ನಮ್ಮ ಕೈ ಬೆರಳುಗಳ ಹೆಸರೇನು? 

Share Button
Hema 11 apr2015

ಹೇಮಮಾಲಾ.ಬಿ

ಜಗತ್ತಿಗೇ ಯೋಗ ಮತ್ತು ಪ್ರಾಣಾಯಾಮದ ಮಹತ್ವವನ್ನು ತಿಳಿಸಿಕೊಟ್ಟ ಖ್ಯಾತಿ ಭಾರತೀಯರದು. ಆದರೆ ಯಾಕೋ ನಮ್ಮಲ್ಲಿ ಹೆಚ್ಚಿನವರಿಗೆ ಇದರ ಬಗ್ಗೆ ಅಸಡ್ಡೆ. ಇದಕ್ಕೆ ನಾನೇ ಉತ್ತಮ ಉದಾಹರಣೆ. ಮೈಸೂರಿಗೆ ಹಲವಾರು ವಿದೇಶೀಯರು ಯೋಗಾಭ್ಯಾಸದ ತರಬೇತಿಗೆಂದು ಸಾಕಷ್ಟು ಖರ್ಚು ಮಾಡಿ ಬರುತ್ತಾರೆ. ಯೋಗ-ಪ್ರಾಣಾಯಾಮ-ಧ್ಯಾನ-ಮುದ್ರೆ ಇತ್ಯಾದಿ ವಿದ್ಯೆ ಕಲಿತು ಮರಳುತ್ತಾರೆ. ಆದರೆ ಸ್ಥಳೀಯರಾದ ನಾವು, ಯಾರಾದರೂ ಉಚಿತ ತರಬೇತಿ ಕಾರ್ಯಕ್ರಮ ಏರ್ಪಡಿಸಿದ್ದಾಗಲೂ ಕೂಡ “ಸಮಯದ ಅಭಾವ…ಮಕ್ಕಳ ಶಾಲಾಸಮಯಕ್ಕೆ ತೊಂದರೆ…ಆಫೀಸಿನ ಕೆಲಸ” ಇತ್ಯಾದಿ ನಾನಾ ಕಾರಣಗಳಿಂದ ಯೋಗಾಭ್ಯಾಸ ಮಾಡಲು ಮನಸ್ಸು ಮಾಡುವುದಿಲ್ಲ!

ಎಲ್ಲಿಯವರೆಗೆ ನಮ್ಮ ಶರೀರದ Nuts and Bolts ಗಳು ಸುಸ್ಥಿತಿಯಲ್ಲಿರುತ್ತವೆಯೇ ಅಲ್ಲಿಯ ವರೆಗೆ ಈ ರೀತಿಯ ನೆಪಗಳು ಧಾರಾಳವಾಗಿ ಸಿಗುತ್ತವೆ. ಆದರೆ, ನಲವತ್ತು ದಾಟಿದ ಮೇಲೆ, ಚಾಳೀಸ್ ಕನ್ನಡಕ ಮೂಗಿನ ಮೇಲೆ ಕಂಗೊಳಿಸುವಾಗ, ಮಂಡಿಯ ಮೂಳೆಗಳು ಅಸಹಕಾರ ಚಳುವಳಿ ಹೂಡಲಾರಂಭಿಸಿದಾಗ ಯೋಗಾಭ್ಯಾಸದ ಕಡೆಗೆ ಅನಿವಾರ್ಯವಾಗಿ ಗಮನ ಹರಿಸುತ್ತೇವೆ. ಹಾಗಾಗಿ ಈಗ ನಾನು ಭಾಗವಹಿಸುತ್ತಿರುವ ಯೋಗ ಮತ್ತು ಪ್ರಾಣಾಯಾಮ ತರಗತಿಗಳಲ್ಲಿ ನಿವೃತ್ತಿ ಆದವರು ಮತ್ತು ಮಧ್ಯ ವಯಸ್ಸಿನವರೇ ಜಾಸ್ತಿ. ಅಲ್ಲೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ!

Hand

ಈವತ್ತು ನಮ್ಮ ತರಬೇತುದಾರರಾದ ಯೋಗ ಶಿಕ್ಷಕರು ಕೇಳಿದ ಒಂದು ಸರಳ ಪ್ರಶ್ನೆ ಹೀಗಿತ್ತು. ” ನಮ್ಮ ಕೈ ಬೆರಳುಗಳ ಹೆಸರೇನು? ” ಇದ್ಯಾವ ಮಹಾಪ್ರಶ್ನೆ ಎಂದು ನಾವು “ಹೆಬ್ಬೆರಳು, ತೋರುಬೆರಳು, ಮಧ್ಯಬೆರಳು, ಉಂಗುರಬೆರಳು, ಕಿರುಬೆರಳು” ಎಂದು ಕೋರಸ್ ನಲ್ಲಿ ಉತ್ತರಿಸಿದೆವು.

