ಆಪರೇಷನ್ ಸ್ಮೈಲ್ (Operation Smile)  

Share Button
Nagaraj Bhadra

ನಾಗರಾಜ ಭದ್ರಾ, ಕಲಬುರಗಿ

ಚಿಕ್ಕ ಮಕ್ಕಳು ಸಮಾಜ,ಜಾತಿ,ಧಮ೯, ಮೇಲು ಕೀಳು,ಬಡವರು,ಶ್ರೀಮಂತರು ,ಕೆಟ್ಟವರು,ಒಳ್ಳೆಯವರು ಯಾವುದನ್ನು  ಅರಿಯದ ಮುಗ್ಧರು.ಅವರ ಆಟ, ನಗು , ಮುಗ್ಧತೆ  ಎಂಥಹ ಕ್ರೂರಿಯ ಮನಸ್ಸನ್ನು ಕರಗಿಸುತ್ತದೆ.ಆದರೆ  ಈ ಸಮಾಜದಲ್ಲಿ  ಒಂದಿಷ್ಟೂ  ಕ್ರೂರಿಗಳಿಗೆ ಆ ಮನಸ್ಸೇ  ಇರುವುದಿಲ್ಲ.ಅಂತಹ ಕ್ರೂರ ಮೃಗಗಳು ತಮ್ಮ ಸ್ವಾಥ೯ಕೊಸಕ್ಕರ ಮುಗ್ಧ  ಮಕ್ಕಳನ್ನು  ಅಪಹರಿಸಿ ಬೇರೆ ಕಡೆ ಭಿಕ್ಷೆ ಬೇಡಲು ಹಾಗೂ ಇತರೆ ಕೆಲಸಕ್ಕೆ  ಹಚ್ಚುತ್ತಾರೆ .
ಇನ್ನೂ ಕೆಲವು ಮಕ್ಕಳು ಈ  ಕೆಳಗಿನ ಕಾರಣಗಳಿಂದ ಮನೆ ಬಿಟ್ಟು ಹೋಗುತ್ತಾರೆ

  1. ಮನೆಯಲ್ಲಿನ ಬಡತನ,ಅಹಿತಕರ ವಾತಾವರಣ 
  2. ದೈಹಿಕ ಹಾಗೂ ಮಾನಸಿಕ ಹಿಂಸೆಯಿಂದ 
  3. ಕೆಟ್ಟ ಅಭ್ಯಾಸಗಳಿಂದ
  4. ಲೈಂಗಿಕ ಶೋಷಣೆಯಿಂದ
  5. ಮನೆಯಲ್ಲಿ ಅವರನ್ನು ನಿಲ೯ಕ್ಷ್ಯ ಮಾಡುವದರಿಂದ
  6. ಓದು ಮತ್ತು ಇತರೆ ಒತ್ತಡಗಳಿಂದ
  7. ಅಪರಾಧಿ ಜಗತ್ತಿನ ನಂಟಿನಿಂದ

