ಕಾರವಾರದ ಕಡಲ ತೀರ
ಶಹರ ಪ್ರದೇಶಗಳಲ್ಲಿ ಮಾನವರು ಯಂತ್ರಗಳಂತೆ ದುಡಿದು ದುಡಿದು ಸುಸ್ತಾದಾಗ ,ಮನಶ್ಯಾಂತಿಗಾಗಿ ತುಡಿತ ಹೆಚ್ಚಾದಾಗ ಕಾರವಾರ ಕಡಲತೀರಕ್ಕೆ ಹೋಗಿ ಸೂರ್ಯಾಸ್ತವನ್ನು ಅನುಭವಿಸಿದಾಗ ಸಿಗುವ ಆನದ ಅನುಭವಗಳು ವರ್ಣನಾತೀತ ,ಶಹರ ಜೀವನದ ಎಲ್ಲಾ ಜಂಜಡಗಳನ್ನು ಮರಯಲು ಇದು ಸೂಕ್ತ ಸ್ಥಳ. ಕಾರವಾರವು ಜಿಲ್ಲಾ ಕೇಂದ್ರವಾಗಿದ್ದು ಇದು ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಿದೆ.
ದಿವಂಗತ ಶ್ರೀ ರಬಿಂದ್ರನಾಥ ಟ್ಯಾಗೋರರು ತಮ್ಮ ಜೀವಿತ ಕಾಲದಲ್ಲಿ ಕೆಲವೊಂದು ದಿನ ಇಲ್ಲಿ ತಂಗಿದ್ದರು. ಆಗ ಅವರು ಇಲ್ಲಿಯ ಸೂರ್ಯಾಸ್ತದ ಸೊಬಗನ್ನು ಸವಿಯುತ್ತ ಇದ್ದರಂತೆ.ಆದ್ದರಿಂದ ಈ ಸಮುದ್ರ ತೀರಕ್ಕೆ ಅವರ ಹೆಸರನ್ನು ಇಟ್ಟಿದ್ದಾರೆ. ಕಡಲ ತೀರದ ಪ್ರವೇಶದಲ್ಲಿ ಅರ್.ಸಿ.ಸಿ ಮಹಾದ್ವಾರವನ್ನು ಕಟ್ಟಿದ್ದು ಅದಕ್ಕೆ “ರಬಿಂದ್ರನಾಥ ಟ್ಯಾಗೋರ ಕಡಲ ತೀರ” ಎಂದು ನಾಮಕರಣ ಮಾಡಿದ್ದಾರೆ. ಅಲ್ಲದೇ ಕಾರವಾರವು “ಕರ್ನಾಟಕದ ಕಾಶ್ಮೀರ “ಎಂದು ಕರೆಯಲ್ಪಡುತ್ತದೆ.
ಪ್ರಖ್ಯಾತ ಚಿತ್ರ ನಿರ್ದೇಶಕರಾದ ದಿವಂಗತ ಪುಟ್ಟಣ್ಣ ಕಣಗಲ್ಲ ಅವರ ದಿಗ್ದರ್ಶನದಲ್ಲಿ ನಿರ್ಮಿತವಾದ ಮತ್ತು ಮುಖ್ಯ ಭೂಮಿಕೆಯಲ್ಲಿ ನಟಿಸಿದ ಶ್ರೀಮತಿ ಆರತಿ ಹಾಗು ಪ್ರಣಯ ರಾಜ ಶ್ರೀನಾಥ ಮೇಲೆ ರಚಿತವಾದ ” ಶುಭ ಮಂಗಳ” ಚಿತ್ರದಲ್ಲಿಯ ಹಾಡು “ನಾಲ್ಕೊಂದಲೇ ನಾಕು … ನಾಲ್ಕೆರಡಲೇ ಎಂಟು”
ಎಂಬ ಚಿತ್ರಗೀತೆ ಇದೇ ಸಮುದ್ರದಲ್ಲಿ ಚಿತ್ರೀಕರಣವಾಗಿದೆ. ಕಾರವಾರದಲ್ಲಿ ನೋಡಬೇಕಾದ ಸ್ಥಳಗಳು ಸಾಕಷ್ಟು ಇವೆ, ಅವುಗಳಲ್ಲಿ ಮುಖ್ಯವಾಗಿ :
- ಕಾರವಾರ ಶಿಪ ಯಾರ್ಡ
- ಬಾಡ ಗ್ರಾಮದಲ್ಲಿಯ ಶ್ರೀ ಪದ್ಮನಾಭ ಮಹಾರಾಜರ ಗುರು ಮಠ
- ಕಾಳಿ ನದಿಯು, ಸಮುದ್ರಕ್ಕೆ ಸೇರುವ ಸ್ಥಳ
- ದೇವಬಾಗ ಸಮುದ್ರ ತೀರ
- ಕೂರ್ಮ ಗಡ್ಡೆ (ದ್ವೀಪ) ಯಲ್ಲಿಯ ಶ್ರೀ ನರಸಿಂಹ ದೇವಸ್ಥಾನ
- ಸದಾಶಿವಗಡದಲ್ಲಿ ಛತ್ರಪತಿ ಶಿವಾಜಿ ನಿರ್ಮಿಸಿದ ಶಾಂತ ದುರ್ಗಾ ಮಂದಿರ
- ಶೇಜವಾಡದಲ್ಲಿಯ ಪುರಾತನ ಶಿವ ಮಂದಿರ
- ಕಾಳಿ ಮಂದಿರ
- ಸಾಯಿ ಕಟ್ಟೆಯಲ್ಲಿಯ ಎರಡು ಸಾಯಿಬಾಬ ಮಂದಿರ
- ಶಂಕರ ಮಠ
- ಇಸ್ಕೋನ ಟೆಂಪಲ್ ಮುಂತಾದವುಗಳು .
