ಸಂಬಂಧಗಳು
ಬದುಕಲ್ಲಿ ಯಾರು ಬರುತ್ತಾರೆ
ಬದುಕಿನಿಂದಾಚೆ ಯಾರು ಹೋಗುತ್ತಾರೆ
ಅನ್ನೋದು ನಮ್ಮ ಕೈಲಿಲ್ಲ!
ಬಂದವರು ಬಹಳ ಇರಬಹುದು
ಮೂರೇ ದಿನಕ್ಕೆ ಹೋಗಬಹುದು
ಅದೂ ನಮ್ಮ ಕೈಲಿಲ್ಲ!
ಹಾಗೇನೆ ಯಾರು ಯಾಕೆ ಬಂದರು
ಬಂದವರು ಯಾಕೆ ಹೋದರು
ಅನ್ನೋದು ನಮ್ಮ ಕೈಲಿಲ್ಲ!
ಮನುಷ್ಯ ಸಂಬಂಧಗಳೇ ಹಾಗೆ
ರಾತ್ರಿ ಬರುವ ಕನಸುಗಳ ಹಾಗೆ
ಯಾಕೆ ಬರುತ್ತವೆ
ಯಾಕೆ ಮರೆತು ಹೋಗುತ್ತವೆ
ಅನ್ನೋದು ಕೊನೆಗೂ ಗೊತ್ತಾಗೋದೇ ಇಲ್ಲ!
– ಕು.ಸ.ಮಧುಸೂದನ್ ನಾಯರ್