ಹಲಸಿನ ಹಣ್ಣಿನ ಗುಳಿಯಪ್ಪ… ಸಿಹಿದೋಸೆ..

Share Button
Halasinahannina suttavu

ಹಲಸಿನಹಣ್ಣಿನ ಸುಟ್ಟವು/ಗುಳಿಯಪ್ಪ

 

ಮಳೆಗಾಲ ಶುರುವಾದಾಗ ಹಲಸಿನ ಹಣ್ಣು ನೀರನ್ನು ಹೀರಿ ಸಿಹಿ ಕಡಿಮೆಯಾಗುತ್ತವೆ. ಆಗ ಅದಕ್ಕೆ ಇನ್ನಷ್ಟು ಸಿಹಿ ಸೇರಿಸಿ, ರುಚಿಯಾದ ‘ಗುಳಿಯಪ್ಪ’ ತಯಾರಿಸಬಹುದು. ಈ ಸಿಹಿತಿಂಡಿಗೆ ಸುಟ್ಟವು ಅಥವಾ ಮುಳಕ ಎಂಬ ಹೆಸರುಗಳು ಇವೆ. ಹಲಸಿನ ಹಣ್ಣಿನ ಸುಟ್ಟವು ತಯಾರಿಸುವ ವಿಧಾನ:

 1. ಒಂದು ಕಪ್ ಬೆಳ್ತಿಗೆ ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
 2. ಎರಡು ಕಪ್ ನಷ್ಟು ಹಲಸಿನ ಹಣ್ಣನ್ನು ಬಿಡಿಸಿ ಇಟ್ಟುಕೊಳ್ಳಿ.
 3. ಅರ್ಧ ಕಪ್ ನಷ್ಟು ತೆಂಗಿನಕಾಯಿಯನ್ನು ತುರಿದಿಟ್ಟುಕೊಳ್ಳಿ.
 4. ನೀರು ಬಸಿದ ಅಕ್ಕಿಯೊಂದಿಗೆ, ಹಲಸಿನ ಹಣ್ಣು, ಕಾಯಿತುರಿ ಸೇರಿಸಿ ಗಟ್ಟಿಯಾಗಿ ರುಬ್ಬಿ. ಇದು ಇಡ್ಲಿಹಿಟ್ಟಿಂತ ಸ್ವಲ್ಪ ಗಟ್ಟಿಯಾಗಿರಬೇಕು. (ಹಲಸಿನ ಹಣ್ಣಿನಲ್ಲಿರುವ ನೀರೇ ಸಾಕಾಗುತ್ತದೆ. ಹಾಗಾಗಿ ರುಬ್ಬುವಾಗ ನೀರು ಬೇಕಿದ್ದರೆ ಮಾತ್ರ ಹಾಕಿದರೆ ಸಾಕು)
 5. ಸಿಹಿ ರುಚಿಗೆ ತಕ್ಕಷ್ಟು 5-6 ಚಮಚ ಬೆಲ್ಲದ ಪುಡಿ ಸೇರಿಸಿ. ಒಂದು ಚಿಟಿಕೆ ಉಪ್ಪು ಚೆನ್ನಾಗಿ ಬೆರೆಸಿ.
 6. ಗುಳಿಯಪ್ಪದ ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಯಲ್ಲಿ, ಎಲ್ಲಾ ಗುಳಿಗಳಲ್ಲಿ ಹಿಡಿಸುವಷ್ಟು ಹಿಟ್ಟನ್ನು ಹಾಕಿ ಕರಿಯಿರಿ. (ಗುಳಿಯಪ್ಪದ ಬಾಣಲಿ ಇಲ್ಲವಾದರೆ, ಮಾಮೂಲಿ ಬಾಣಲಿಯೂ ಆಗುತ್ತದೆ. ಒಂದೊಂದೇ ದೊಡ್ಡ ಚಮಚೆಯಷ್ಟು ಹಿಟ್ಟನ್ನು ಎಣ್ಣೆಗೆ ಹುಯ್ದರಾಯಿತು)
 7. ಗುಳಿಯಪ್ಪ ಬೆಂದು ಅಂಚು ಹೊಂಬಣ್ಣಕ್ಕೆ ತಿರುಗುವಾಗ, ಒಂದು ಚಾಕುವಿನ/ಕಡ್ಡಿಯ ಸಹಾಯದಿಂದ, ಅದನ್ನು ಮಗುಚಿ ಹಾಕಿ ಇನ್ನೂ ಸ್ವಲ್ಪ ಬೇಯಿಸಿ.
 8. ಎರಡೂ ಬದಿಯೂ ಬೆಂದು ಹೊಂಬಣ್ಣ ಬಂದಾಗ, ಎಣ್ಣೆಯಿಂದ ತೆಗೆಯಿರಿ.

ರುಚಿಯಾದ, ಸಿಹಿಯಾದ ಸುಟ್ಟವು /ಮುಳಕ/ಗುಳಿಯಪ್ಪ ಸಿದ್ಧ. ಕ್ಯಾಲೊರಿಯ ಭಯ ಇರುವವರು, ಇದೇ ಹಿಟ್ಟನ್ನು, ಕಾವಲಿಯಲ್ಲಿ ಹುಯ್ದು ‘ಹಲಸಿನ ಹಣ್ಣಿನ ಸಿಹಿದೋಸೆ’ ಮಾಡಿ ತಿನ್ನಬಹುದು. ಅದೂ ರುಚಿಯಾಗಿರುತ್ತದೆ.

Halasinahannina dose

ಹಲಸಿನಹಣ್ಣಿನ ದೋಸೆ

(ಚಿತ್ರಋಣ : ಅಂತರ್ಜಾಲ)

– ಸುರಗಿ

4 Responses

 1. Rajarama Ramachandra Rajarama Ramachandra says:

  JACK FRUIT IS MY FAVOURITE

 2. Avatar Anandmath Shiva says:

  Nice recipe.

 3. Avatar Madhura Chithrapadi says:

  Nodidre thinnon anste

 4. Avatar savithri s bhat says:

  ತುಂಬಾ ರುಚಿ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: