ನನಸಾದ ಯುರೋಪ್ ನ ಕನಸು ಭಾಗ 2

Share Button

ನೀಲಮ್ಮ ಕಲ್ಮರಡಪ್ಪ

8 ನೇ ದಿವಸ ಬ್ಲಾಕ್ ಪಾರೆಸ್ಟ್ ಕೇಂದ್ರವಾದ ರೈನ್ ಜಲಪಾತದ ಕಡೆಗೆ ನಮ್ಮ ಪ್ರವಾಸ ಸಾಗಿತ್ತು. ಕಣ್ಮನ ಕಣಿಸುವ ರಮಣೀಯ  ದೃಶ್ಯಗಳು. ರೈನ್ ಟೆಟಸ್ ಸರೋವರ ಇದು. ಬ್ಲಾಕ್ ಫಾರೆಸ್ಟ್ ಕೇಂದ್ರ ಬಿಂದು fir trees and fairy tale woodsಗಳಿಂದ ಅದ್ಬುತಗೊಂಡಿದೆ. ಇಲ್ಲಿ ಜಗತ್ತಪ್ರಸಿದ್ದ cuckoo clock ಮಾಡುವ ಮನೆ Drubbo ಗೆ ಭೇಟಿ ನೀಡೆದೆವು. ಇಲ್ಲಿ cuckoo clock ಮಾಡುವ ವಿಧಾನವನ್ನು ನಮಗೆ ತೋರಿಸಲಾಯಿತು.  ಮತ್ತು ಎಂದಿನಂತೆ ಪೌಷ್ಠಿಕ ಮತ್ತು ರುಚಿಯಾದ ಮಧ್ಯಾಹ್ನದ ಊಟವನ್ನು ಮಾಡಿದ ನಂತರ ನಮ್ಮ ಪ್ರಯಾಣ Rhine ಜಲಪಾತದ ಕಡೆಗೆ ಸಾಗಿತ್ತು. Rhine ಜಲಪಾತ ಇರುವ ಸ್ಥಳದ ಹೆಸರು Schauffhanten. ಸುಂದರ ಜಲಪಾತವನ್ನು ವೀಕ್ಷಿಸಿ ಮನತಣಿಯುವವರೆಗೆ ಸುತ್ತಮುತ್ತ ಓಡಾಡಿ ಅಲ್ಲೆ ಚಹಾ ಕುಡಿದು ಸ್ವದೇಶ ಚಹಾ ಅಂಗಡಿ ನೋಡಿ ಖುಷಿಯಾಯಿತು . ನಂತರ  ತಂಗಲು ಹೋಟೆಲ್ ಕಡೆಗೆ ಸಾಗಿದೆವು (Swiss Starin Zurich).

ಮರುದಿನ ನಮ್ಮ ಪ್ರಯಾಣ Switzer Land ಕಡೆಗೆ ಸಾಗಿತು. ಈ ದೇಶ ಶೇಕಡಾ 65% ಭಾಗ ಪರ್ವತಗಳಿಂದ ಅವೃತ್ತಗೊಂಡಿದೆ. ಇಂಡಿಯಾ ದೇಶದವರಿಗೆ ಯುರೋಪ್  ಅಂದರೆ Switzer Land. ಚಲನಚಿತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ Alps ಪರ್ವತ ಶ್ರೇಣಿಗಳಲ್ಲಿ ಚಿತ್ರಿತಗೊಂಡಿದೆ. ಅದರಲ್ಲೂ DDLG (Kajol, Sharukhan) ನಟಿಸಿರುವ ಚಿತ್ರದ ಹೆಸರು ಕೇಳದವರೆ ಇಲ್ಲ. ಅಷ್ಟು ಹೆಸರುಮಾಡಿದ ಚಿತ್ರ. ಈ ಚಿತ್ರವನ್ನು ಚಿತ್ರೀಕರಿಸಿದ ಊರಿಗೂ ISTELAGAL ಸಹ ನಾವು ಭೇಟಿ ನೀಡಿದ್ದೆವು.

