ಕವಿತೆಯಲ್ಲವೇ?.
ಅಕ್ಕರಗಳನ್ನೆಲ್ಲ
ಅಕ್ಕರೆಯಲಿ ಜೋಡಿಸಿದಾಗ
ಸಕ್ಕರೆ ಪಾಕದಂತಾಗುವುದು
ಕವಿತೆಯಲ್ಲವೇ?.
ಜೀವನದ ಅನುಭವಗಳ
ನವನೀತವನು ಕಡೆದಾಗ
ಕಾವ್ಯ ಅಮೃತವಾಗುವುದು
ಕವಿತೆಯಲ್ಲವೇ?.
ನೋವು ನಲಿವುಗಳ
ಕಾವಿನಲ್ಲಿ ಬೆಂದಂತಹ
ಕವಿಯು ಕಟ್ಟುವುದು
ಕವಿತೆಯಲ್ಲವೇ?.
ತೋಚಿದೊಡನೆ
ಗೀಚಿ ಬರೆದಾಗ
ಹೊಚ್ಚ ಹೊಸದೆನಿಸುವುದು
ಕವಿತೆಯಲ್ಲವೇ?.
ಯಾರು ಹೊಗಳಿದರೇನು
ಯಾರು ತೆಗಳಿದರೇನು
ನೂರು ಬಾರಿ ಬರೆಯಬೇಕೆನಿಸುವುದು
ಕವಿತೆಯಲ್ಲವೇ?
-ಶಿವಮೂರ್ತಿ.ಹೆಚ್. ದಾವಣಗೆರೆ.
ೀವು ಬರೆದ ಕವಿತೆ ಆಗಿದೆ
ಧನ್ಯವಾದಗಳು ಸರ್
ಸುಂದರವಾದ ಈ ಸಾಲುಗಳೂ ಕವಿತೆಯಲ್ಲವೇ?? ತುಂಬಾ ಚೆನ್ನಾಗಿದೆ ಸರ್
ಧನ್ಯವಾದಗಳು ಮೇಡಂ
ಸುಂದರ ಕವಿತೆ ಕಟ್ಟುವ ಸೊಗಸಾದ ಬಗೆಗಳು ಹಲವಾರು. ಅದನ್ನು ಕವನ ರೂಪದಲ್ಲೇ ತಿಳಿಸಿದ ಪರಿ ಬಹಳ ಚಂದ!