ಆ ಮಕ್ಕಳು  ವಷ೯ಗಳಾದರು ಸಿಗದೇ ಹೋದಾಗ ಮಕ್ಕಳನ್ನು  ಕಳೆದುಕೊಂಡ ಪಾಲಕರ ನೋವು,ಆಕ್ರಂದನ ಶಬ್ದದಲ್ಲಿ ಎಷ್ಟು  ವಿವರಿಸಿದರು ಸಾಲದು ಅದನ್ನು ಅನುಭವಿಸಿದವರಿಗೆ  ಗೊತ್ತು. ಎಷ್ಟೋ  ತಾಯಿಂದರು ಮಾನಸಿಕವಾಗಿ ಹುಚ್ಚರರಾಗಿದ್ದಾರೆ,ಕೆಲವರು ಅದನ್ನೇ  ಯೋಚಿಸಿ ಹಾಸಿಗೆ ಹಿಡ್ಡದಿದ್ದಾರೆ,ಮಾನಸಿಕ ರೋಗಿಗಳಾಗಿದ್ದಾರೆ,ಇನ್ನೂ ಕೆಲವರು  ಆತ್ಮಹತ್ಯೆ ಅಂಥಹ ಕೆಟ್ಟ ನಿಣ೯ಯವನ್ನು ತೆಗೆದುಕೊಂಡಿದಾರೆ.ಅವರ  ಜೀವನದ ಸಂತೋಷವೇ  ಮಾಯವಾಗಿ ಹೋಗಿದೆ. ನಮ್ಮ ದೇಶದಲ್ಲಿ ಪ್ರತಿ ವಷ೯ವು ಲಕ್ಷಾಂತರ  ಮಕ್ಕಳು ಕಾಣೆಯಾಗುತ್ತಾರೆ.ಅದರಲ್ಲಿ ನಮ್ಮ ಪೋಲೀಸರಿಗೆ ಕೇವಲ ಕೆಲವು ಮಕ್ಕಳನ್ನು ಮಾತ್ರ  ಹುಡುಕಿಕೊಡಲು ಸಾಧ್ಯವಾಗಿದೆ. ನಮ್ಮ ದೇಶದ ಉತ್ತರ ಪ್ರದೇಶ ರಾಜ್ಯದ ಘಾಜಿಯಬಾದ ಜಿಲ್ಲೆಯಲ್ಲಿಯು ಮಕ್ಕಳು ಕಾಣೆಯ ಪ್ರಕರಣಗಳ  ಸಂಖ್ಯೆ ಹೆಚ್ಚಾಗಿ ಹೋಗಿತ್ತು.ಅಲ್ಲಿಯ ಪೋಲೀಸರಿಗೆ ಈ ಪ್ರಕರಣಗಳು ಬೀಡಿಸಲಾರದ ಒಗ್ಗಟ್ಟುಗಳಾಗಿದವು.ಈ ಪ್ರಕರಣಗಳು ಅಲ್ಲಿಯ ಪೋಲೀಸರ ನಿದ್ದೆಗೆಡಿಸಿದವು.ಕಳೆದುಹೋದ ಮಕ್ಕಳನ್ನು  ಹುಡುಕಿಕೊಡಲು ಮತ್ತು  ಮಕ್ಕಳನ್ನು ಕಳೆದುಕೊಂಡ ಪಾಲಕರ ಜೀವನದಲ್ಲಿ ಮರೆಯಾದ ಸಂತೋಷ, ಅವರ ಮುಖದ ಮೇಲಿನ ನಗುವನ್ನು ಮತ್ತೆ ತರಬೇಕಂತ  ಪಣತೋಟ್ಟ ಅಲ್ಲಿಯ ಎಸ್.ಎಸ್.ಪಿ ( Senior Superintendent of Police)  ಧ್ರಮೇಂದ ಯಾದವ ಅವರು ಆಪರೇಷನ್  ಸ್ಮೈಲ್ (Operation Smile) ಎಂಬ ಹೆಸರಿನ ಅತ್ಯಾಧುನಿಕ ಟೆಕ್ನಾಲಜಿಯ ವಿನೂತನ ಅಭಿಯಾನವನ್ನು ನವೆಂಬರ್ 14, 2014 ರಂದು ಶುರುಮಾಡಿದರು.

Running away from home

ಈ ಅಭಿಯಾನದಲ್ಲಿ ಗಾಜಿಯಾಬಾದ ಪೋಲೀಸ್ ವಿವಿಧ ಶ್ರೇಣಿಯ ಪೊಲೀಸ್ ಆಫೀಸರ್ ಗಳು ಪೋಸ್ಕೊ (POSCO Act)ಕಾಯ್ದೆ, ಜುವೇನಿಲಿ ಜಸಟೀಸ್ ಕಾಯ್ದೆ (Juvenile Justice Act), ಮತ್ತು ಪ್ರೋಟೆಕ್ಷಣ ಆಫ್ ಚೈಲ್ಡ ರೈಟ್ಸ್ ಕಾಯ್ದೆಯಲ್ಲಿ (Proctection of child Rights Act) ವಿಶೇಷ ತರಬೇತಿ ಪಡೆದವರ ತಂಡಗಳನಾಗಿ ರಚಿಸಲಾಯಿತು.

ಗಾಜೀಯಾಬಾದಯಲ್ಲಿ 2006 ರಿಂದ 18  ವರ್ಷದ ಒಳಗಿನ  ಕಾಣೆಯಾಗಿರುವ ಮಕ್ಕಳ ಪಟ್ಟಿ ಮಾಡಿದರು.  ಮೊದಲ ಹಂತದಲ್ಲಿ ವಿಶೇಷ ತರಬೇತಿ ಪಡೆದಿದ್ದ ಪೋಲೀಸರ ಆರೂ ತಂಡಗಳನ್ನು  ರಚಿಸಲಾಯಿತು. ಆರೂ ತಂಡಗಳನ್ನು ಪ್ರತೇಕವಾಗಿ ದೇಶದ ಆರೂ  ವಿವಿಧ ನಗರಗಳಾದ ದೆಹಲಿ, ಗುರಗಾಂವ, ಪರೀದಬಾದಚಂಧಿಘಡಹರಿದ್ವಾರ ಮತ್ತು  ಡೇರಾಡುನ್ನಗೆ ಕಳುಹಿಸಿದರು. ಈ ತಂಡಗಳು  ಆಯಾ ನಗರಗಳ ಎನ್ ಜಿ ಗಳು (NGO), ನಿರಾಶ್ರಿತರ ಕೇಂದ್ರಗಳಿಗೆ ಭೇಟಿ  ಮಾಡಿದ್ದರು.ಆಯಾ ನಗರಗಳ ರೈಲ್ವೆ  ನಿಲ್ದಾಣಗಳು,ಬಸ್ಸು ನಿಲ್ದಾಣಗಳು ಹಾಗೂ ನಗರಗಳ ಜನಭರಿತ ಪ್ರದೇಶಗಳಲ್ಲಿ ಹಾಗೂ ನಗರಗಳಲ್ಲಿನ ಭಿಕ್ಷಾಟನೆ ರಾಕೆಟ್ ಗಳಲ್ಲಿ  ಹುಡುಕಾಟವನ್ನು ಶುರು ಮಾಡಿದ್ದರು.ಪೋಲಿಸರು ನ್ಯಾಶನಲ್ ಕ್ರೈಮ್ ರೀಕಾಡ್ಸ್ ಬ್ಯೂರೊ (National Crime Records Bureau) , ಮೀಸಿಂಗ ಪ್ರರಸನ್ ಸೇಲ್  (Missing Persons Cell),ಚೈಲ್ಡ್ ವೇಲಪೇರ ಕಮೀಟಿಸ್ (Child Welfare Communities)  ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಸಹಾಯವನ್ನು  ಪಡೆದರು. ಕೇವಲ ಒಂದು ತಿಂಗಳ ಅವಧಿಯಲ್ಲಿ 227  ಮಕ್ಕಳನ್ನು ಪೋಲಿಸರು ಪತ್ತೆ ಮಾಡುವಲ್ಲಿ ಸಫಲರಾದರು.
ಇದ್ದರಲ್ಲಿ ಕೆಲವು  ಮಕ್ಕಳು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ಸ್ ಗಳು ಆಯುತ್ತಾಯಿದ್ದರು. ಇನ್ನೂ ಕೆಲವು ದಾಬಾಗಳಲ್ಲಿ ಕೆಲಸ ಮಾಡುತ್ತಿದ್ದರು,  ಕೆಲವು ಮಕ್ಕಳು ಡ್ರಗ್ಸ್  (Drugs)   ಚಟಕ್ಕೆ ಒಳಗಾಗಿದ್ದರು, ಕೆಲವು ಮಕ್ಕಳು ಭಿಕ್ಷಾಟನೆ ರಾಕೆಟ್ ನಲ್ಲಿ ಪತ್ತೆಯಾದವು.ಗಾಜಿಯಾಬಾದ ಪೋಲೀಸರ ಈ ಆಪರೇಷನ್ ಸ್ಮೈಲ್ (Operation Smile)  ಅಭಿಯಾನದ ಕೇವಲ ಒಂದು ತಿಂಗಳಲ್ಲಿಯೆ ಯಶಸ್ವಿಯಾಯಿತ್ತು.ಗಾಜಿಯಬಾದ ಪೋಲೀಸರ ಈ ಅಭಿಯಾನದ ಯಶಸ್ವಿನಿಂದ ಎಚ್ಚೆತ್ತ ನಮ್ಮ ಕೇಂದ್ರ ಸರಕಾರದ ಗೃಹ ಸಚಿವಾಲಯ ದೇಶದ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಡಾಳಿತ ಪ್ರದೇಶಗಳಿಗೆ ಆಪರೇಷನ್ ಸ್ಮೈಲ್ ಮಾದರಿಯನ್ನು ಅಳವಡಿಸಿಕೊಂಡು ಕಾಣೆಯಾದ್ದ ಮಕ್ಕಳನ್ನು ಹುಡುಕಲು ಜನೆವರಿ 1, 2015 ರಿಂದ ಜನೆವರಿ 31,2015 ವರೆಗೆ  ಅಭಿಯಾನವನ್ನು ಪ್ರಾರಂಭಿಸಲು ಸುತ್ತೋಲೆಯನ್ನು ಹೊರಡಿಸಿತ್ತು.