ಮೊದಲನೆ ದಿನ Jungfraujoch ಎಂದು ಇದು ಯುರೋಪಿನಲ್ಲಿ ಅತಿ ಎತ್ತರದ ಪರ್ವತ ಶ್ರೇಣಿ ಇಲ್ಲಿಗೆ Cogwhel Train ನಲ್ಲಿ ರಮಣೀಯ  ಪ್ರಾಕೃತಿಕ ದೃಶ್ಯಗಳನ್ನು ನೋಡುತ್ತಾ ಸಾಗುವುದೇ ಒಂದು ರೋಮಾಂಚಕ ಅನುಭವ.  ರೈಲ್ವೆ ಲೈನ್ ಡಿಸೈನ್ ಮಾಡಿದವರು ಇಂಜಿನಿಯರ್ Adolf. ಇದು ಒಂದು ಪ್ರತ್ಯೇಕ ಪ್ರಪಂಚ ಎಂದೇ ಕರೆಯಬಹುದು, ಅಂಗವಿಕಲರಿಗೂ ಮತ್ತು ವಯಸ್ಸಾದವರಿಗೆ ಯಾವ ಶ್ರಮ ಇಲ್ಲದೆ ಈ ಅನುಭವ ಪಡೆಯಬಹುದು. ಮೇಲೆ ತಲುಪಿದ ಮೇಲೆ Ice Palace Longest Glaciers ನಲ್ಲಿ ಆಟ ಆಡುವ ಅದೃಷ್ಟ ನಮ್ಮದಾಗಿತ್ತು. ನಮ್ಮ ಗ್ರೂಪ್ ಲಿಡರ್ ಶ್ರೀ ವಿಜಯಾಕುಮಾರ್ ಮತ್ತು ನಾವೆಲ್ಲರೂ ಸಹ ಸಂತೋಷದಿಂದ ಬೆಟ್ಟಗಳನ್ನು ಹತ್ತಿ ಅಲ್ಲಿಂದ ಜಾರಿ ಡ್ಯಾನ್ಸ್ ಮಾಡಿ ತುಂಬಾ ಖುಷಿ ಪಟ್ಟೆವು. Ice Palace ಕೊಡ ತುಂಬಾ ಚೆನ್ನಾಗಿತ್ತು. ಬೇರೆ ರೀತಿ ಅನುಭವ ಎಲ್ಲರ ಮನಸ್ಸಿಗೂ ಮುದ ನೀಡಿತು ಪರ್ವತದ ಮೇಲೆ ಇಂಡಿಯನ್ ಹೋಟೆಲ್ ಬಾಲಿವುಡ್ ನಲ್ಲಿ ರುಚಿಕರವಾದ ಊಟ ನಮಗೆ ನವ ಚೈತನ್ಯ ನೀಡಿತ್ತು.

ಊಟವಾದ ನಂತರ ಹಿಂದಿರುಗುವಾಗ ಸುಂದರವಾದ ನಗರ Interlaken. ಎರಡು ಸರೋವರಗಳ ಮಧ್ಯೆ ಇರುವ ನಗರ ಪರ್ವತಗಳಿಂದ ಅವೃತ್ತಗೊಂಡಿದೆ. ಕಣ್ಣಿಗೆ ಸಂತಸ ನೀಡುವ ರಮಣೀಯ  ದೃಶ್ಯಗಳು ಎಷ್ಟು ನೋಡಿದರು  ಸಾಲದು . ಅಂತಹ ಸುಂದರವಾದ ಸ್ಥಳ ಪ್ರಕೃತಿಯ ಸವಿಯನ್ನು ಸವಿಯುತ್ತಾ ತಂಗುದಾಣಕ್ಕೆ ಹಿಂದಿರುಗಿದೆವು.

10 ನೇ ದಿವಸ ಬೆಳಗ್ಗೆ ಉಪಹಾರದ ನಂತರ ನಮ್ಮ ಪ್ರವಾಸ Titlis ಪರ್ವತ ಶ್ರೇಣಿ ಕಡೆ ಸಾಗಿತ್ತು . ಉಪಹಾರದ ನಂತರ ಪ್ರವಾಸ  ಆರಂಭವಾಯಿತು. ದಾರಿ ಉದ್ದಕ್ಕೂ ಪ್ರಕೃತಿಯ ಸೊಬಗು ನೋಡಿದಷ್ಟು ಮತ್ತಷ್ಟು ನೋಡ ಬೇಕೆಂಬ ಹಂಬಲ. ಎಷ್ಟು ಛಾಯಾಚಿತ್ರ ತೆಗೆದರು ಸಾಲದು. ಅಷ್ಟು ಸುಂದರ ದೃಶ್ಯಗಳು. ನಾವೆಲ್ಲರೂ ಪರ್ವತ ಶ್ರೇಣಿ ತಲುಪಿದ ನಂತರ ಕೇಬಲ್ ಕಾರಿನಲ್ಲಿ ಪರ್ವತದ ಮೇಲೆ ನವರೆಗೆ ತಲುಪ ಮೊದಲು ಕೇಬಲ್ ಕಾರ್. ನಂತರ ರಿವಲ್ ವಿಂಗ್ ಕೇಬಲ್ ಕಾರ್. ಎರಡಲ್ಲೂ ಸವಾರಿ ಮಾಡಿ ಮೌಂಟ್ ಟೇಡಲಿಸ್ ತಲುಪಿದವು. ಎಲ್ಲಿ ನೋಡಿದರೂ ಹಸಿರು ಹುಲ್ಲಿನ ಛಾಪೆಯನ್ನು ಹಾಸಿರುವಂತಹ ದೃಶ್ಯ. ಕಾಡು ಹೂವುಗಳು ಸೊಬಗು ಪರ್ವತ ಶ್ರೇಣಿ ಮೇಲೆ ಹೋದಾಗ ಹಿಮದಿಂದ ಆವೃತ್ತ ಪರ್ವತ ಶ್ರೇಣಿಗಳು ಎಲ್ಲಾ ರೀತಿಯ ದೃಶ್ಯಗಳು ಒಂದೇ ಬಾರಿಗೆ ಮನಸೊರೆಗೊಂಡವು. ಊಟವಾದ ನಂತರ ಪ್ರಾಕೃತಿಕ  ಸೊಬಗಿನ Lucerne ನಗರ ಪರ್ವತ ಶ್ರೇಣಿಗಳಿಂದ ಅರ್ವತಗೊಂಡಿದ್ದು ಸುಂದರ ಸರೋವರ ಲೂಕರ್ನೆ ಮೆರಗು ನೀಡಿದೆ. ಇಲ್ಲಿನ ಲಯನ್  ಮಾನ್ ಮೇಂಟ್ ಹೆಸರಾಂತ. ಈ ಐತಿಹಾಸಿಕ ಮಾನ್ ಮೇಂಟ್ ಆಗಿದ್ದು.(Loenkamal).

