ನಿರಾಗ್ನಿ ಭೋಜನ!

Share Button

ಎಲ್ಲರಿಗೂ ರಾಮನವಮಿಯ ಶುಭಾಶಯಗಳು. ರಾಮನವಮಿಯಿಂದ ನಂತರ ಬಿಸಿಲಿನ ಝಳ ಹೆಚ್ಚಾಗುತ್ತದೆ. ಈ ಸಮಯದಲ್ಲಿ ತಂಪಾದ ಆಹಾರ ಪದ್ಧತಿ ಉತ್ತಮ. ಹಾಗಾಗಿ ರಾಮನವಮಿಯಂದು ದೇಗುಲಗಳಲ್ಲಿ ವಿಶೇಷ ಪೂಜೆ ಮಾಡಿ ಪ್ರಸಾದವಾಗಿ ಕೋಸಂಬರಿ-ಪಾನಕ ಹಂಚುವ ಸಂಪ್ರದಾಯ ಬೆಳೆದು ಬಂದಿರಬಹುದು. ಇನ್ನು ಮೈಸೂರಿನಲ್ಲಿ ರಾಮನವಮಿಯಂದು ರಸ್ತೆಗಳಲ್ಲಿ ಕೂಡ ಅಲ್ಲಲ್ಲಿ ಮಜ್ಜಿಗೆ-ಪಾನಕ ಹಂಚುತ್ತಾರೆ.

ನಮ್ಮ ಮನೆಯಲ್ಲಿ ರಾಮನವಮಿಯಂದು ಮಧ್ಯಾಹ್ನದ ಅಡುಗೆ ಹೀಗಿತ್ತು:

ಕ್ಯಾರೆಟ್ ಕೋಸಂಬರಿ, ಸೌತೆಕಾಯಿ-ಕಡ್ಲೆಬೇಳೆ ಕೋಸಂಬರಿ, ಸೌತೆಕಾಯಿ ಉಪ್ಪಿನಕಾಯಿ, ಗೊಜ್ಜವಲಕ್ಕಿ, ಮೊಸರವಲಕ್ಕಿ, ಬಾಳೆಹಣ್ಣು-ಪಪ್ಪಾಯ ಸೀಕರಣೆ, ಕರಬೂಜದ ಪಾನಕ, ಮಜ್ಜಿಗೆ ನೀರು.
Ramanavami-27032015

ಇವುಗಳಲ್ಲಿ ಯಾವುದೂ ಬೇಯಿಸಿದ ಅಡುಗೆಗಳಲ್ಲ. ಒಗ್ಗರಣೆಗೆ ಮಾತ್ರ ಗ್ಯಾಸ್ ಸ್ಟೋವ್ ಹಚ್ಚಬೇಕಾಯಿತು. ಹಾಗಾಗಿ ಇದಕ್ಕೆ ‘ಅಗ್ನಿ ಇಲ್ಲದ’ ಅರ್ಥಾತ್ (ಭಾಗಶ:) “ನಿರಾಗ್ನಿ ಭೋಜನ” ಎಂದು ನಾಮಕರಣ ಮಾಡಿದ್ದೇವೆ!

ವರ್ಷದಲ್ಲಿ ಕೆಲವು ದಿನಗಳಾದರೂ ಬೆಂಕಿ ಉಪಯೋಗಿಸದೆ ಅಡುಗೆ ಮಾಡಿದರೆ, ಇಂಧನ ಉಳಿತಾಯವಾಗುವುದರ ಜತೆಗೆ ಅರೋಗ್ಯವೂ ವರ್ಧಿಸಬಹುದಲ್ಲವೇ?

 

– ಹೇಮಮಾಲಾ.ಬಿ

6 Responses

  1. Mamatha Arsikere says:

    Wav yentha tasty, mithaahaara bhojana!! S u r right

  2. R C Jagadesh says:

    Looks delicious and healthy!

  3. Mohin Damle says:

    ಮೊಸರವಲಕ್ಕಿಯಲ್ಲಿ ಆಂಜನೇಯನ ಮುಖ ಮೂಡಿದಂತಿದೆ!!

  4. Ramanna Rai says:

    ಮಜ್ಜಿಗೆ ಮಾಡಲು ಹಾಲು ಕುದಿಸಬೇಕಾಗುತ್ತದೆ. ಅದರಿಂದಾಗಿ ನಿರಾಗ್ನಿ ಶಬ್ದ ಸ್ವಲ್ಪ ಸರಿ ಅನ್ನಿಸೋಲ್ಲ…

  5. nishkala gorur says:

    ಬಾಯಲ್ಲಿ ನೀರು!!!!

  6. savithribhat says:

    ವಾಹ್ ರಾಮನವಮಿಯ ನಿರಾಗ್ನಿ ಭೋ ಜನ ಬಾಯಲ್ಲಿ ನೀರೂರಿಸಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: