“ನಾಕು ನೋಟ”
ಕೋಪ
ಅಳಿಯಿತೆಂದು ಅರಸಬೇಡ
ಇಳಿಯಿತೆಂದು ಇರಿಸಬೇಡ
ಉಳಿಯಿತೆಂದು ಉರಿಸಬೇಡ.
ಆಸೆ
ತಳೆಯಿತೆಂದು ತೆರೆಯಬೇಡ
ಸುಳಿಯಿತೆಂದು ಕರೆಯಬೇಡ
ತುಳಿಯಿತೆಂದು ಜರಿಯಬೇಡ
ತೊಳೆಯಿತೆಂದು ಮರೆಯಬೇಡ.
ಪ್ರೀತಿ
ಸುಳಿಯಿತೆಂದು ಕರಗಬೇಡ
ತಿಳಿಯಿತೆಂದು ತಿರುಗಬೇಡ
ತಳೆಯಿತೆಂದು ತಿರಿಯಬೇಡ
ಬೆಳೆಯಿತೆಂದು ಮೆರೆಯಬೇಡ.
ಕಳೆಯಿತೆಂದು ಕೊರಗಬೇಡ
ಅಳಿಯಿತೆಂದು ಮರುಗಬೇಡ.
ಭಾಷಣ
ಮೊಳೆಯಿತೆಂದು ಮೆರೆಸಬೇಡ
ಹೊಳೆಯಿತೆಂದು ಹೊರಿಸಬೇಡ
ತಿಳಿಯಿತೆಂದು ಹರಿಸಬೇಡ
ಬೆಳೆಯಿತೆಂದು ಸುರಿಸಬೇಡ.
.– ಮೋಹಿನಿ ದಾಮ್ಲೆ (ಭಾವನಾ)
ಚೆನ್ನಾಗಿದೆ…:)
ತುಂಬಾ ಚೆನ್ನಾಗಿದೆ , ನಿಮ್ಮ kavana