ಫ್ರೆಂಚ್ ರಾಜ ಲೂಯಿಸ್ 16 ಅಂಗರಕ್ಷಕರಾಗಿದ್ದ 750 ಜನ ಸ್ವಿಸ್ ಸೈನಿಕರನ್ನು ಫ್ರೆಂಚ್ ರೆವಲೂಶನ್ ಸಮಯದಲ್ಲಿ ದಂಗೆ ಎದ್ದ ಜನರು ಅರಮನೆ ನುಗ್ಗಿದಾಗ ಅವರ ವಿರುದ್ದ ಯಾವುದೇ ಆಯುಧವನ್ನು ಉಪಯೋಗಿಸದಂತೆ ರಾಜ ಆದೇಶ ನೀಡಿದ ಕಾರಣ, ಕ್ರಾಂತಿಯ ಸಮಯದಲ್ಲಿ ರಾಜನ ಮೇಲಿನ ಕೋಪವನ್ನು ಜನ ಈ ಸೈನಿಕರ ಮೇಲೆ ತೀರಿಸಿಕೊಂಡ ಜನರ ಸಿಟ್ಟಿಗೆ ಎಲ್ಲರೂ ಬಲಿಯಾದರು. ಅವರ ನೆನಪಿಗೆ ಕಟ್ಟಲಾಗಿರುವ ಮಾನ್ಯಮೆಂಟ್ ಸಿಂಹವೂ ತುಂಬಾ ದುಖದಲ್ಲಿರುವಂತೆ ಕೆತ್ತಲಾಗಿದೆ. ಅಪರೂಪದ ಕಲಾಕೃತಿ ನಂತರ ಲೂಕರ್ನೆ ಸರೋವರದಲ್ಲಿ ದೋಣಿಯಲ್ಲಿ ವಿಹಾರದಲ್ಲಿ ನಗರ ವೀಕ್ಷಣೆ ಮಾಡಿದೆವು . ಸರೋವರದಲ್ಲಿ ನೂರಾರು ಹಂಸಗಳು ಈ ಸರೋವರದ ಸೌಂದರ್ಯ ಮತ್ತಷ್ಟು ಮೆರಗು ನೀಡುತ್ತವೆ.ಎಷ್ಟು ನೋಡಿದರು ತೃಪ್ತಿಯಾಗದಷ್ಟು ಸುಂದರ.  ದೋಣಿ ವಿಹಾರದ Lucerne ನ ಇನ್ನೊಂದು ವಿಶೇಷ,  ಪರ್ವತಗಳ ಕೆಳಗೆ ಮಾಡಿರುವ Tunnel ಗಳು . ನಂತರ ಸಂಜೆ 7 ಘಂಟೆಗೆ Shopping ಬಿಡಲಾಯಿತು. ಇಲ್ಲಿನ Cowbell ತುಂಬಾ ಸುಂದರವಾಗಿದ್ದು ನನಗಂತೂ ಕೊಳ್ಳುವ ಆಸೆಯಾಯಿತು. Switzerland ನೆನಪಿಗೆ ಚಾಕ್ ಲೇಟ್ ಕೊಂಡುಕೊಂಡೆವು.

 

