ಸುರಳಿ ಹೂವು (ಸುಗಂಧಿ ಹೂವು)
ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಚೆಲುವಾದ ಹೂವು ಸುಗಂಧಿ ಹೂವು.ಇದನ್ನು ಸುರಳಿ ಹೂವು ಎಂದೂ ಕರೆಯುತ್ತಾರೆ.ನವಿರಾದ ಸುವಾಸನೆಯುಳ್ಳ ಈ ಹೂವಿನ ಮೂಲವು ಹಿಮಾಚಲ ಪ್ರದೇಶ.ಇದರ ಸಸ್ಯಶಾಸ್ತ್ರೀಯ ಹೆಸರು ಹೆಡಿಕಿಯಂ ಕಾರ್ಯನೆರಿಯಮ್.
3-4 ಅಡಿಯಸ್ಟು ಎತ್ತರ ಬೆಳೆಯುವ ಮೂಲಿಕೆಯ ಸಸ್ಯ ಇದಾಗಿದ್ದು,ಉದ್ದುದ್ದ ಎಲೆಗಳು ಪರ್ಯಾಯವಾಗಿ ಜೋಡನೆಗೊಂಡು ನೋಡಲು ತುಂಬಾ ಸುಂದರವಾಗಿದೆ.ಇದರ ಗಡ್ಡೆಗಳು ತೇವಾಂಶವಿರುವ ಜವಗು ಮಣ್ಣಿನಲ್ಲಿ ಚೆನ್ನಾಗಿ ಬೆಳೆದು ಎಲ್ಲಾ ಕಾಲಗಳಲ್ಲೂ ಹೂವು ಬಿಡುತ್ತದೆ.ಇದು ಕ್ಯೂಬಾ ದೇಶದ ರಾಷ್ರೀಯ ಪುಷ್ಪ.
ಗಾಳಿ ಬೀಸಿದಾಗ ಈ ಹೂವುಗಳು ಚಿಟ್ಟೆ ಹಾರಿದಂತೆ ಭಾಸವಾಗುವುದರಿಂದ ಇದು ಬಟರ್ ಫ಼್ಲೈ ಫ಼್ಲವರ್ ಎಂದೂ ಕರೆಯಲ್ಪಡುತ್ತದೆ.
ನಮ್ಮಜ್ಜಿ ಬಾಳೆಯ ಬಳ್ಳಿಯಲ್ಲಿ ಕಟ್ಟಿ ಬಾಳೆಯಲ್ಲಿ ಸುರುಟಿ ಮೇಲಷ್ಟು ನೀರು ಹನಿಸಿ ಕೊಡುತ್ತಿದ್ದ ಸುರುಳಿ ಹೂವಿನ ಪುಟ್ಟ ಕಿರೀಟ ನೆನಪಾಯಿತು.. 🙂
ನಮ್ಮ ತೋಟದಲ್ಲಿ ತಿಳಿಹಳದಿ ಬಣ್ಣದ ಸುಗಂಧಿಹೂ ಬಿಡುತ್ತಿತ್ತು.
It’s soooo delicate
Haladi bannada suruli hoo kooda ide.
e gida namma maneyalli ede
ನಮ್ಮ ಮನೆಯಲ್ಲಿ ನಿತ್ಯವೂ ಇರುವ ಹೂ ಇದು.
ಸುಗಂಧಿ ಹೂವಿನ ಬಗೆಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ತುಂಬಾ ಧನ್ಯವಾದಗಳು…
ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು…