ಬಯಲು
ನೆರಳು ಕಾಣದ ಬಯಲು
ಇಳೆಯ ಓಲೆಯ ಕವಲು
ದಾರಿ ಸಾಗುವ ಪಯಣವೊಂದು
ಅಂಟಿಸಿ ನಿಂತಿದೆ ಜಗವಿಂದು
ಸಾಗಿದ ದಾರಿಯ ನಡೆಯೊಂದು
ಕಾಣದು ಬಯಲಲಿ ಸುಮ್ಮನೆ
ಬದುಕಿನ ಒಲವಿಗೆ ಚೆಲುವಿಗೆ
ದನಿಯಾಗುವ ಒಲವೊಂದು
ಕಂಡಷ್ಟು ದೂರ ದಾರಿಗೆ ಗಗನ
ಸಾಗಿದಷ್ಟು ಸಹಜ ದೂರ ಪಯಣ
ಪದಪದಗಳ ಮಾತೇ ಮತ್ತೆ ಕವನ
ಸಾಲು ಸಾಲು ಚಿತ್ರಗಳ ಕಥನ
ಬಯಲು ಬಯಲಾಗಿ ಉಳಿವುದು
ಉಸಿರು ಹಗುರವಾಗಿ ಸಾಗುವುದು
ಜೀವನ ನೆರಳು ಬೆಳಕಿನ ಕಿರಣ
ಇಳೆಗೆ ಮುಗಿಯಬೇಕು ಕರಣ
ದಿನದ ತಂಗಾಳಿ ಬೀಸಿ ಬಂದು
ಹೊಸಗಾನ ಸವಿ ಹೊತ್ತು ತಂದು
ಮುತ್ತಂತ ಹನಿಯ ಬಿಂದು
ಜಗದೊಳಗೆ ಬದುಕು ಸಿಂಧು
-ನಾಗರಾಜ ಬಿ.ನಾಯ್ಕ, ಕುಮಟಾ
ಅರ್ಥ ಪೂರ್ಣ ವಾದ ಕವನ..ಸಾರ್
ಚಂದದ ಅರ್ಥಪೂರ್ಣ ಕವನ. ಅಭಿನಂದನೆಗಳು.
ಚಂದದ ಕವನ
ಸುಂದರ ಪ್ರಕೃತಿಯ ವರ್ಣನೆ ತುಂಬಿದ ಸರಳ ಚಂದದ ಕವನ