11 ನೇ ದಿನ ನಮ್ಮ ಪ್ರಯಾಣ ಆಸ್ಟ್ರಿಯಾ ಕಡೆಗೆ ಸಾಗಿತ್ತು. ಆಸ್ಟ್ರಿಯಾ ಕೊಡ ಪರ್ವತ ಸಾಲುಗಳಿಂದ ಕೊಡಿದ ಸುಂದರ ದೇಶ.  ಶೇ 60% ರಷ್ಟು ಪರ್ವತ ಶ್ರೇಣಿ ಹೊಂದಿರುವ ದೇಶ . ಭಾಷೆ ಜರ್ಮನ್ . ಆಸ್ಟ್ರಿಯಾದೊಂದಿಗೆ ಸಂಗೀತದ ಲಹರಿ ಕೇಳಿ ಬರುತ್ತದೆ. ಇಲ್ಲಿ ಚಿತ್ರೀಕರಿಸಿದ ಸೌಂಡ್ ಆಫ್ ಮ್ಯೂಸಿಕ್ ನನ್ನ ಅಚ್ಚುಮೆಚ್ಚಿನ ಚಲನಚಿತ್ರ. ಆ ಚಲನಚಿತ್ರದಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ನೋಡುವಾಗ ಒಮ್ಮೆ ಆಸ್ಟ್ರಿಯಾ ನೋಡಬೇಕೆಂಬ ಆಸೆ ಚಿಗುರಿತ್ತು. ನನ್ನ ಕನಸು ನನಸಾದ  ದಿನ. ತುಂಬಾ ಸಂತೋಷದಿಂದ ಮನಸ್ಸು ಹಾರಾಡುತ್ತಿತ್ತು .ಈ ದೇಶದೊಂದಿಗೆ ಜಗತ್ಪ್ರಸಿದ್ಧ ಸಂಗೀತರಾದ Mozhart ಹುಟ್ಟಿದ ದೇಶ. ರಾಜಧಾನಿ ವಿಯನ್ನ 12 ಪ್ರಾಂತ ಗಳನ್ನು ಹೊಂದಿದೆ. ಜಗತ್ತಿನಲ್ಲಿ ಕ್ರೂರತನಕ್ಕೆ ಹೆಸರಾದ ಅಡಾಲ್ಪ್ ಹಿಟ್ಲರ್ ಆಸ್ಟ್ರಿಯಾದಲ್ಲೇ ಹುಟ್ಟಿದ್ದು ಮತ್ತೊಂದು ವಿಶೇಷ. ನಾವು ಉಳಿದುಕೊಂಡಿದ್ದ ಹೋಟೆಲ್ River Inn,  Innsburk ನಗರ ಸೌಂದರ್ಯದ ಬೀಡಾಗಿತ್ತು . ಈ ನಗರ ನೋಡಲು ಎರಡು  ಕಣ್ಣು ಸಾಲದು. ಇಲ್ಲಿ ಮರಗಳು ಹೇರಳವಾಗದ್ದು, ಮನೆಗಳನ್ನು ಹೋಟೆಲಗಳನ್ನು ಮರದ ಸಾಮಗ್ರಿಗಳಿಂದ ಕಟ್ಟಲಾಗಿದೆ . ಬಹಳ ಸುಂದರವಾದ ಮನೆಗಳು. ನಾವಿದ್ದ ಹೋಟೆಲ್ ಅಪರೂಪವಾಗಿತ್ತು. ಇಂತಹ ಹೋಟೆಲನಲ್ಲಿ ತಂಗುವುದೇ ಒಂದು ಸಂತೋಷದ ಅನುಭವ .  ಬೆಳಗ್ಗೆ ಫಲಹಾರ ಮುಗಿಸಿ ಹೊರಡುವ ಮುಂಚೆ ನಾನು ಮತ್ತು ಶುಭ ವಾಕಿಂಗ್ ಹೋಗಿ ಬಂದೆವು. ಇಂದಿನ ಕಾರ್ಯಕ್ರಮ Swaroasky Musem ಗೆ ಭೇಟಿ ನೀಡುವುದು. ಇದು ಅತ್ಯಂತ ಜಗತ್ಪ್ರಸಿದ್ಧ Crystal Musem ನಲ್ಲಿ ಮಾಡಿರುವ ಅಭೂಷಣಗಳು ವಜ್ರದಲ್ಲಿ ಮಾಡಿದಂತೆ ಭಾಸವಾಗುತ್ತದೆ.ಅಷ್ಟು ಸುಂದರ ಕರಕುಶಲ ಸಾಮಾಗ್ರಿಗಳನ್ನು ನೋಡಿ ಖುಷಿಯಾಯಿತು.

