ಪಾನಿಪುರಿಯೂ ಕಲಾವಂತಿಕೆಯೂ ..
ತಾವು ಮಾಡುವ ಕೆಲಸ ಯಾವುದೇ ಆಗಲಿ, ಅದರೆ ಮೂಲ ಉದ್ದೇಶ ಹಣಸಂಪಾದನೆಯೇ ಆಗಿರುತ್ತದೆ. ಕೆಲಸದಲ್ದ್ಲಿ ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಅದು ಯಾವುದೇ ಕೆಲಸವಾಗಿರಲಿ ಸಂತೋಷದಾಯಕವಾಗಿರುತ್ತದೆ. ಇದು ಎಷ್ಟು ಗಳಿಸುತ್ತೇವೆ ಎಂಬುದರ ಮೇಲೆ ಆಧಾರಿತವಾಗಿಲ್ಲ.
ಆಫೀಸಿನಲ್ಲಿ ಎ.ಸಿ ರೂಮಿನಲ್ಲಿ ಕುಳಿತಿದ್ದರೂ, ಸ್ಟ್ರೆಸ್, ಟಾರ್ಗೆಟ್ ಎಂದು ಜೋಲುಮುಖದಲ್ಲಿ ಇರುವ ವಿದ್ಯಾವಂತರ ನಡುವೆ, ರಸ್ತೆಬದಿಯಲ್ಲಿ ಪಾನಿಪುರಿ, ಚುರುಮುರಿ ತಯಾರಿಸಿ ಹಣ ಸಂಪಾದಿಸುವ ಕೆಲಸದಲ್ಲಿಯೂ ಕಲಾವಂತಿಕೆ ಮೆರೆವ ಈ ಹಸನ್ಮುಖಿ ಎದ್ದು ಕಾಣುತ್ತಾನೆ!