ಅಮ್ಮ ಎಂದರೆ ಅಷ್ಟೇ ಸಾಕೆ?
ತನ್ನೊಡಲಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಹೆಣ್ಣು ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ತಾಳೆ. ಒಬ್ಬ ಸಾಮಾನ್ಯ ಹೆಣ್ಣು ದೈವತ್ವಕ್ಕೇರುವ ಪಯಣ ಆರಂಭವಾಗೋದೇ ಆಗ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿಯಿದೆ!
.
ತಾಯಿ ಎಂಬ ಶಿಲ್ಪಿಗೆ ಆಕಾರವಿಲ್ಲದ ಕಲ್ಲನ್ನೂ ಸಂಸ್ಕಾರದ ಉಳಿಪೆಟ್ಟಿನಿಂದ ಪೂಜನೀಯ ಮೂರ್ತಿಯನ್ನಾಗಿಸುವ ತಾಕತ್ತಿದೆ. ಇಂದು ಮಹೋನ್ನತವಾದದ್ದನ್ನು ಸಾಧಿಸಿದ ಶೇ.95 ರಷ್ಟು ಜನರ ಸಾಧನೆಯಲ್ಲಿ ನಿಸ್ಸಂದೇಹವಾಗಿ ಅವರಮ್ಮನ ಬೆವರಿದೆ, ಆಕೆಯ ನಿದ್ದೆಯಿಲ್ಲದ ರಾತ್ರಿಯಿದೆ, ಹಸಿದ ಹೊಟ್ಟೆಯ ತ್ಯಾಗವಿದೆ!'[ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ!]. ಸ್ವಂತ ಮಗನಿಂದ ಪರಿತ್ಯಕ್ತಳಾಗಿ ವೃದ್ಧಾಶ್ರಮದ ಮೂಲೆಯೊಂದರಲ್ಲಿ ಕೂತರೂ ಅದೇ ಮಗನ ಬಾಲ್ಯವನ್ನು ನೆನಪಿಸಿಕೊಂಡು ನಸುನಗೆಬೀರುವ, ಆತನ ಭವಿಷ್ಯ ಚೆನ್ನಾಗಿರಲೆಂದು ಎರಡೂ ಕೈಯೆತ್ತಿ ಹಾರೈಸುವ ಆ ದೈವತ್ವದ ಸಾಕಾರ ಮೂರ್ತಿಯನ್ನು ಪುಟ್ಟ ಲೇಖನದಲ್ಲಿ ಕಟ್ಟಿಹಾಕೋಕೆ ಸಾಧ್ಯಾನಾ..?
ಜಗ ಮೆಚ್ಚಿದ ಸಂತನ ಕಣ್ಣಲ್ಲಿ ಅಮ್ಮ:-
ಈಗ ನಾನು ಏನಾಗಿದ್ದೀನೋ, ಅದಕ್ಕೆ ಕಾರಣ ನಮ್ಮಮ್ಮ. ನಾನು ಇನ್ನೇನೇ ಆದರೂ ಆಕೆಯ ಋಣವನ್ನು ತೀರಿಸುವುದಕ್ಕಂತೂ ಸಾಧ್ಯವಿಲ್ಲ ಎಂಬ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಮಾತು ತಾಯಿ ಎಂಬ ಪಾತ್ರದ ಮಹೋನ್ನತಿಯನ್ನು ಪ್ರಸ್ತುತಪಡಿಸುತ್ತದೆ..
ನನ್ನ ತಾಯಿ ನಡೆದಾಡುವ ದೇವರು:-
ದಿ ರೆವೆನೆಂಟ್ ಚಿತ್ರದ ಅಭಿನಯಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡ ಲಿಯೋನಾರ್ಡೋ ಡಿ ಕ್ಯಾಪ್ರಿಯೋ ತಮ್ಮೆಲ್ಲ ಸಾಧನೆಗೂ ಸ್ಫೂರ್ತಿ ತಮ್ಮಮ್ಮ ಎನ್ನುತ್ತಾರೆ. ನಮ್ಮಮ್ಮ ನನ್ನ ಬದುಕಿನ ನಡೆದಾಡುವ ದೇವರು ಎಂದು ಹೆಮ್ಮೆಯಿಂದ ಕಣ್ತುಂಬಿಸಿಕೊಂಡು ಹೇಳುವ ಅವರ ದನಿಯಲ್ಲಿ ಅಮ್ಮನ ಕುರಿತ ಅವ್ಯಕ್ತ ಪ್ರೀತಿಯ ಮಹಾಪೂರವೇ ಹರಿದಿದೆ.
ಈ ಜಗತ್ತಿನಲ್ಲಿ ತಾಯಿಗೆ ಎಲ್ಲರೂ ತಲೆ ಬಾಗುತ್ತಾರೆ. ತಾಯಿಯೇ ನಿಜವಾದ ದೇವರು. ನಾವು ಎಷ್ಟೇ ದೊಡ್ಡ ವ್ಯಕ್ತಿ ಆದ್ರೂ ಕೂಡ ತಾಯಿಯ ಮುಂದೆ ಎಂದು ಸಣ್ಣ ಮಗುವೆ.
,
ಅಗಣಿತ ಗುಣಗಳ ಖನಿ… ಎಲ್ಲರ ಅಮ್ಮ… ಮಪ ಮುಟ್ಟುವ ಸುಂದರ ಲೇಖನ
SUPER
SUPER