13 ನೇ ದಿನ ನಮ್ಮ ಪ್ರಯಾಣ ಕನಸಿನ ನಗರ ವೆನಿಸ್ ಕಡೆಗೆ ಸಾಗಿತು, ವೆನಿಸ್ ಇಟಲಿಯಲ್ಲಿನ ಒಂದು ನಗರ. ಇಟಲಿ ಯುರೋಪಿನ ದಕ್ಷಿಣ ಭಾಗದಲ್ಲಿದ್ದು ಒಟ್ಟು 29 ದ್ವೀಪಗಳನ್ನು ಒಳಗೊಂಡಿದೆ. ವೆನಿಸ್ ಒಂದು ಸಾಂಸ್ಕ್ರತಿಕ ನಗರ. ನಾವು ಮೊದಲು ಖಾಸಗಿ ಬೋಟನಲ್ಲಿ ಸಮುದ್ರದ ಮುಖಾಂತರ ಸಾಗಿ St.Mark Square ತಲುಪಿ ಅಲ್ಲಿ ಸುತ್ತಮುತ್ತ ಪ್ರೇಕ್ಷಣೇಯ ಸ್ಥಳಗಳನ್ನು ನೋಡಿದ ನಂತರ, ಕಾಲುವೆಗಳ ಮುಖಾಂತರ ನಗರ ವೀಕ್ಷಣೆ ಮಾಡಿದೆವು. ವೆನಿಸ್ ನಗರದಲ್ಲಿ ಕಲೆಗಳಿಗೆ ಹೆಸರಾದ ನಗರ. ಮೈಕೆಲ್ ಏಂಜಲೋ ರಾಫಲ್ ಇಂತಹ ಜಗತ್ತ ಪ್ರಸಿದ್ದಿ ಶಿಲ್ಪಗಳಿಂದ ಕೆತ್ತಲ್ಪಟ್ಟಿರುವ ಕೆತ್ತನೆಗಳಿಂದ ಸುತ್ತುವರೆಯಲ್ಪಟ್ಟಿರುವ ಅರಮನೆ Doge Palace. ಅತಿದೊಡ್ಡ ಬಾರ್ಸಿಲಿಕ ಚರ್ಚ್ ಎಷ್ಟು ನೋಡಿದರೂ ತೃಪ್ತಿಯಾಗುವುದಿಲ್ಲ. ಅಂತಹ ಸುಂದರ ಕಲಾಕೃತಿಗಳು. ಗೈಡಿಕಾ ಕಾಲುವೆಯಲ್ಲಿ ಗಂಡೋಲಾ ರೈಡಿಗೆ ಹೋಗುವಾಗ, ಚಲನಚಿತ್ರಗಳಲ್ಲಿ ಚಿತ್ರಿಸಿರುವ Romantic ದೃಶ್ಯಗಳು ನೆನಪಿಗೆ ಬಂದವು ನಾವೂ ಸಹ ರೋಮ್ಯಾಂಟಿಕ್ ಮೂಡ್ ನಲ್ಲಿ ಕೆನಾಲ್ ಗಳ ಮಧ್ಯನಗರವನ್ನು ವೀಕ್ಷೀಸುತ್ತಾ ಸಾಗಿದೆವು. ನಂತರ Murano Glass Showroom ವೀಕ್ಷಿಸಿದೆವು . ಇಲ್ಲಿ ಸುಂಧರವಾದ ಗ್ಲಾಸ್ ಸಾಮಾಗ್ರಿಗಳನ್ನು ಮಾಡುವ ವಿಧಾನ ಸಹ ತೋರಿಸಲಾಯಿತ್ತು . ಸಂಜೆ ಮತ್ತೆ ಸಮುದ್ರದಲ್ಲಿ ಬೋಟ್ ಮುಖಾಂತರವಾಗಿ  ನಮ್ಮ ಬಸ್ ಹತ್ತಿ ರಾತ್ರಿಯ ತಂಗುವಿಕೆಗೆ ಹೋಟೆಲ್ Sheretton ಸಾಗಿದೆವು. ರಾತ್ರಿಯ ಊಟದ ನಂತರ ವಿಶ್ರಾಂತಿ.

ಈ ದಿನದ ಪ್ರವಾಸ Leaning Tower of Pisa . ಇದರ ಎತ್ತರ 55.82 ಮೀಟರ್ 8 ಮಹಡಿಗಳ ಕಟ್ಟಡ. ಇದರ ಹತ್ತಿರವೇ ಸುಂದರವಾದ ಚರ್ಚ್ ಎರಡೂ ಕಟ್ಟಡಗಳನ್ನು ಖರ ಮಾರ್ಬಾಲ್ ಕಲ್ಲುಗಳಿಂದ ಮಾಡಲಾಗಿದೆ (ಕಟ್ಟಲಾಗಿದೆ) .ಇಲ್ಲಿ ಮಧ್ಯಾಹ್ನದವರೆಗೆ ಸಮಯ ನೀದಲಾಗಿತ್ತು. ಪೋಟೋ ತೆಗೆದುಕೊಂಡು ನಂತರ Shopping ಸಮಯ ನೀಡಲಾಗಿತ್ತು.

