ಬೇಕಾಗಿದೆ ಖುಷಿಯ ಸಿಂಚನ
ಬೇಕಾಗಿದೆ ಖುಷಿಯ ತಣ್ಣೀರ ಸಿಂಚನ
ಬಿಸಿಲಲಿ ಬೆಂದ ಮನದ ಮರುಭೂಮಿಗೆ
ಹಗಲು ಇರುಳಿನ ನಿತ್ಯ ಚಕ್ರಕೆ
ಬದುಕು ಬವಣೆಯಅಟ್ಟಹಾಸಕೆ
ಭರವಸೆಯ ಕನವರಿಕೆ ಬೇಕಿದೆ.
ಮಂದಹಾಸದ ನಗುವು ಬೇಕಿದೆ
ಮರುಭೂಮಿಯ ಬೆಂದ ಮನಸಿಗೆ.
ಕವಲು ಹಾದಿಯ ಕಲ್ಲು ಮುಳ್ಳಿನ ಹೃದಯ ತೀರಕೆ
ಪ್ರೀತಿಯ ಸ್ಪರ್ಶ ಬೇಕಿದೆ
ಮನದಲಿ ಹರ್ಷದ ಓಯಸಿಸ್ ಪುಟಿಯ ಬೇಕಿದೆ.
.
– ರಾಘವ್ ರಾವ್ , ಚೆನ್ನೈ
ಖುಷಿಯ ಹನಿ ಸಿಂಚನ ಚೆನ್ನಾಗಿದೆ
ಭರವಸೆಯ ಬೆಳಕಿನಲ್ಲಿ ಮಿನುಗಬೇಕು ಸಂತಸದ ಹನಿ..ಅರ್ಥಪೂರ್ಣ ಚಂದದ ಕವನ.
Thank you