ದೇಶದೆಲ್ಲಡೆ ಆಪರೇಷನ್ ಸ್ಮೈಲ್  (Operation Smile) ಮಾದರಿಯಲ್ಲಿ ಅಭಿಯಾನ ಪ್ರಾರಂಭಗೊಂಡಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ಈ ಅಭಿಯಾನದಲ್ಲಿ ಪತ್ತೆಯಾದ್ದ ಮಕ್ಕಳ ವಿವರಗಳು ಈ ಕೆಳಗಿನಂತಿವೆ:

  1. ಬಿಹಾರ – 122
  2. ಕನಾ೯ಟಕ – 65
  3. ಮಧ್ಯಪ್ರದೇಶ711
  4. ರಾಜ್ಯಸ್ತಾನ80
  5. ಸಿಕ್ಕಿಂ192
  6. ಉತ್ತರಾಕಂಡ188
  7. ಉತ್ತರಪ್ರದೇಶ – 855
  8. ಪಚ್ಚಿಮ ಬಂಗಾಳ – 754
  9. ಚಂದಿಘಡ – 50
  10. ತ್ರಿಪುರ15
  11. ತೆಲಂಗಾಣ – 1397

Opeartion smile

ಒಟ್ಟು 4427 ಮಕ್ಕಳನ್ನು ಬರೀ ಒಂದು ತಿಂಗಳಲ್ಲಿ ಪತ್ತೆಮಾಡುವಲ್ಲಿ ಪೋಲೀಸರು  ಯಶಸ್ವಿಯಾದ್ದರು.ಘಾಜಿಯಾಬಾದ ಪೋಲಿಸರು ಕೂಡ ಆಪರೇಷನ್ ಸ್ಮೈಲ್ (Operation Smile)  ಎರಡನೆಯ  ಹಂತವನ್ನು ಜನೆವರಿ 1,2015 ರಿಂದ ಜನೆವರಿ 31,12015 ವರೆಗೆ ನಡೆಸಿ 57 ಕಾಣೆಯಾಗಿದ್ದ ಮಕ್ಕಳನ್ನು ಪತ್ತೆಮಾಡುವಲ್ಲಿ ಯಶಸ್ವಿಯಾದ್ದರು. ಮತ್ತೊಮ್ಮೆ ನಮ್ಮ  ಕೇಂದ್ರ ಸರಕಾರವು ದೇಶದ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಡಾಳಿತ ಪ್ರದೇಶಗಳಿಗೆ 1 ಜುಲೈಯಿಂದ 31 ಜುಲೈವರೆಗೂ ಮತ್ತೆ ಆಪರೇಷನ್ ಸ್ಮೆಲ್ ಅಭಿಯಾನವನ್ನು  ನಡೆಸಲು ಸುತ್ತೋಲೆಯನ್ನು ಹೊರಡಿಸಿದೆ. ಮೂರನೆಯ ಹಂತದ ಅಭಿಯಾನ ಇನ್ನೂ ದೇಶಾದ್ಯಂತ ಚಾಲನೆಯಲ್ಲಿದೆ.