 

ಮಧ್ಯಾಹ್ನದ ಊಟ ಮುಗಿಸಿ ನಮ್ಮ ಪ್ರಯಾಣ Florence ನಗರದೆಡೆಗೆ ಸಾಗಿತು.  City of Renaisance ಮೊದಲು ಇದು ಇಟಲಿಯ ರಾಜಧಾನಿಯಾಗಿತ್ತು .City Of Sculputure ಶಿಲ್ಪಕಲೆಗೆ ಪ್ರಸಿದ್ದರಾದ ಮೈಕೆಲ್ ಏಂಜರೋ ರಾಫೆಲ್ ರವರ ಕೆತ್ತನೆಯ  Open Air Musem of Michel Angelo and Other Sculputures, River ArnoBridge ಪ್ರಸಿದ್ದ ಶಿಲ್ಪಿಗಳಾದ Michel Angelo ಮತ್ತು Galileo ಇವರ ಸಮಾಧಿಗಳ ಸ್ಥಳಗಳನ್ನು ವೀಕ್ಷಿಸಿ ನಂತರ ತಂಗುವ ಸ್ಥಳವಾದ ಹೋಟೆಲ್ Prato ಗೆ ತೆರಳಿ ವಿಶ್ರಾಂತಿ ಪಡೆದೆವು.

ಪ್ರಪಂಚದಲ್ಲಿ ಅತ್ಯಂತ ಚಿಕ್ಕದಾದ ದೇಶ ವ್ಯಾಟಿಕನ್ ದೇಶ ನೋಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ದೇಶದಲ್ಲಿ ವ್ಯಾಟಿಕನ್ ಮ್ಯೂಸಿಯಂ, Sistane Chaten ಮತ್ತು Magnificient St Peterbisilici.

ಇಲ್ಲಿರುವ ಹೆಸರಾಂತ ಚಿತ್ರಕಲೆ ಶಿಲ್ಪಕಲೆಗಳು ಕಣ್ಣಿಗೆ ಹಬ್ಬ ನೀಡುತ್ತವೆ. ಆದರೆ ಇದನ್ನು ವೀಕ್ಷಿಸಲು ಒಂದು ದಿನದ ಅವಧಿ ಸಾಲುವುದಿಲ್ಲ. ಒಟ್ಟಾರೆ ಜನಸಾಗರದ ಮದ್ಯದಲ್ಲಿ ಚಿತ್ರಕಲೆ ವೈಭವವನ್ನು ವೀಕ್ಷಿಸುತ್ತಾ ಸಾಗಿದೆವು.

%

6 Responses

  1. Krishnaveni Kidoor says:

    ತುಂಬಾ ವಿವರಗಳು ನಮಗೂ ಸಿಕ್ಕಿತು. ಇನ್ನೂ ನಿರೀಕ್ಷಿಸಲಾ?…

  2. Hema says:

    ನೀಲಮ್ಮ ಅವರೇ, ಲೇಖನ ಓದಿ ಮುಗಿಸಿದಾಗ , ಯುರೋಪ್ ಪ್ರವಾಸ ಮಾಡಿ ಬಂದ ಹೊಸದರಲ್ಲಿ ನೀವು ಕೊಟ್ಟಿದ್ದ ಸಿಹಿಯಾದ ಸ್ವಿಟ್ಜರ್ ಲ್ಯಾಂಡ್ ಚಾಕೋಲೆಟ್ ಅನ್ನು ಪುನ: ಸವಿದಂತೆ ಆಯಿತು!!!

  3. Chandravathi says:

    ಪ್ರವಾಸ ಕಥನ ಚೆನ್ನಾಗಿದೆ.

  4. ಧನ್ಯವಾದಗಳು

  5. Nagendra Prasad says:

    Very well written. Madam.

  6. ರುಕ್ಮಿಣಿ ಮಾಲಾ says:

    ಸಂಪಾದಕರೇ ಮೊದಲ ಭಾಗ ಸಿಗುತ್ತಿಲ್ಲ. ಇಲ್ಲೇ ಕೊಂಡಿ ಲಗತ್ತಿಸಿ.

Follow

Get every new post on this blog delivered to your Inbox.

Join other followers: