ್ನೆ” ರೂಪು ತಳೆದು ಭರ್ತಿ ಒಂದು ವರ್ಷ! ಈ ಅವಧಿಯಲ್ಲಿ ಪುಟಾಣಿಗಳಿಂದ ಹಿಡಿದು ಹೆಸರಾಂತರವರೆಗೆ ಎಲ್ಲ ಸದಭಿರುಚಿಯ ಅಕ್ಷರಪ್ರಿಯರ ಬಳಗವೊಂದನ್ನು ಸೃಷ್ಟಿಸಿಕೊಂಡು ಅದನ್ನು ಇನ್ನೂ ವಿಸ್ತರಿಸುತ್ತಿರುವುದು ಖುಷಿಯ ವಿಚಾರ. ಆರಂಭದಿಂದಲೂ ಸುರಗಿಯ ಲೇಖನಗಳನ್ನು ಮೆಚ್ಚಿ ಓದಿದವರು ಹಲವರು. ಲೇಖನಗಳನ್ನು ಕೊಟ್ಟವರು ಸಹೃದಯ,...
ಕನ್ನಡ ಚಿತ್ರಗೀತೆಗಳಲ್ಲಿ ‘ವಿರಹಾ.. ನೂರು ನೂರು ತರಹಾ..’ ,‘ಬಣ್ಣಾ.. ನನ್ನ ಒಲವಿನ ಬಣ್ಣ…“, “ಹೂವು ಚೆಲುವೆಲ್ಲಾ ನಂದೆಂದಿತು…” ಇವು ಬಹುಶ: ಎಲ್ಲರೂ ಒಂದೇ ರೀತಿ ಇಷ್ಟ ಪಡುವ ಹಳೆಯ ಹಾಡುಗಳಲ್ಲಿ ಕೆಲವು. ಹಾಡಿನ ಭಾವಗಳತ್ತ ಗಮನಿಸಿದರೆ ಒಂದಷ್ಟು ಶೋಕ, ಕೋರಿಕೆ, ಪ್ರೀತಿ, ಕರುಣೆ, ಗಾಂಭೀರ್ಯಗಳ ಮಿಶ್ರಣವಾಗಿದ್ದು ಆಪ್ತವೆನಿಸುವ...
ಮೈಸೂರಿನ ದಸರಾ ಆಹಾರಮೇಳದಲ್ಲಿ ಬುಡಕಟ್ಟು ಜನಾಂಗದವರ ವಿಶೇಷ ಆಹಾರಗಳ ಸ್ಟಾಲ್ ಗಮನ ಸೆಳೆದಿತ್ತು. ಅಲ್ಲಿ ಮಾಕಳಿ ಬೇರಿನಿಂದ ಟೀ ತಯಾರಿಸಿ ಮಾರುತ್ತಿದ್ದ ಮಹಿಳೆಯಲ್ಲಿ ವಿಚಾರಿಸಿದಾಗ ಮಾಕಳಿ ಬೇರು ಅಥವಾ ನನ್ನಾರಿ ಎನ್ನುವುದು ಆಂಧ್ರ, ಕರ್ನಾಟಕ, ತಮಿಳ್ನಾಡುಗಳ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಸಸ್ಯದ ಬೇರಾಗಿದ್ದು ತುಂಬಾ ಪೌಷ್ಟಿಕವೆನ್ನುವುದು...
ಮೈಸೂರು ಹಾಗೂ ಸುತ್ತಮುತ್ತ ತೆರೆದಿಟ್ಟ ಸುಂದರ ಪ್ರಕೃತಿಯಲ್ಲಿ ಚಾರಣವೇ ಒಂದು ಅದ್ಭುತ ಅನುಭವ. ಇತ್ತೀಚೆಗೆ ಮೈಸೂರಿಗೆ ಬಂದ ನನಗೆ ಒಕ್ಟೋಬರ್ 12, 2014 ರ ಚಾರಣವು ಯೂಥ್ ಹಾಸ್ಟೆಲ್ ಮೂಲಕ ಮೊದಲ ಚಾರಣ. ಮೈಸೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಸೋಮನಾಥಪುರ, ಉಕ್ಕಲಗೆರೆ ಮಲ್ಲಿಕಾರ್ಜುನ ಬೆಟ್ಟ, ವಡಗಲ್ಲು ರಂಗನಾಥಸ್ವಾಮಿ...
ಅಂದು ಬೆಳ್ಳಂಬೆಳಗ್ಗೆಯೇ “ಕಥೇ.. ಕಥೇ…” ಎಂದು ಅಜ್ಜಿಯನ್ನು ಪೀಡಿಸಿದಾಗ ಅಜ್ಜಿ ಕಣ್ಣು ಹೊರಳಿಸಿ ಹೆದರಿಸುವ ವ್ಯರ್ಥ ಪ್ರಯತ್ನ ಮಾಡಿದ್ದರು. ಮುನ್ನಾದಿನವಷ್ಟೇ ಎರಡು ಬಾರಿ ‘ಮೂರು ಕರಡಿ’ಗಳ ಕಥೆ ಹೇಳಿ ಸಾಕಾಗಿದ್ದ ಅಜ್ಜಿ ಹೇಗಾಅದರೂ ಅಡುಗೆ ಮನೆಯಿಂದ ನನ್ನ ಸಾಗಹಾಕುವ ಶತ ಪ್ರಯತ್ನ ಮಾಡುತ್ತಿದ್ದರು. ತಮ್ಮ ಸೀರೆಗಳ ಬಗ್ಗೆ...
ನೆರೆಯ ಕೇರಳದಲ್ಲೇ ಹುಟ್ಟಿ ಬೆಳೆದ ನನಗೆ ಮೈಸೂರಿನ ಆಚಾರ, ಆಚರಣೆಗಳು ಹೊಸತು. ಮೊನ್ನೆಯಷ್ಟೇ ಗಣೇಶ ಚತುರ್ಥಿಯ ಅಂಗವಾಗಿ ಮೈಸೂರಿನ ರೂಪಾನಗರ ಬಡಾವಣೆಯಲ್ಲಿ ರಥೋತ್ಸವವಿದೆ ಎಂದು ಕೇಳಿದಾಗ ಅದರ ಗೌಜಿ ಯ ಸ್ಪಷ್ಟ ಚಿತ್ರಣ ಸಿಕ್ಕಲಿಲ್ಲ. ಅಂದು ಮಧ್ಯಾಹ್ನ ಊಟದ ನಂತರ ಅಕ್ಕ ಹುಮ್ಮಸ್ಸಿನಿಂದ ಹಳೆಯ ಬಕೆಟ್ ನಲ್ಲಿನ...
ನಿಮ್ಮ ಅನಿಸಿಕೆಗಳು…