ಇಲ್ಲಿಯ ತ್ರಿಚಕ್ರ ವಾಹಕರು (ರಿಕ್ಷಾ ಡ್ರೈವರ್ಸ್) ಪ್ರಾಮಾಣಿಕರಿದ್ದು ರೂಪಾಯಿ 400/- ರಲ್ಲಿ ( 4 ಜನರಿಗೆ) ಕಾರವಾರದ ಸುಪ್ರಸಿದ್ಧ ಸ್ಥಳಗಳನ್ನು ತೋರಿಸುತ್ತಾರೆ , ಹಾಗೆಯೇ ಇಲ್ಲಿಂದ ಗೋವಾ ಬಾರ್ಡರ್ 25 ಕಿಲೋಮೀಟರು ದೂರದಲ್ಲಿದ್ದು, ತೀರ್ಥ ಪ್ರೀಯರು ಕಡಮೆ ದರದಲ್ಲಿ ತೀರ್ಥಪಾನಂಗೈದು ಮೈಮರೆಯಬಹುದು . ಜೊತೆಗೆ ವಿವಿಧ ನಮೂನೆಯ ಮೀನುಗಳ ಖಾದ್ಯಗಳ ರುಚಿ ನೋಡಬಹುದು.
ನಾನು ಕುಟುಂಬ ಸಮೇತ ಇತ್ತೀಚೆಗೆ ಕಾರವಾರಕ್ಕೆ ಪಯಣಿಸಿದಾಗ ವೀಕ್ಷಿಸಿದ ಸ್ಥಳಗಳ ವಿವರ ನೀಡಿದ್ದು,ಇಲ್ಲಿ ಕಳೆದ ಎರಡು ದಿನಗಳು ಹರ್ಷದಾಯಕವಾಗಿದ್ದವು. ಮನಶಾಂತಿ, ಸಮಾಧಾನ ಬಯಸುವ ವ್ಯಕ್ತಿಗಳಿಗೆ ಕಾರವಾರ ಪ್ರವಾಸ ಮಾಡುವದು ಸೂಕ್ತ ಎಂದು ಸೂಚಿಸುತ್ತ ನನ್ನ ಲೇಖನಿಗೆ ವಿರಾಮ ನೀಡುತ್ತೇನೆ.
.
.
– ರಂಗಣ್ಣ ಕೆ. ನಾಡಗೀರ್
,
Adbhutavad sangatiyanni tilisid tamage dhanyavadagalu .Heege hosa stalgal parichaya madi .Dhanyavadagalu
ಬರಹ ಚೆನ್ನಾಗಿದೆ . ತಮ್ಮ ಉದ್ಯೋಗಪರ್ವದ ಜೀವನಾನುಭವದಲ್ಲಿ ಹಾಗೂ ಈಗಿನ ನಿವೃತ್ತ ಜೀವನದಲ್ಲಿ, ಸಾಹಿತ್ಯ, ಪ್ರವಾಸದ ಆಸಕ್ತಿಯಿಂದ ಸಾಕಷ್ಟು ಪ್ರಯಾಣ ಮಾಡಿರಬಹುದಲ್ಲ . ಅವುಗಳ ಬಗ್ಗೆಯೂ ನೆನಪಿಸಿಕೊಂಡು ಬರೆಯಿರಿ. ಓದಲು ಸೊಗಸಾಗಿರುತ್ತದೆ .
Thanks for the information
chennaagi barediddeeri naanodi naliyuva kaaravaara…….kaDlina teera P.B.Shreenivaas avaru haadida haadu nenapaayitu
ಒಳ್ಳೆಯ ಮಾಹಿತಿ ಈ ಸಾರಿ ಊರಿಗೆ ಬಂದ ಮೇಲೆ ಒಂದ ಪ್ರವಾಸ ಮಾಡುವ ಮನಸಾಗಿದೆ.ಈ ಎಲ್ಲ ಪ್ರವಾಸಿ ತಾಣಗಳ ಜೊತೆ ಯಾಣವನ್ನೂ ನೋಡುತ್ತೆನೆ.