ಕಾವ್ಯ ಭಾಗವತ 19 : ಧ್ರುವ – ೦1
19 .ಧ್ರುವ – 02
ಚತುರ್ಥ ಸ್ಕಂದ – ಅಧ್ಯಾಯ – 02
ಸ್ವಾಯಂಭೂವ ಮನುವಿನ
ಸಂತತಿಯಲಿ
ಅಧರ್ಮ ಲೋಭ ಕ್ರೋಧ
ಹಿಂಸೆ ಭೀತಿ ಯಾತನೆ
ಸಂತಾನ ವೃದ್ಧಿಯಾಗಿ
ಮೋಕ್ಷಾಭಿಲಾಷಿ ಜೀವಿಗಳಿಗೆ
ಕಂಟಕವಾಗಿ ನರಳಿದವರಿಗೆ
ಸರಿದಾರಿ ತೋರಲು
ಜನಿಸಿದವನೇ ಧ್ರುವ
ಅದೇ ಸ್ವಾಯಂಭಾವ ಮನುವಿನ
ಕುಲದ ಉದ್ಧಾರಕ
ತಂದೆ ಉತ್ತಾನಪಾದ
ತಾಯಿ ಸುನೀತಿ
ಮಲತಾಯಿ ಸುರುಚಿ
ದಿವ್ಯ ಆಮ್ರಫಲದ ರುಚಿಯಾದ
ತಿರುಳುಂಡು ಸುರುಚಿ
ಹಡೆದ ಮಗು ಉತ್ತಮ
ದೃಢ ವೋಟೆ ಭಕ್ಷಿಸಿ
ಸುನೀತಿಯ ಉದರದಲಿ
ಉದ್ಭವಿಸಿದವ ಧ್ರುವ
ರಾಜನ ಮೋಹದ ಮಡದಿ ಸುರುಚಿಯ
ಮೋಹಪಾಶದಲಿ
ಅಂಧನಾದ ರಾಜ
ಪುಟ್ಟಬಾಲಕ ಧ್ರುವ
ತನ್ನ ಮಡಿಲೇರಲು ಬಿಡದೆ
ಕಡೆಗಣಿಸಿದಾಗ
ಮಲತಾಯಿ ಸುರುಚಿ
ಕಟುನುಡಿಗಳನ್ನಾಡಿ
ಐದು ವರುಷದ ಪೋರ
ತನ್ನ ಮಲತಾಯಿಯ
ಕ್ರೂರ ನುಡಿಗಳಿಂದ
ಅಪಾರ ಶೋಕ ಅವಮಾನದಿ
ಜರ್ಜರಿತನಾದ ಬಾಲಂಗೆ
ಸಂತೈಸಿ,
ಈ ಜಗದ ಸಕಲ ಜೀವಿಗಳಿಗೂ
ಬ್ರಹ್ಮಾದಿ ರುದ್ರ ಸಕಲ ದೇವತೆಗಳಿಗೂ
ಶ್ರೀಮನ್ ನಾರಾಯಣನೇ ಪರಮ ದೈವ
ಅವನೊಲುಮೆ ಗಳಿಸಲು
ದೃಢ ಭಕ್ತಿ ವೈರಾಗ್ಯದಲಿ
ಏಕಾಗ್ರಚಿತ್ತದಿಂ ನೀ
ತಪವಂಗೈದು
ಹರಿಕೈಪೆಗೆ ಪಾತ್ರನಾಗಿ
ನಿನ್ನಿಷ್ಟಾರ್ಥಗಳನ್ನು ಪಡೆ
ಎಂದ ಮಾತೆಯೆ ಕಾಲಿಗೆರಗಿ
ಧ್ರುವ ವನದೆಡೆಗೆ ನಡೆದ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41374
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಚಿಕ್ಕಂದಿನಲ್ಲಿ ಬಹಳಷ್ಟು ಸಾರಿ ನಮ್ಮ ತಾತನ ಬಾಯಲ್ಲಿ ಕೇಳಿದ ಧ್ರುವನ ಕಥೆ…ಅದರ ನೆನಪು ಮರು ಕಳಿಸಿತು.. ಸಾರ್
ಅನಾಥೋ ದೈವರಕ್ಷಕ ಎಂಬಂತೆ, ತಂದೆ ತಾಯಿಯರಿದ್ದೂ, ರಾಜಕುಮಾರನಾದರೂ ನಿಕೃಷ್ಟಕ್ಕೆ ಒಳಗಾದ ದೃವನಿಗೆ ಶ್ರೀಮನ್ನಾರಾಯಾಣನೇ ರಕ್ಷಕನಾದ, ಪುರಾಣದ ಮನಮುಟ್ಟುವ ಭಾಗ ಕಾವ್ಯರೂಪದಲ್ಲಿ ಸರಳವಾಗಿ, ಸಹಜವಾದ ಸುಮಧುರ ರೂಪದಿಂದ ಇಲ್ಲಿ ಮೂಡಿ ಬಂದಿದೆ. ಅಭಿನಂದನೆಗಳು.
Very nice
ಪದ್ಯ ರೂಪದ ಧ್ರುವ ಚರಿತೆ ಸೊಗಸಾಗಿ ಮೂಡಿಬಂದಿದೆ.