ಸಾವಿರ ಕಂಬದ ಬಸದಿ…

Share Button

1000 pillars basadi Moodabidre

 

ಮಂಗಳೂರಿನಿಂದ 34 ಕಿ.ಮೀ ದೂರದಲ್ಲಿರುವ ಮೂಡುಬಿದಿರೆಯನ್ನು ಮೂಡುಬಿದ್ರಿ, ಬೆದ್ರ ಎಂತಲೂ ಕರೆಯುತ್ತಾರೆ. ಹಿಂದೆ ಇಲ್ಲಿ ಬಹಳಷ್ಟು ಬಿದಿರು ಬೆಳೆಯುತ್ತಿದ್ದುದರಿಂದ ಇಲ್ಲಿಗೆ ‘ಬಿದಿರೆ’ ಎಂಬ ಹೆಸರಾಯಿತು. ಪೂರ್ವಭಾಗವು ಚೌಟ ಅರಸರ ಕಾರ್ಯಕ್ಷೇತ್ರವಾಗಿ ‘ಮೂಡುಬಿದಿರೆ’ಯೆಂದೂ, ಪಶ್ಚಿಮ ಭಾಗವು ಅರಬೀಸಮುದ್ರಕ್ಕೆ ಸಮೀಪವಿದ್ದು ವಾಣಿಜ್ಯ ನಗರವಾಗಿ ‘ಪಡುಬಿದ್ರಿ’ ಎಂದೂ ಗುರುತಿಸಲ್ಪಟ್ಟುವು.  16 ಜೈನರ ಬಸದಿಗಳು, 18 ದೇವಾಲಯಗಳು ಮತ್ತು 18 ರಸ್ತೆಗಳಿರುವ ನಗರ ಮೂಡಿಬಿದ್ರಿ.

ಮೂಡಬಿದಿರೆಯಲ್ಲಿ ಜೈನರ ಪ್ರಸಿದ್ಧ ಆರಾಧನಾ ಸ್ಥಳವಾದ ‘ಸಾವಿರ ಕಂಬದ ಬಸದಿ’ ಇದೆ. ಇದನ್ನು ಕ್ರಿ.ಶ.1462 ರಲ್ಲಿ ಕಟ್ಟಲಾಯಿತು. ಹೆಸರೇ ಸೂಚಿಸುವಂತೆ ಇಲ್ಲಿ ಕಲ್ಲಿನಲ್ಲಿ ಕೆತ್ತಲಾದ ಸಾವಿರ ಕಂಬಗಳಿವೆ. ಕಂಬಗಳಲ್ಲಿ ಮೂಡಿಸಲಾದ ಶಿಲ್ಪ ಆಕರ್ಷಣೀಯವಾಗಿದೆ.

ಅಂದಿನ ಸ್ಥಳೀಯ ಚೌಟ ಅರಸರ ಮತ್ತು ಜೈನ ಸಮುದಾಯದವರ ನೆರವಿನಿಂದ ಕಟ್ಟಲಾದ ಈ ಮೂರು ಅಂತಸ್ತಿನ ಬಸದಿಯಲ್ಲಿ 8 ಅಡಿ ಎತ್ತರದ ಭವ್ಯವಾದ ‘ಚಂದ್ರನಾಥ ಸ್ವಾಮಿಯ’ ಮೂರ್ತಿಯಿದೆ.

 

 – ಸುರಗಿ

 

(ಮಾಹಿತಿ: ವಿಕಿಪಿಡಿಯ)

 

 

2 Responses

  1. Hussain Koppa says:

    nice place

  2. Putta Swamy says:

    Wow beautiful .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: