ಸಂ-ಸ್ವಗತ -1

Share Button

ಎಲ್ಲರಿಗೂ ನಮಸ್ತೆ.

ನಾನು ಹೇಮಮಾಲಾ, ಮೈಸೂರಿನ ಬಹುರಾಷ್ಟ್ರೀಯ ಸಂಸ್ಠೆಯೊಂದರಲ್ಲಿ ಉದ್ಯೋಗಸ್ಥೆ. ವೃತ್ತಿ ಜೀವನದ ಅವಿಭಾಜ್ಯ ಅಂಗವಾಗಿ ಆಗಾಗ್ಗೆ ಪರವೂರುಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ಇದರ ಜತೆಗೆ ಆಸಕ್ತಿಯಿಂದ ಆಗಿಂದಾಗ್ಗೆ ಟ್ರೆಕ್ಕಿಂಗ್ ಕೈಗೊಂಡು, ನನ್ನ ಪ್ರಯಾಣದ ಪರಿಧಿಯಲ್ಲಿ ಬರುವ ಅನುಭವಗಳನ್ನು ದಾಖಲಿಸಿವುದು ನನ್ನ ಹವ್ಯಾಸ. ಹೀಗೆ ತೋಚಿದಂತೆ ಗೀಚುತ್ತಿದ್ದ ಬರಹಗಳ ವಿಸ್ತೃತ ಭಾವವಾಗಿ ಮೂಡಿದ ಜಾಲತಾಣ www.surahonne.com

ಕೇವಲ ಆಸಕ್ತಿಯೇ ಇದಕ್ಕೆ ಕಾರಣ. ಉಳಿದಂತೆ, ಕನ್ನಡ ಸಾಹಿತ್ಯಾಭ್ಯಾಸಕ್ಕೂ ನನಗೂ, ಗೋಕುಲಾಷ್ಟಮಿಗೂ ಇಮಾಮ್ ಸಾಹೇಬರಿಗೂ ಇರುವಷ್ಟೇ ನಂಟು! ಹಾಗಾಗಿ, ಈ ಜಾಲತಾಣಕ್ಕೆ ಬರಹ ಕಳುಹಿಸಲು ನುರಿತ ಬರಹಗಾರರಾಗಿರಬೇಕಿಲ್ಲ.  ಆಸಕ್ತರು ಯಾರೂ ಬರೆಯಬಹುದು. ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಟೈಪ್ ಮಾಡಿದ ಬರಹಗಳಾಗಿರಬೇಕು.  ಸರಳ, ಸದಭಿರುಚಿಯ ಬರಹಗಳಿಗೆ ಸದಾ ಸ್ವಾಗತ.

ಎರಡು ವಾರಗಳ ಹಿಂದೆ ರಚಿಸಲ್ಪಟ್ಟ ಈ ಜಾಲತಾಣ ಅಕ್ಷರಪ್ರೇಮಿಗಳಿಗಾಗಿ ಮೀಸಲು. ಹಲವು ಮಂದಿ ಸಮಾನಾಸಕ್ತರು ಈಗಾಗಲೇ ಲೇಖನ, ಕವನ ಕಳುಹಿಸಿದ್ದಾರೆ. ಇಲ್ಲಿಗೆ ಬರೆದವರೆಲ್ಲರೂ ‘ಸುರಗಿ ಬಳಗ’ದವರಾಗುತ್ತಾರೆ. ಕೇವಲ 3  ಜನರಿದ್ದ ‘ಸುರಗಿ ಬಳಗ’ ಈಗ 12  ಮಂದಿಯ ತಂಡವಾಗಿದೆ. ಸುಮಾರು 30 ಬರಹಗಳು ಪ್ರಕಟಗೊಂಡಿವೆ, ಇನ್ನೂ ಕೆಲವು ಬತ್ತಳಿಕೆಯಲ್ಲಿವೆ.  ಈ ಜಾಲತಾಣಕ್ಕೆ ಸರಾಸರಿ ದಿನಕ್ಕೆ 100 ಕ್ಕಿಂತಲೂ ಹೆಚ್ಚು ‘ಕ್ಲಿಕ್’ ಬೀಳುತ್ತಿವೆ.

ಸದ್ಯಕ್ಕೆ ಸಂಭ್ರಮ ಪಡಲು ಇಷ್ಟು ಸಾಕಲ್ಲವೆ? ಇದಕ್ಕೆ ಕಾರಣರಾದ ನಿಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.  ಇದೇ ರೀತಿ ನಿಮ್ಮೆಲ್ಲರ ಪ್ರೋತ್ಸಾಹ ಸದಾ ‘ಸುರಗಿ’ಯ ಮೇಲೆ ಸುರಿಯಲಿ ಎಂದು ಆಶಿಸುತ್ತಾ, ವಂದನೆಗಳೊಂದಿಗೆ,

 

 

ಸಂಪಾದಕಿ.

8 Responses

  1. Ghouse says:

    Dear readers, not everyone can do things which they want to in their life. But, I really admire one lady who really does what she wanted to. Cheers to Hema for having a great ambition and success.

    Ghouse

  2. ಕು.ಸ.ಮದುಸೂದನ್ says:

    ಸುರಗಿಯನ್ನ್ನು ನೋಡಿದ ಮೊದಲ ದಿನವೇ ಅದರ ಸರಳತೆ ನನ್ನ ಸೆಳೆಯಿತು, ಲೇಖನಗಳು ಇಷ್ಟವಾದವು. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಉದ್ದೇಶದ ಬಗ್ಗೆ ಗೌರವ ಮೂಡಿತ್ತು. ನಿಮ್ಮ ಪ್ರಯತ್ನ ಸಫಲವಾಗಲಿ.

    • Hema says:

      ನಿಮ್ಮ ಪ್ರೋತ್ಸಾಹ ನುಡಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

  3. ಎಸ್.ಆರ್.ಎನ್.ಮೂರ್ತಿ says:

    ಒಳ್ಳೊಳ್ಳೆಯ ಲೇಖನಗಳನ್ನು ಒಳಗೊಂಡ ಸುರಹೊನ್ನೆಯು ಸಾಹಿತ್ಯಾಸಕ್ತರನ್ನು ಹೀಗೂ ಬೆಳೆಸಬಹುದು ಮತ್ತು ಅವರಿಗೆ ಬೇಕಾದ ವಿಷಯಗಳನ್ನು ಕೊಡಬಹುದೆಂಬ ನಿಮ್ಮ ಪ್ರಯತ್ನ ಶ್ಲಾಘನೀಯ.ಅಭಿನಂದನೆಗಳು.

  4. ಶಂಕರ ಹಂಬರ says:

    ಪ್ಲೆ ಸ್ಟೋರ್ ಲಿ ಏನೊ ಹುಡುಕುವಾಗ “ಸುರಗಿ” ಹೇಸರೆ ವಿಶೇಷ ವೆನಿಸಿತ್ತು,,,ಏನಿರಬಹುದು ಎಂದು ಒಪನ್ ಮಾಡಿದಾಗಲೇ ಗೊತ್ತಾಗಿದ್ದು ಲೇಖನಗಳ ಸುಂದರ ಗುಚ್ಛ,.ಉದ್ದೇಶ ಉತ್ತಮ.ಅನ್ಲೈನ್ ಗೀಳಿನ ಈ ಕಾಲದಲ್ಲಿ ಇಂತದೊಂದು ಪ್ರಯತ್ನ ಉತ್ತಮವಾದದ್ದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: