ಕವಿತೆಯಾದಳಾ..ಗೆಳತಿ..?
ಭಾವಗಳ ಹಾದಿಯಲಿ ನಡೆಯುವಾಗ
ಜೊತೆಯಾದಳು ಕವಿತೆ..
ನಿಸರ್ಗದ ಜಾತ್ರೆಯಲಿ ಹುಡುಕಾಡುವಾಗ
ಸ್ನೇಹವರಸಿದ ಮನಕೆ ಇನ್ನೆಲ್ಲಿಯ ಕೊರತೆ..
ಕಲ್ಪನೆಯ ಚಾರಣದಿ ಅಲೆದಾಡುವಾಗ
ಪದಗಳಿಗೇನೊ ನವಿರಾದ ಸ೦ಕಟವೇ ಕಾಡಿದೆ..
ಸ್ಪೂರ್ತಿಯ ಸೆಲೆತವು ಭಾವನೆಗೆ
ಜೋತು ಬಿದ್ದಾಗ
ಕಾದು ಬೇಸರಿಸಿದ ಸಾಲುಗಳ ಆರ್ಭಟದ ಗೋಜಿದೆ..
ಹೊತ್ತಿಗೆಗೆ ಹೊತ್ತಿಲ್ಲದ ಲೇಖನಿಯ ಹ೦ಬಲದಿ ಧ್ಯಾನಿಸುವ
ಬೇಡಿಕೆಯು ಏಕಿದೆ..
ಮುದ್ದು ಮುದ್ದಾದ ನನ್ನ ಪೆನ್ನಿಗೇತಕೊ ಈ ನಡುವೆ
ಸಿಹಿಸಿಹಿಯಾದ ಕೊಬ್ಬಿದೆ..
ಮೌನವಾಗಿಯೇ ಈ ಗೆಳತಿಗೆ ನನ್ನ ನಮನವು ಸ೦ದಿದೆ..
‘– ಸ್ನೇಹಾ ಪ್ರಸನ್ನ
‘
ಸಿಹಿಯಾಗಿ ಕೊಬ್ಬಿದ ಗೆಳತಿಗೆ ಸೊಗಸಾದ ನಮನ.. ಚೆನ್ನಾಗಿದೆ !
ಧನ್ಯವಾದಗಳು ಸರ್…
ಆಹಾ…ಚೆನ್ನಾಗಿದೆ ನಿಮ್ಮ ಸಿಹಿಯಾದ ಭಾವಕೆ ಪೆನ್ನಿಗೆ ಜಂಭ ಇರಲೇಬೇಕು…!
ಹೀಗೆ ಓದುತ್ತಿರಿ..ದನ್ಯವಾದಗಳು..
Imagination is trekking ..! what a comparizon …nice poem ..
ಅಚ್ಚವಾದ ಕನ್ನಡ ಅರ್ಥಮಾಡಿಕೊಳ್ಳಲು ಕಷ್ಟ..ಅರ್ಥವದ ಮೇಲೆ i feeling Realy its nice poem
Thank you so much…