ನಮ್ಮ ಯೋಗ ಶಿಕ್ಷಕರು ಇದನ್ನೊಪ್ಪದೆ, “ನಾವು ಯಾರನ್ನೋ ಉದ್ದೇಶಿಸಿ, ಹಸ್ತವನ್ನೇ ತೋರಿಸಿದಾಗ, ಎಲ್ಲಾ ಬೆರಳುಗಳು ‘ತೋರು ಬೆರಳು’ಗಳಾಗುವುದಿಲ್ಲವೇ ? ಹತ್ತೂ ಬೆರಳುಗಳಿಗೆ ಉಂಗುರವನ್ನು ಹಾಕುವವರು ಇಲ್ಲವೆ?” ಎಂದಾಗ ಪೆಚ್ಚಾದೆವು. ಅಂತೂ ಈ ಪ್ರಶ್ನೆಗೆ ಸರಿಯಾದ ಉತ್ತರ “ಅಂಗುಷ್ಟ, ತರ್ಜಿನಿ, ಮಧ್ಯಮ,ಅನಾಮಿಕಾ ಮತ್ತು ಕನಿಷ್ಟ’ ಬೆರಳುಗಳು.

 

– ಹೇಮಮಾಲಾ.ಬಿ

 

6 Responses

  1. Shobha Kotresh says:

    ಹೌದು ನಮ್ಮ. ಭರತಿಯ. ಸಂಸ್ಕೃತಿಯೆ ಹಾಗೆ ವ್ಯೆವಿದ್ಯಮಯ

  2. ಅನಂತ ಅಯಾಚಿತ says:

    ನಾವು ಸಂಧ್ಯಾವಂದನೆ ಮಾಡುವಾಗ ಹೇಳುತ್ತೇವೆ “ಅಂಗುಷ್ಟಿಕಭ್ಯಾಮ್ ನಮಃ: ತರ್ಜನಿಭ್ಯಯಾಯಾ ನಮ: , ಮಧ್ಯಮಭ್ಯಾ ನಮ: ಅನಾಮಿಕಭ್ಯ ನಮ: ಮತ್ತು ಕನಿಸ್ಃಟಿಕಭ್ಯಾನ ನಮ: ” ಅಂತ .

  3. ಬಸವಾರಾಜ.ಜೋ.ಜಗತಾಪ says:

    ಯೋಗ ಕಲಿಯಬೇಕು,ಮಾಡಬೇಕು ಅನ್ನೋದು ಬಾಲ್ಯದಿಂದಲೆ ಆಸೆ .ಏನುಮಾಡೊದು ಆಗಲೆ ಇಲ್ಲ. ಬೆಂಗಳೂರನಲ್ಲಿದ್ದಾಗ ಒಂದ ಅವಕಾಶ ಸಿಕ್ಕಿದ್ದರೂ ಸಮಯದ ಕೊರತೆಯಿಂದ ಆಗಲಿಲ್ಲ. ಜೊತೆಯಲಿ ಹುಟ್ಟದೆ ವೈಟಪಿಲ್ಡನಲ್ಲಿದ್ದಾಗ ಬಸವರಾಜ ಕೊಟಗಿ ಎಂಬ ಗದಗಿನವರು ನಮಗೆ ಸ್ವಂತ ಅಣ್ಣನಿಗಿಂತ ಹೆಚ್ಚಾಗಿದ್ದರೂ ಅವರೂ ಯೋಗ ಮಾಡುವದರಲ್ಲಿ ನಿಪುಣರು.ಶಿಪ್ಟ ಕೆಲಸಗಳಿಂದ ಅಲ್ಲೂ ವಂಚಿತನಾದೆ.ಈಗ ಖತರನಲ್ಲಿ ಸಮಯ ಇದೆ ಕಲಿತಿಲ್ಲ ಮಾಡೊದ ಗೊತ್ತಿಲ್ಲ.ಮುಂದೆ ಭಾರತಕ್ಕೆ ಬಂದ ಮೇಲೆ ಕಲಿಯೋ ಆಸೆ ಬಹಳದಟ್ಟವಾಗಿದೆ.ದನ್ಯವಾದಗಳು ನೀಮ್ಮ ಬರಹ ಬಹಳ ಚೆನ್ನಾಗಿದೆ.

  4. ನಿಜ ಹಲ್ಲಿದ್ದಾಗ ಕಡಲೆ ಇಲ್ಲ ಕಡಲೆಯಿದ್ದಾಗ ಹಲ್ಲಿಲ್ಲ
    ನಮಗೆ ಯಾವುದೂ ಅನಿವಾರ್ಯವಾಗುವರೆಗೆ ಆಸಕ್ತಿ ಇರುವುದೇ ಇಲ್ಲ
    ಅದಕ್ಕೇ ಅಭ್ಯಾಸಕ್ಕೆ ಇಪ್ಪತ್ತೊಂದರ ಆವೃತ್ತಿ ಎನ್ನುವುದು…
    ಆದರೂ ಯೋಗ ಮತ್ತು ಪ್ರಾಣಾಯಾಮಗಳು ಆರೋಗ್ಯಕ್ಕೆ ಅನಿವಾರ್ಯ ಎಲ್ಲರಿಗೂ ಎನ್ನುವಂತಾದರೆ ,,,
    ಸಮಾಜದ ಆರೋಗ್ಯಕ್ಕೂ ಒಳ್ಳೆಯದು ಅನ್ನಿಸುತ್ತೆ

  5. Vishnu says:

    ಕಾಲು ಬೆರಳುಗಳ ಹೆಸರನ್ನು ತಿಳಿಸಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: