Author: Pallavi Bhat, pallaviks10@gmail.com

17

ಬೈಕರ್ ಗಳ ದುನಿಯಾ

Share Button

ಬೈಕರ್ ಗಳನ್ನು  ನೋಡಿದ್ದೀರಾ? ಬೈಕರ್ ಎಂಬ ಪದವನ್ನಾದರೂ ಕೇಳಿದ್ದೀರಾ? ಕೆಲವು ವರುಷಗಳ ಹಿಂದೆ ನನಗೂ ಅಷ್ಟೆಲ್ಲ ಪರಿಚಯವಿಲ್ಲದ ಶಬ್ದವಾಗಿತ್ತು ಈ “ಬೈಕರ್”.  ಬೈಕ್ ಚಲಾಯಿಸುವವರು ಅಥವಾ ಆಸಕ್ತರು ಎಂಬ ಅಸ್ಪಷ್ಟ ಉತ್ತರವಷ್ಟೇ ನನ್ನ ಬಳಿ ಇದ್ದದ್ದು. ಹೆಣ್ಣುಮಕ್ಕಳಿಗೆ ಮದುವೆ ಆಗುತ್ತಲೇ ಹೊಸದೊಂದು ಪ್ರಪಂಚದ ಪರಿಚಯವಾಗುತ್ತದೆ ಅನ್ನುತ್ತಾರಲ್ಲ! ನನಗೆ...

12

ಭೂತದ ಕಥೆಗಳು.

Share Button

ಭೂತ ಪ್ರೇತಾದಿಗಳನ್ನು ನೋಡಿದ್ದೀರಾ ಎಂಬ ಪ್ರಶ್ನೆಗೆ ನಮ್ಮಲ್ಲಿ ಹಲವರ ಉತ್ತರ ಹಾಂ, ಉಹುಂ, ಇಲ್ಲ, ತಿಳಿದಿಲ್ಲ, ನಂಬಲ್ಲ ಎಂದೆಲ್ಲಾ ಇರಬಹುದು. ಆದರೆ ಭೂತದ ಕಥೆಗಳನ್ನು ಕೇಳಿದ್ದೀರಾ ಎಂದರೆ ಖಂಡಿತವಾಗಿಯೂ ಹೌದು ಎಂದಷ್ಟೇ ಇರುತ್ತದೆ. ಪ್ರತಿ ಊರಲ್ಲೂ ಒಂದಲ್ಲ ಒಂದು ಭೂತದ ಕಥೆಯು ಪ್ರಚಲಿತದಲ್ಲಿ ಇರುತ್ತದೆ. ಕೆಲವು ನಂಬಿಕೆಗಳಾದರೆ,...

14

ಜಾತ್ರೆ ಎಂಬ ಸಂಭ್ರಮ.

Share Button

ಮಧ್ಯಾಹ್ನದ ಕೆಲಸಗಳನ್ನು ಮುಗಿಸಿ ಫೋನನ್ನು ಕೈಗೆತ್ತಿಕೊಂಡೆ. ನನಗಾಗಿ ಸಂದೇಶವೊಂದು ಕಾದಿತ್ತು. ” ಊರಿಗೆ ಬರುತ್ತಿದ್ದಿಯಾ? ಜಾತ್ರೆಯಂತೆ “. ರಾಜಣ್ಣನ ಆ ಪ್ರಶ್ನೆಯು ನನ್ನದೇ ಲೋಕದಲ್ಲಿ ಮುಳುಗಿದ್ದ ನನ್ನನು ತಟ್ಟಿ ಎಬ್ಬಿಸಿತು. “ಈ ಬಾರಿ ಕಷ್ಟ” ಎಂಬ ಪ್ರಾಯೋಗಿಕ ಉತ್ತರವನ್ನಿತ್ತ ಮೇಲೂ ಮನಸ್ಸು ಸ್ವಲ್ಪ ಹಿಂದಕ್ಕೆ ಜಾರಿತು. ಊರ...

7

ಉರಿ – ದಿ ಸರ್ಜಿಕಲ್ ಸ್ಟ್ರೈಕ್

Share Button

“ಉರಿ” ಎಂದು ಕೇಳುತ್ತಲೇ ಉರಿದುಬೀಳುವಂತಹ ಘಟನೆಯೊಂದು ನೆನಪಿಗೆ ಬರುವುದು ಸಹಜ. 2016 ರಲ್ಲಿ ನಡೆದ ಉರಿ ಅಟ್ಯಾಕ್ ಹಾಗು ಅದಕ್ಕೆ ಭಾರತೀಯ ಸೇನೆಯು ನಡೆಸಿದ ಪ್ರತಿ ದಾಳಿಗಳನ್ನು ಆಧರಿಸಿ ಮೂಡಿಬಂದ ಸಿನಿಮಾವೇ “ಉರಿ- ದಿ ಸರ್ಜಿಕಲ್ ಸ್ಟ್ರೈಕ್”. ಜನವರಿ 11 ನೇ ತಾರೀಕಿನಂದು ಬಿಡುಗಡೆಗೊಂಡ ಈ ಚಿತ್ರವು...

5

ಮುಂದೇನು??

Share Button

ಕಳೆದ ತಿಂಗಳು ನೆಂಟರೊಬ್ಬರ ಮನೆಯ ಪೂಜೆಯೊಂದಕ್ಕೆ ಹೋಗಿದ್ದೆ. ಬಹಳಷ್ಟು ದಿನಗಳ ನಂತರ ಭೇಟಿಯಾಗುತ್ತಿದ್ದುದರಿಂದ ಓಡೋಡಿ ಎಲ್ಲರೊಂದಿಗೆ ಮಾತನಾಡುತ್ತಿದ್ದೆ. ಅಷ್ಟರಲ್ಲಿ ರೇಖಾತ್ತೆಯ ಆಗಮನವಾಯಿತು. ತಾವು ತಡವಾಗಿ ಬಂದುದರ ಕಾರಣವನ್ನು ಎಲ್ಲರಿಗೂ ವಿವರಿಸುತ್ತಾ ಬರುತ್ತಿದ್ದ ಆಕೆಯ ಕಣ್ಣಿಗೆ ದೂರದಲ್ಲಿ ಕುಂತಿದ್ದ ಹುಡುಗನೊಬ್ಬ ಬಿದ್ದು ಬಿಟ್ಟನು. “ಏನೋ ಹರಿ, ಹತ್ತು ಮುಗಿಯಿತಲ್ಲಾ....

8

ಹೆಚ್ಚೇನೂ ಇಲ್ಲದ ‘ವಟ್ಟವಡ’

Share Button

ಬೈಕ್ ಸವಾರಿಯ ನಾಲ್ಕನೇ ದಿನ. ಸಂಜೆಯಾಗುತಿದ್ದಲೇ ನಿಗದಿತವಾಗಿದ್ದಂತೆ ಮುನ್ನಾರ್ ನಗರದಿಂದ ಅರ್ಧ ಗಂಟೆ ದೂರದಲ್ಲಿದ್ದ ನಮ್ಮ ತಂಗುದಾಣಕ್ಕೆ ತಲುಪಿದೆವು. ಬೈಕುಗಳಿಗೆ ಕಟ್ಟಿದ್ದ ಬ್ಯಾಗುಗಳನ್ನೂ, ನಮ್ಮ ದೇಹಕ್ಕೆ ಕಟ್ಟಿದ್ದ ರೈಡಿಂಗ್ ಗೇರುಗಳನ್ನೂ ಕಳಚಿ, ನಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ನಮ್ಮ ಕಿವಿಗೆ ಶಿವ ಪೂಜೆಯಲ್ಲಿ ಕರಡಿ ಬಿಟ್ಟಂತೆ ಮರುದಿನದ ಹರತಾಳದ...

14

ಆನ್ ಲೈನ್ ಗ್ರಾಹಕರು

Share Button

ಮನೆಯ ಗಂಟೆ ಟ್ರಿಂಗ್ ಎಂದು ಸದ್ದು ಮಾಡಿತು. ಓಡೋಡಿ ಬಾಗಿಲು ತೆರೆದ ಪತಿರಾಯರ ಕೈಗೆ ದೊಡ್ಡ ಕಟ್ಟವೊಂದು ದೊರೆತಿತ್ತು. “ಏ ಗಿಫ್ಟ್ ಫ್ರಮ್ ಮಿ ಟು ಮೈ ಸೆಲ್ಫ್ (ನನ್ನಿಂದ ನನಗೇ ಬಂದಿರುವ ಉಡುಗೊರೆ)” ಎಂದು ಕುಣಿಯುತ್ತಾ ಒಳ ಬರುತಿದ್ದ ಇವರನ್ನು ನೋಡಿ ಮನದೊಳಗೇ ನಗತೊಡಗಿದೆ ನಾನು....

