ಅಪೂರ್ವ-ರಂಗಪ್ರವೇಶ
ಭಾನುವಾರ (03/09/2017) ಸಂಜೆ, ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಕುಮಾರಿ ಅಪೂರ್ವ ಅವರ ಭರತನಾಟ್ಯ ರಂಗಪ್ರವೇಶವು ಬಹಳ ಸೊಗಸಾಗಿ ನೆರವೇರಿತು. ಈಕೆ ಮೈಸೂರಿನ ನೃತ್ಯಗಿರಿ ಸಂಸ್ಥೆಯ ಖ್ಯಾತ ವಿದುಷಿ ಕೃಪಾ ಫಡ್ಕೆ ಅವರ ಶಿಷ್ಯೆ. ನಮ್ಮ ಸ್ನೇಹಿತರಾದ ಪೂರ್ಣಿಮಾ ಮತ್ತು ಸುರೇಶ್ ಅವರ ಪುತ್ರಿ.
ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಖ್ಯಾತಿಯ ಡಾ.ನಾ.ಸೋಮೇಶ್ವರ್, ವಿಜಯವಾಣಿ ದಿನಪತ್ರಿಕೆ ಹಾಗೂ ದಿಗ್ವಿಜಯ ಚಾನೆಲ್ ನ ಮುಖ್ಯ ಸಂಪಾದಕರಾದ ಶ್ರೀ ಹರಿಪ್ರಕಾಶ್ ಕೋಣೆಮನೆ, ರಾಸವೃಂದ ಕಲಾಸಂಸ್ಥೆಯ ನಿರ್ದೇಶಕಿ ಶ್ರೀಮತಿ ನಂದಿನಿ ಈಶ್ವರ್ , ವಿದುಷಿ ಕೃಪಾ ಪಡ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ರಾಮಸ್ತುತಿ, ಗುರುವಂದನೆ, ‘ಮಾತೇ ಮಲಯಧ್ವಜ ಪಾಂಡ್ಯ ಸಂಜಾತೆ’ ಶಾರದಾ ಸ್ತುತಿಗಳೊಂದಿಗೆ ನೃತ್ಯವನ್ನು ಆರಂಭಿಸಿದ ಅಪೂರ್ವಳು, ಡಿವಿ.ಜಿ.ಯವರ ಅಂತ:ಪುರ ಗೀತೆಗೂ ‘ನಟನವಾಡಿದಳ್ ತರುಣಿ ನಟನವಾಡಿದಳ್’. ‘ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲ’ ಎಂಬ ಬಾಲಕೃಷ್ಣನ ಭಾವವನ್ನು ಈಕೆ ಪ್ರಸ್ತುತಿ ಪಡಿಸಿದ ಪರಿಯಂತೂ ಅಮೋಘವಾಗಿತ್ತು. ಅತಿಥಿಮಾನ್ಯರ ಸಮಯೋಚಿತ ಭಾಷಣಗಳು, ಸೊಗಸಾದ ನಿರೂಪಣೆ ಹಾಗೂ ಸುಶ್ರಾವ್ಯ ಸಂಗೀತದ ಸಾಂಗತ್ಯದೊಂದಿಗೆ ರಂಗಪ್ರವೇಶ ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು.
.
-ಹೇಮಮಾಲಾ.ಬಿ
ಭಾವಚಿತ್ರ ನೋಡಿ ಖುಶಿ ಆಯ್ತು.ಎಲ್ಲರಿಗೂ ಶುಭಾಶಯಗಳು.
ಸಂಸ್ಕ್ರತಿಯ ವೈಭವವೇ ಅಲ್ಲಿ ಮನೆಮಾಡಿತ್ತು. ವ್ಯವಸ್ಥೆಗಳೆಲ್ಲವೂ ಶ್ರೇಷ್ಠ ಮಟ್ಟದ್ದು