ಹೂವುಗಳು…
ಹೂವುಗಳು
ಬರೆಯುತ್ತವೆ
ಕವನಗಳನ್ನು
ಮನದ ಹಾಳೆಯ
ಮೇಲೆ ;
ಕನಸುಗಳಿಗೆ
ನೆರವಾಗಿ,
ಬಯಕೆಗಳ
ಬೆಂಬಲವಾಗಿ,
ಪ್ರೀತಿಯ
ಎಳೆ, ಎಳೆಯಾಗಿ
ಬಿಡಿಸುತ,
ಭಾವನೆಗಳ
ಹಗ್ಗವ ಹೊಸೆಯುತ,
ಸುಮಧುರ
ಕಾಮನೆಗಳ
ನೆಲೆಯಾಗಿ,
ಬದುಕ ಸಂಗೀತಕೆ
ತಾಳಮದ್ದಲೆಯಾಗಿ,
ಕಷ್ಟ-ನೋವುಗಳ
ಮರೆಸುತ…
ಪ್ರಕೃತಿ ಸದಾ
ಸುಂದರವೆಂಬುದ
ನೆನಪಿಸುತ…
-ಎಚ್ ಆರ್ ಕೃಷ್ಣಮೂರ್ತಿ
ಚಿಕ್ಕ ಚೊಕ್ಕ ಕವನ. ಇಷ್ಟವಾಯಿತು.
ಥ್ಯಾಂಕ್ಸ್