ಲಕ್ಷ್ಮಣಫಲ-Soursop
ರಾಮಫಲ ಮತ್ತು ಸೀತಾಫಲಗಳನ್ನು ಹಲವಾರು ಬಾರಿ ಕಂಡಿದ್ದೆ, ರುಚಿ ನೋಡಿದ್ದೆ. ಆದರೆ ‘ಲಕ್ಷ್ಮಣಫಲ’ ಎಂಬ ಹಣ್ಣನ್ನು ಮೊನ್ನೆ ತಾನೇ ಗೆಳತಿಯೊಬ್ಬರ ಮನೆಯಲ್ಲಿ ನೋಡಿದೆ. ಸುಮಾರಾಗಿ ಸೀತಾಫಲದಂತೆ ಕಾಣಿಸುವ ಇದು ಗಾತ್ರದಲ್ಲಿ ಸೀತಾಫಲಕ್ಕಿಂತ ನಾಲ್ಕಾರು ಪಟ್ಟು ದೊಡ್ಡದು. ಬೆಳೆದಾಗ ಎರಡು ಕಿಲೋ ತೂಕ ಬರುತ್ತದೆಯಂತೆ.
ಇಂಗ್ಲಿಷ್ ನಲ್ಲಿ Soursop ಎಂದು ಕರೆಯಲ್ಪಡುವ ಈ ಹಣ್ಣಿಗೆ ಕ್ಯಾನ್ಸರ್ ಕಾರಕ ಅಂಶಗಳನ್ನು ಕಡಿಮೆಮಾಡುವ ಸಾಮರ್ಥ್ಯವಿದೆ ಎಂದು ಮಾಹಿತಿಯಿದೆ. ಗಾಢ ಹಸಿರು ಬಣ್ಣದ ಎಲೆಗಳನ್ನು ಹೊಂದಿರುವ ಈ ಸಸ್ಯದ ಎಲೆಗಳ ಕಷಾಯವೂ ಮೂಳೆ ಸಂಬಂಧಿ ನೋವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನ ಮೂಲ ಮೆಕ್ಸಿಕೊ.
‘
– ಹೇಮಮಾಲಾ.ಬಿ
ಹಣ್ಣಿನ ಮೂಲ ಮೆಕ್ಸಿಕೊ ಆದರೆ ಅದಕ್ಕೆ ಲಕ್ಷ್ನಣಫಲ ಎಂಬ ಹೆಸರು ಬಂದಿರುವುದು ಇನ್ನಷ್ಟು ಕುತೂಹಲ!!!! 🙂
Mahitipurna post
ನಾನು ಸೀತಾಫಲ ಮತ್ತು ರಾಮಫಲ ಹಣ್ಣುಗಳನ್ನು ನೋಡಿದ್ದೇನೆ. ಬಳ್ಳಾರಿ ಜಿಲ್ಲೆಯ ಸ್ವಾಮಿಮಲೆ ಅರಣ್ಯ ಪ್ರದೇಶ ಹರಿಶಂಕರದಲ್ಲಿ ಅಪರೂಪದ ರಾಮಫಲ ಕಂಡು ಬರುತ್ತದೆ. ಕೂಡ್ಲಿಗಿ ತಾಲೂಕಿನಲ್ಲಿ ಸೀತಾಫಲ ಹೇರಳವಾಗಿ ಕಂಡು ಬರುತ್ತದೆ. ಆದರೆ ಲಕ್ಷ್ಮಣಫಲ ಬಗ್ಗೆ ತಿಳಿದು ಬಂದಿಲ್ಲ.
ತುಂಬಾ ಒಂದು ಒಳ್ಳೆಯ ಮಾಹಿತಿಯನ್ನು ಕೊಟ್ಟಿದಿರಾ ಹೇಮಾ ಮೇಡಂ ಧನ್ಯವಾದಗಳು ನಿಮಗೆ..
ಓ ಲಕ್ಷ್ಮಣ ಫಲ ನೋಡೆ ಇರಲಿಲ್ಲ .ಧನ್ಯವಾದಗಳು
ಹೊಸ ಪರಿಚಯ, ಆದರೆ ಈ ಗಿಡ ಎಲ್ಲಿ ಸಿಗುತ್ತದೆ ಮಾಹಿತಿ ಕೊಟ್ಟರೆ ಒಳ್ಳೆಯದಿತ್ತು
ನರ್ಸರಿಗಳಲ್ಲಿ ಗಿಡ ಲಭಿಸಬಹುದು. alibaba.com, indiamart.com ನ ಮೂಲಕ ಳನ್ನು ಕೊಳ್ಳಬಹುದು ಎಂದು ವಿವರಣೆ ಇದೆ. ಬಿಗ್ ಬಝಾರ್, ಮೋರ್ ನಂತಹ ಮಾಲ್ ಗಳಲ್ಲಿ ಸಿಕ್ಕರೂ ಸಿಗಬಹುದು. ನಾನು ಇವು ಯಾವುದನ್ನೂ ಪ್ರಯತ್ನಿಸಿಲ್ಲ.
ನನ್ನ ಗೆಳತಿಯು ಈ ಹಣ್ಣನ್ನು ಶ್ರೀಲಂಕಾದಲ್ಲಿ ತಿಂದಿದ್ದರಂತೆ. ಅದರ ಬೀಜವನ್ನು ಇಲ್ಲಿಗೆ ತಂದು ಸಸಿ ಮಾಡಿದ್ದಾರೆ. ನಾನು ಅವರ ಗಿಡ ಹಣ್ಣು ಬಿಡುವುದನ್ನು ಕಾಯುತ್ತಿದ್ದೇನೆ!
ಈ ಲಕ್ಷ್ಮಣ ಫಲ / ಹನುಮಾನ್ ಫಲ ಸಣ್ಣ ಮರ .ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಒಂದು ಮರ ಇದೆ . ಹಣ್ಣೂ ಬಿಡುತ್ತದೆ !:) ಈಗ ಹಣ್ಣು ಇದೆಯಾ ,ಬೀಜ ಸಿಗುತ್ತದಾ ನೋಡ ಬೇಕು !:D ಸಿಗುವುದಾದರೆ ತಿಳಿಸುತ್ತೇನೆ
ಲಕ್ಷ್ಮಣಫಲ ದ ಮಾರುಕಟ್ಟೆ ಯಲ್ಲಿ ಎಷ್ಟು ದರ ವಿದೆ, ನಮ್ಮ ತೋಟ ದಲ್ಲಿ ಬೇಲಿತಿದೀವಿ ದಯಮಾಡಿ ತಿಳಿಸಿ ಕೊಡಿ
ಲಕ್ಷ್ಮಣ ಫಲ ಕ್ಯಾನ್ಸರ್ ರೋಗಕ್ಕೆ ರಾಮಬಾಣ ಎಂದು ನಮ್ಮ ಸಂಬಂಧಿಕರು ಹೇಳಿದರು.ಆಗ ಅವರು ಹಣ್ಣನ್ನು ಕೊಟ್ಟು ತುಂಬಾ ಒಳ್ಳೆಯದು ಎಂದಾಗ ನಂಬಲಾಗಲಿಲ್ಲ.ಅದನ್ನು ಮನೆಯವರು ತಿನ್ನುತ್ತಿದ್ದೇವೆ.