ಎಚ್ಚರ ಗೋಪಿ
ಎಚ್ಚರ ಗೋಪಿ ಎಚ್ಚರ
ಗೊಲ್ಲ ಗೋಪ ಕದ್ದು ಬರುವ
ಮೆಲ್ಲ ಸೆರಗ ಸೆಳೆದು ಬಿಡುವ
ಎಚ್ಚರ ಗೋಪಿ ಎಚ್ಚರ
ಸದ್ದು ಹರಡದಂತೆ ಹೊರಗೆ
ಕಡೆವ ಕೋಲ ಮೆಲ್ಲ ಮಥಿಸು
ಬೆಣ್ಣೆ ಬೆರಳು ಮೂಸಿ ಬರುವ
ಮುರಳಿಯಾಡಿ ಮರುಳುಮಾಡಿ
ನವನೀತ ಮೆದ್ದು ಬಿಡುವ
ಗಡಿಗೆಯಂಚು ಬಿಡದೆಕುಡಿವ
ಎಚ್ಚರ ಗೋಪಿ ಎಚ್ಚರ
ಎಳೆಯ ಬಾಲನೆಂದು ಬಳಿಗೆ
ಬಿಟ್ಟುಕೊಳ್ಳದಿರು ಗೋಪಿ
ಕುಣಿಸಿ ನಲಿಸಿ ಕನಸ ಹೆಣೆಸಿ
ಮನವ ಕೆಡಿಸಿ ಮುತ್ತನೀವ
ರಂಗಿನಾಟ ಬಲ್ಲನವನು
ಬಾಲಚೋರನು ಅವನು ಯಶೋಧೆ
ಕಂದನು
ಎಚ್ಚರ ಗೋಪಿ ಎಚ್ಚರ
.
-ನಾಗರೇಖಾ ಗಾಂವ್ಕರ್
ಬೆಣ್ಣೆ ಕಳ್ಳನ ಕಳ್ಳಾಟಗಳ ಸೊಗಸಾದ ವರ್ಣನೆ
ಧನ್ಯವಾದ ಮೇಡಂ
ಧನ್ಯವಾದ ಮೇಡಂ
ನವನೀತ ಚೋರ..ಮುದ್ದು ಕೃಷ್ಣನ ಬಾಲ ಲೀಲೆ. ಕವಿತೆ ಚೆನ್ನಾಗಿದೆ.