“ದೋಸೆ”
ಏನು ಮೋಡಿ ಮಾಡಿದಿಯೋ ದೋಸೆ,
ಎಲ್ಲರಲೂ ಮೂಡಿದೆ ನಿನ್ನ ಸವಿಯಬೇಕೆಂಬ ಆಸೆ,
ಬೆಣ್ಣೆ ತುಪ್ಪ ಸವರಿದ ನೀನೆಂದರೆ ಎಲ್ಲರಿಗೂ ಅಚ್ಚುಮೆಚ್ಚು
ನಿನ್ನ ಸವಿದು ವಾಟ್ಸಪ್ಪಲಿ/ಫೇಸಬುಕ್ಕಲಿ ಚಿತ್ರತೆಗೆದು ಕಳಿಸಿ
ಹೆಚ್ಚಿಸುತಿಹರು ನಿನ್ನ ವರ್ಚಸ್ಸು,
ಸೆಟ್ಟು, ಮಸಾಲೆ, ಖಾಲಿ, ತುಪ್ಪಾ ಬೆಣ್ಣೆ, ಪೇಪರ್, ನೀರು
ಹೀಗೆ ವಿವಿಧ ರೂಪಗಳಿಂದ ಕಂಗೊಳಿಸುತಿಹೆ ಎಲ್ಲೆಲ್ಲೂ,
ರಜೆ ಇದ್ದಾಗಲೊಮ್ಮೆ ನಿನ್ನ ರುಚಿ ಸವಿಯುವದೇ ಒಂದು ಸ್ಪೆಶಲ್ಲು,
ಮಾವಳ್ಳಿ, ಮೈಲಾರಿ ಕೊಟ್ಟೂರೇಶ್ವರ,ದ್ವಾರಕಾ,
ವಿದ್ಯಾರ್ಥಿ ಮುಂತಾದವರಿಗೆ ಹೆಸರು ತಂದಿದ್ದೇ ನೀನು,
ಆಗಿರುವೆ ನೀ ಅವರಿಗೆ ಕಲಿಯುಗದ ಕಾಮಧೇನು
ದಾವಣಗೆರೆಗೆ ಬಂದರೆ ನಿನ್ನ ಬೆಣ್ಣೆ ಅಲಂಕಾರದ ರೂಪ
ನೆನಪಾಗಿ ಮೂಡುವದು ಮಧುರ ಭಾವನೆ..
ಧಾರವಾಡದ ‘ಬಾಂಬೆ’ಗೆ ಬಂದರೆ ತುಪ್ಪ ಸವರಿದ ನಿನ್ನ ಸವಿ
ಮೂಡಿಸುವದೆಮಗೆ ಹೊಸ ಚೇತನವನ್ನೆ!..
-ಮಾಲತೇಶ ಎಂ ಹುಬ್ಬಳ್ಳಿ
ನಿಮ್ಮ ಕವನ ಓದಿ ಈಗ ಅರ್ಜೆಂಟ್ ಆಗಿ ನಾನೂ ದೋಸೆ ತಿನ್ಬೇಕು ಸರ್. ರುಚಿಕರವಾದ ಕವನ
ಧನ್ಯವಾದಗಳು ಮೇಡಮ್
ಸೂಪರ್ ದೋಸೆಯ ವರ್ಣನೆ ಸರ್
ಧನ್ಯವಾದಗಳು ಮೇಡಮ್
ವಿವಿಧ ದೋಸೆಗಳ ಸುಮಧುರ ಸುವಾಸನೆಯನ್ನು ಹೊತ್ತ ರುಚಿಕರವಾದ ದೋಸೆ ಕವನ ಸೂಪರ್ ಸರ್.
ಧನ್ಯವಾದಗಳು ಮೇಡಮ್