Daily Archive: July 18, 2024
ಯಾವುದೇ ಲೇಖನ ಬರೆಯಬೇಕಾದರೂ ಅದಕ್ಕೊಂದು ಕಾರಣವಿರುತ್ತದೆ. ಬರೆಯಬೇಕೆನ್ನುವ ತುಡಿತ ಇದ್ದರೆ ಸಾಕೇ? ಅದಕ್ಕೆ ಸಮಯವೂ ಬೇಕು. ವಿಚಾರವೊಂದು ಮನಸ್ಸಿಗೆ ಹೊಳೆದಾಗ ಆ ಕೂಡಲೇ ಬರೆದರೆ ಅದೇನೋ ಸಮಾಧಾನ. ಆದರೆ ನಾನಾ ಕಾರಣಗಳಿಂದ ಅದೇ ದಿನ ಬರೆಯಲು ಸಾಧ್ಯವಾಗುವುದಿಲ್ಲ. ನಾಳೆ ಬರೆಯೋಣ ಎಂದು ಆ ಕೆಲಸ ಮುಂದೂಡಿದಾಗ ಹಲವು...
ಸರಸತಿಯ ಪದತಲಕೆ ಬಾಗುತಲಿ ಪೊಡಮಡುವೆಕರ ಪಿಡಿದು ನಡೆಸುತಲಿ ನೀ ಸಲಹು ತಾಯೆಪೊರೆಯುತಲಿ ಸತತವೂ ಸುಮತಿಯನು ನೀ ನೀಡುಚರಣಕೆರಗುವೆ ನಿನಗೆ ಬನಶಂಕರಿ ಮಗಳೆಂದು ಹೀನಾಯ ಮಾಡದೆಯೆ ಸಲಹಿದೊಡೆಸಿಗದಿರದೆ ಬಿರಿದರಳಿ ನಗುತಿರುವ ಹೂವುಸೊಗಸಾಗಿ ವಿದ್ಯೆಯನು ಕಲಿಯುತ್ತ ಮುಂದಕ್ಕೆಜಗವನ್ನೆ ಗೆಲ್ಲುವಳು ಬನಶಂಕರಿ ಗಣರಾಜ್ಯ ಉತ್ಸವವ ಆಚರಿಸಿ ಸಂತಸದಿಜನಮನವು ಬೀಗುತಿದೆ ಹೆಮ್ಮೆಯಲಿ ತಾನುಮನವಿರಿಸಿ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಸದಾಶಿವ ಬ್ರಹ್ಮೇಂದ್ರರು ಶಿವರಾಮಕೃಷ್ಣ ಎಂಬ ಹೆಸರಿನಲ್ಲಿ ಸೋಮಸುಂದರ ಅವಧಾನಿ ಹಾಗು ಪಾರ್ವತಿ ಎನ್ನುವ ದಂಪತಿಗಳಿಗೆ ಹುಟ್ಟಿದರು. ಅವರ ಹುಟ್ಟು, ನಂತರದ ಆಧ್ಯಾತ್ಮದ ಹಂಬಲ, ಇವೆಲ್ಲವೂ ನಿಮಗೂ ಗೂಗಲ್ಲಿನಲ್ಲಿ ಸಿಗುತ್ತದೆ. ವಿಶಿಷ್ಟವೆಂದರೆ, ಇವರು ಅದ್ವೈತ ತತ್ವವನ್ನೆ ಅವರ ಎಲ್ಲಾ ಬರಹಗಳಲ್ಲೂ ಪ್ರತಿಪಾದಿಸಿದ್ದಾರೆ. ಸದಾಶಿವ ಬ್ರಹ್ಮೇಂದ್ರರು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮನೆಯೊಳಕ್ಕೆ ಬಂದವರೇ ”ನಾಳೆಯಿಂದಲೇ ಕೆಲಸ ಪ್ರಾರಂಭಿಸಿಬಿಡಬೇಕು. ನೆಂಟರಿಷ್ಟರು ಬರುವುದರೊಳಗೆ ಎಲ್ಲವನ್ನೂ ಸಿದ್ಧಪಡಿಸಿ ಇಟ್ಟುಕೊಂಡರೆ ನಿರಾಳ.ಸುಮ್ಮನೆ ಜನಗಳು ಹೆಚ್ಚಾದಷ್ಟು ಗಲಭೆ, ಗದ್ದಲ. ಕೆಲಸಗಳೇನು ಆಗಲ್ಲ” ಎಂದು ಹೇಳಿದ್ದನ್ನು ಕೇಳಿಸಿಕೊಂಡವಳೇ ಕುತೂಹಲ ತಡೆಯಲಾರದೆ ಅವರಿದ್ದ ಕಡೆಗೆ ಬಂದಳು ಮಾದೇವಿ. ”ಏನನ್ನು ಮಾಡಿಸಿಡುವುದು ಅಜ್ಜೀ?” ಎಂದು ಕೇಳಿದಳು....
ತಳುಕು ಬಳುಕು ತೋರಿಸಿಬಳಿಗೆ ಬಾರದಿರುವೆಯಾ..ಮಳಿಗೆ ಮೇಲೆ ನರ್ತಿಸಿಕೆಳಗಿಳಿವುದ ಮರೆತೆಯಾ.. ಏನು ಸದ್ದು ಯಾಕದು..ಹುಸಿಮುನಿಸಿನ ಗಡಿಬಿಡಿಬಾನಿನಂತಪುರದಲಿಕಸಿವಿಸಿಗಳ ದಾಂಗುಡಿ ಜಳಪಿಸುವುದದೇನನುಪುಳಕ ಪುಟಿಯುತಿರುವುದುಕರಿಯ ಬಾನ ಮರೆಯಲಿವ್ಯವಹಾರವದೇನದು?? ಮುಗಿಲು ದಿಗಿಲುಗೊಳ್ಳುತಭೋರ್ಗರೆಯುತ ಅಳುತಿದೆದುಃಖ ನಿಲ್ಲುತಿಲ್ಲವೋಸಂತೈಸುವರಿಲ್ಲದೆ… ಇಳೆಯು ನಾಚಿ ಸೂಸಿದೆಮಕರಂದದ ಘಮ ಸುಮನೊಂದು ಬೆಂದ ಬಸವಳಿಕೆನೀಗುವಂತ ಸಂಭ್ರಮ ಹೊತ್ತು ಸರಿಯುತಿದ್ದರೂಕತ್ತಲಾಟ ನಿಲ್ಲದುಪ್ರಕೃತಿಯೊಡಲ ಒಲವ ಹೂಟಮೈ ಮನವನು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಜಂಗಮಸಮಾಧಿ: ಬಸವಣ್ಣ ಪ್ರಾಸಂಗಿಕವಾಗಿ ತನ್ನ ಭಕ್ತಿಯ ನೆಲೆಯನ್ನು ವಿಸ್ತರಿಸುತ್ತಾ ಎಚ್ಚರ, ಕನಸು, ನಿದ್ರೆಗಳಲ್ಲೂ ಲಿಂಗ, ಶಿವ, ಜಂಗಮರ ಅಬೇಧವನ್ನು ಭಾವಿಸುವ ಸ್ಥಿತಿಯನ್ನು ತಲುಪುತ್ತಾನೆ. ಆತನಿಗೆ ಒಮ್ಮೆ ನಿದ್ರೆ ಬಂದಿದೆ. ಆದರೆ ಅದು ಅವನ “ಅಂಗುಲಿ ಕರಂ ನೆಚ್ಚಿ, ಉಸಿರಲಿ ಶರಣಾರ್ಥಿ ಎನುತಿರೆ ಅಸುವಿನೊಳು...
ಅರಳಿ ಬೆಳಗುವ ಸುಮವೇ ಕೇಳು ಎನ್ನ ಮಾತಾ… ಸಭ್ಯತೆಯ ಸಂಸ್ಕೃತಿಯ ಚೌಕಟ್ಟಿನಲ್ಲಿರುವವರಗೆ ಮಾತ್ರನಿನ್ನ ಈ ಅಪರಿಮಿತ ಅಂದ ಚೆಂದಕ್ಕೆ ಬೆಲೆಕಣ್ಣ ತುಂಬಿಕೊಳ್ಳುವರು ಆಗ ನೋಡಿ ನಿನ್ನ ಜೀವ ಕಳೆ ಹೊಳೆಯುವ ಹಳದಿ ದಳಗಳ ಮೋಡಿ ಮನವ ಸೆಳೆಯಬೇಕುಕಡು ಹಸಿರು ಬಣ್ಣದ ದಂಟು ಎಲೆಗಳೊಂದಿಗೆ ನಿನ್ನ ತೋರಬೇಕು ಕಪ್ಪು...
ಕನ್ನಡಿಗೂ ನನಗೂ ಈಗ ಸಂಬಂಧವಿಲ್ಲಕೂದಲಿನ ಸಿಕ್ಕಿಲ್ಲ, ಬಾಚಣಿಕೆಯ ಹಂಗಿಲ್ಲನುಣ್ಣನೆಯ ತಲೆಯ ಮೇಲೊಂದು ಸದಾ ಮುಸುಕುಕೂದಲು ಇದ್ದಾವೇನಕ್ಕಾ!!! ಎನ್ನುವ ಕೂಗಿಗೆನಗೆಯುಕ್ಕುತ್ತದೆಕ್ಯಾಲೆಂಡರ್‌ನಲ್ಲಿ ಕಿಮೊ ದಿನಾಂಕದ ಅಣಕುನಾನ್ಯಾಕೆ ಕೊರಗಬೇಕು! ಛಲದಿಂದ ಗೆಲ್ಲಬೇಕು. ಹಠ ಹಿಡಿಯುತ್ತಿದ್ದ ಮಗ ಈಗ ಗಂಭೀರ, ಶಾಂತಮಗಳಂತೂ ತಾಯಿಯಾಗಿ ನಿಂತಿರುವ ಹಂತನನಗೆ ನೀನು ಬೇಕು ಎನ್ನುವ ಪತಿಯ ನೋಟದಲ್ಲಿನ...
ನಿಮ್ಮ ಅನಿಸಿಕೆಗಳು…