10

ರಾಣಿಯಂತಿರುವ ‘ರಾಣಿಪುರಂ’…

Share Button

ಜೂನ್ ತಿಂಗಳ ಕಾಲ. ಆಫೀಸ್ ಮುಗಿಸಿ ಬಂದು ಅಡುಗೆ ಕೆಲಸದಲ್ಲಿ ಮಗ್ನಳಾಗಿದ್ದೆ. ಪತಿರಾಯರ ಆಗಮನವಾಯಿತು. ಒಳಬರುತ್ತಿದ್ದಂತೆ ಕೇಳಲಾರಂಬಿಸಿದರು “ಏಯ್ , ನೀನು ರಾಣಿಪುರಂಗೆ ಹೋಗಿದ್ದಿಯಾ?”. ಧಿಡೀರನೆ ಇದೇನಪ್ಪ ಅಂದುಕೊಳ್ಳುತ್ತಾ ಉತ್ತರಿಸಿದೆ “ಇಲ್ಲ.. ಆದರೆ ಚೆನ್ನಾಗಿದೆಯಂತೆ. ಹೋಗಬೇಕು ಒಮ್ಮೆ”. ಹೂಮ್ ಎಂದು ದೀರ್ಘಶ್ವಾಸವನ್ನೆಳೆಯುತ್ತಾ ಮತ್ತೆ ಕೇಳಿದರು “ಈ ಬಾರಿ...

8

 ಫೋನಾಯಣದತ್ತ….

Share Button

ಆಫೀಸಿಗೆ ಹೊರಟು ನಿಂತಿದ್ದೆ. ಎಂದಿನಂತೆ ಬ್ಯಾಗ್ ಒಳಗೆ ಕೈ ಹಾಕಿ ಐಡಿ ಕಾರ್ಡ್, ಪರ್ಸ್ ಹಾಗು ಮೊಬೈಲ್ ಇದೆಯೆಂದು ಖಾತರಿ ಪಡಿಸಿಕೊಂಡೆ. ಬಸ್ ಹತ್ತಾಯಿತು. ಫೋನ್ ತೆಗೆದು ನೋಡಿದೆ. ಗೆಳತಿಯ ಮೆಸೇಜ್ ಕಾದಿತ್ತು. ಉತ್ತರಿಸಿದೆ. ಅವಳ ಮರು ಉತ್ತರ ಬಂತು “ಯಾಕೆ ರಿಪ್ಲೈ ಮಾಡಿಲ್ಲ ಇಷ್ಟು ಹೊತ್ತು?”...

15

ಕೊನೆಗೂ ದಕ್ಕಿತು ಕನ್ನಡಕ

Share Button

ಕೆಲ ಆಸೆಗಳು ಹಾಗೇ, ಏನಕ್ಕೆ ಹುಟ್ಟುತ್ತವೆ ಎಂದು ಯಾರಿಗೂ ಅರ್ಥವಾಗಲ್ಲ. ಯಾವಾಗ ಹುಟ್ಟಿತೆಂಬ ನೆನಪೂ ಇರಲ್ಲ. ಆದರೂ ಮನದ ಒಂದು ಮೂಲೆಯಲ್ಲಿ ಸುಮ್ಮಗೆ ಗೂಡು ಕಟ್ಟಿ ಕುಳಿತಿರುತ್ತವೆ.ಜೀರುಂಡೆಯಂತೆ ಒಂದೇ ಸಮನೆ ಸದ್ದು ಮಾಡದೆ ಹೋದರೂ , ಸಮಯದೊರೆತಾಗೆಲ್ಲಾ ತನ್ನ ಇರುವಿಕೆಯನ್ನು ತೋರಿಸುತ್ತಿರುತ್ತದೆ. ನನ್ನದೇನೂ ಮಹಾದಾಸೆಯಲ್ಲ. ಅದೊಂದು ಪುಟ್ಟ...

Follow

Get every new post on this blog delivered to your Inbox.

Join other followers: