ಸುಂದರ ನಿಸರ್ಗ, ಆಗದಿರಲಿ ನರಕ
ಮಾನವ ಇತ್ತೀಚಿಗೆ ಸ್ವಾರ್ಥ , ದುರಾಸೆ, ಅಹಂಕಾರಗಳ ಗಣಿಯೇ ಆಗಿದ್ದಾನೆ. ಇಡೀ ಲೋಕದಲ್ಲಿ ತನ್ನದೊಬ್ಬನದ್ದೇ ಆಡಳಿತ ಅನ್ನುವ ಹಾಗೆ ಮೆರೆಯುತ್ತಿದ್ದಾನೆ. ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ, ಅಪರಿಮಿತವಾದ ವಾಹನ ಬಳಕೆ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ , ಕಸ ಎಸಿಯುವುದು ಇವುಗಳು ಮಾನವನ ಅಹಂಕಾರ ಹಾಗೂ ಅನಾಗರಿಕತೆಯ ಪ್ರತೀಕ.
ಹಸಿರಾದ ಕಾಡನ್ನು ನಾಶ ಮಾಡಿ ಅಲ್ಲಿ ಕಾಂಕ್ರೀಟ್ ಕಾಡು ಅಂದರೆ ಬೃಹತ್ ಕಟ್ಟಡಗಳನ್ನು ನಿರ್ಮಿಸುತ್ತಾನೆ. ಇದರಿಂದ ಹಲವಾರು ಪಕ್ಷಿ ಸಂಕುಲಗಳು, ಜೀವ ಸಂಕುಲಗಳು ನಾಶವಾಗುತ್ತವೆ . ಹಲವಾರು ಕೆರೆಗಳನ್ನು ಮುಚ್ಚಿಸಿ ಅದರ ಮೇಲೆ ಕಟ್ಟಡಗಳನ್ನು ನಿರ್ಮಿಸಿದ ಹಲವಾರು ದೃಷ್ಟಾಂತಗಳಿವೆ. ಇದರಿಂದ ಆ ಕೆರೆಯಲ್ಲಿ ವಾಸಿಸುತ್ತಿದ್ದ ಹಲವು ಜಲಚರಗಳು ಜೀವಂತ ಸಮಾಧಿಯಾಗಿವೆ .
ಮನುಷ್ಯನ ಈ ಸ್ವಾರ್ಥವೇ ಅವನಿಗೆ ಮುಳುವಾಗಬಲ್ಲುದು. ಮಾನವನ ಈ ಎಡಬಿಡಂಗಿ ಕೆಲಸಗಳಿಂದಾಗಿ ಮೊದಲಿದ್ದ ಹಲವಾರು ಪ್ರಭೇದದ ಪ್ರಾಣಿ ಪಕ್ಷಿಗಳು , ಗಿಡಮರಗಳು ನಾಶವಾಗಿವೆ. ಅರಣ್ಯನಾಶ ಹಾಗು ಕೆರೆಗಳ ಮುಚ್ಚುವಿಕೆಯಿಂದಾಗಿ ಸರಿಯಾಗಿ ಮಳೆಯಾಗದೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಇಷ್ಟಾದರೂ ಮಾನವನಿಗೆ ಬುದ್ದಿ ಬಂದಿಲ್ಲ. ಈಗ ಎಲ್ಲೆಂದರಲ್ಲಿ ನೋಡಿದರೆ ಸಾಲು ಸಾಲು ವಾಹನಗಳು ಜೊತೆಗೆ ಕಾರ್ಖಾನೆಗಳು ಹೊಗೆ ಸೂಸಿ ವಾಯುಮಾಲಿನ್ಯ ಉಂಟು ಮಾಡುತ್ತವೆ. ವಾಹನಗಳನ್ನು ಬಳಸಲೇ ಬಾರದು ಎಂದಲ್ಲ, ಅದರ ಬಳಕೆ ಒಂದು ಮಿತಿಯಲ್ಲಿ ಇದ್ದರೆ ಒಳ್ಳೆಯದು ಎಂದು.
ಇನ್ನೊಂದು ದುಃಖಕರ ಸಂಗತಿ ಎಂದರೆ ಈ ಭೂಮಿ ಪ್ಲಾಸ್ಟಿಕ್ ಮಯವಾಗಿರುವುದು. ಎಲ್ಲಿ ನೋಡಿದರೂ ಬರಿ ಪ್ಲಾಸ್ಟಿಕ್ ಕಸವೇ ತುಂಬಿದೆ . ಪ್ಲಾಸ್ಟಿಕ್ ಅನ್ನು ನಿಷೇಧಿಸಲು ಸರಕಾರ ಕ್ರಮ ಕೈಗೊಂಡರೂ ಜನ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ . ಈ ರೀತಿ ಮಾನವ ಪ್ರಕೃತಿ ಯನ್ನು ಶೋಷಣೆ ಮಾಡುತ್ತಾ ತನ್ನ ನಾಶಕ್ಕೆ ತಾನೇ ನಾಂದಿ ಹಾಡುತಿದ್ದಾನೆ ಎನ್ನುವುದು ವಿಪರ್ಯಾಸ .
– ಸುದರ್ಶನ್ . ಬಿ,
10ನೇ ತರಗತಿ, ಸತ್ಯನಾರಾಯಣ ಹೈಸ್ಕೂಲ್ , ಪೆರ್ಲ .
ಚೆನ್ನಾಗಿ ಬರೆದಿರುವೆ ಸುದರ್ಶನ …ಪರಿಸರದ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕಾಗಿದೆ…
ಚೆಂದದ ಬರಹ..ಇನ್ನೂ ಬರೆಯುತ್ತಲಿರು ಸುದರ್ಶನ್
ಚಂದದ ಸಕಾಲಿಕ ಬರಹ. ಸುದರ್ಶನ್ ಗೆ ಶುಭಾಶಯಗಳು.