ಭಾರತೀಯ ರೈಲಿನ ರೈಲ್ವೆ  ಪೊಲೀಸ್ ಪ್ರೋಸ್ (Railway Police Force)     ಈ ಅಭಿಯಾನದ ಯಶಸ್ವಿನಿಂದ ಎಚ್ಚೆತ್ತು ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲಿನಲ್ಲಿ ಕಾಣೆಯಾಗಿರುವ ಮಕ್ಕಳನ್ನು ಪತ್ತೆಮಾಡಲು  ಇದ್ದೇ ಮಾದರಿಯಲ್ಲಿ ಆಪರೇಷನ್ ಮುಸಕಾನ್ (Operation Muskan) ಎಂಬ ಅಭಿಯಾನವನ್ನು ಪ್ರಾರಂಭಿಸಿದೆ.ಗಾಜಿಯಬಾದ ಪೋಲಿಸರು ಆಪರೇಷನ್  ಸ್ಮೆಲನ  ಮೂರನೆಯ ಹಂತದಲ್ಲಿ ಹದಿನೈದು ತಂಡಗಳನ್ನು ರಚಿಸಿ ದೇಶದ ವಿವಿಧ ನಗರಗಳಿಗೆ ಕಳುಹಿಸಿದ್ದಾರೆ.

ಈ ಅಭಿಯಾನದ ಯಶಸ್ವಿನ ಸುದ್ದಿ ದೇಶಾದ್ಯಂತ ಹರಡಿತ್ತು. ಇದರ ಯಶಸ್ಸನ್ನು ಅರಿತ ನಮ್ಮ  ಕೇಂದ್ರ  ಸರಕಾರವು ಇದೇ ಮಾದರಿಯಲ್ಲಿ  ಆಪರೇಷನ್  ಮುಸಕಾನ ಎಂಬ ಹೊಸ ಅಭಿಯಾನವನ್ನು  ಘೋಷಿಸುವ ಯೋಚನೆಯಲ್ಲಿದೆ. ಇದೊಂದು ಒಳ್ಳೆಯ ಬೆಳವಣಿಗೆ, ನಮ್ಮ ಕೇಂದ್ರ  ಸರಕಾರಕ್ಕೆ ಅಭಿನಂದಿಸೋಣ.ದೇಶದಲ್ಲಿಯೆ ಈ ಯೋಜನೆಯನ್ನು ಮೊದಲು ಪ್ರಾರಂಭಸಿ ಕಾಣೆಯಾಗಿದ್ದ ಮಕ್ಕಳಿಗೆ ಮತ್ತೊಂದು ಹೊಸ ಜೀವನವನ್ನು ನೀಡಿದ ಹಾಗೂ ಆ ಮಕ್ಕಳ ಪಾಲಕರ ಬದುಕಿನಲ್ಲಿ ಸಂತೋಷವನ್ನು ತುಂಬಿದ ಘಾಜಿಯಬಾದ ಎಸ್.ಎಸ್.ಪಿ ಧ್ರಮೇಂದ ಯಾದವ ಹಾಗೂ ಅವರ ತಂಡಕ್ಕೆ ನನ್ನದೊಂದು ಸೆಲ್ಯೂಟ್.

 

– ನಾಗರಾಜ ಭದ್ರಾ, ಕಲಬುರಗಿ ಜಿಲ್ಲೆ

 

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: