ಸುರಹೊನ್ನೆ-ಸುರಗಿ…ಎಂಥಹಾ ಸುಂದರ ಹೆಸರು!!

Share Button
Sahana Pundikai

ಸಹನಾ ಪುಂಡಿಕಾಯಿ

 

ಜಾಲತಾಣಗಳಲ್ಲಿ ಒಂದು ದಿನ ಹೀಗೆ ಕಣ್ಣಾಡಿಸುತ್ತಿದ್ದೆ,ನಿನ್ನ ನಾ ಕಂಡೆ. ‘ಸುರಗಿ’ ಅನ್ನುವುದು ಒಂದು ಸುಂದರ ಜ್ಞಾನ ಲೋಕ. ಯಾಕೋ ನಿನ್ನೊಳಗೆ ಪ್ರವೇಶಿಸೋಣವೆಂದು ಅನಿಸಿತು.ಆಕರ್ಷಿಸಿತು,ನಿನ್ನ ಮಹದ್ವಾರದಲ್ಲಿ ಬರೆದಿದ್ದ ಒಕ್ಕಣೆ, ‘ಅಕ್ಷರಗಳ ಮೇಲೆ ಅಕ್ಕರೆಯುಳ್ಳವರಿಗಾಗಿ’….ಎಂಥಹಾ ಸುಂದರ ಪದಗಳ ಜೋಡಣೆ!

ಒಳಹೊಕ್ಕರೆ ಜ್ಞಾನದ ಪ್ರಪಂಚವೇ ತೆರೆದುಕೊಂಡಿತ್ತು.ಒಳಹೋಗುತ್ತಿದ್ದಂತೆ ಸಂಪಾದಕೀಯ ವಿಭಾಗ ಆತ್ಮೀಯವಾಗಿ ಸ್ವಾಗತಿಸಿತ್ತು.ಇನ್ನೂ ಮುಂದಕ್ಕೆ ಹೋಗುತ್ತಿದ್ದಂತೆ ವಿಶಾಲವಾದ, ಕನ್ನಡಿಯಂತೆ ಹೊಳೆಯುತ್ತಿದ್ದ ‘ಬೊಗಸೆ-ಬಿಂಬ’ ಕೊಳ,ಅದೆಷ್ಟೋ ಮನಸುಗಳ ಭಾವನೆ, ಹೊಸ ವಿಚಾರಗಳನ್ನು ಪ್ರತಿಫಲಿಸುತ್ತಿದೆ. ಇನ್ನೂ ಮುಂದಕ್ಕೆ ಚಲಿಸುತ್ತಿದ್ದಂತೆ ಸುಂದರ ಉದ್ಯಾನವನ ‘ಬೆಳಕು-ಬಳ್ಳಿ’, ಹೂವುಗಳು, ದುಂಬಿಗಳಿಂದ ಮತ್ತಷ್ಟು ಸುಂದರವಾಗಿ ಕಾಣುತ್ತಿದೆ.ಈ ಉದ್ಯಾನವನದಲ್ಲಿ ನಾನೂ ಒಂದು ಪುಟ್ಟ ‘ಸವಿಗನಸಿನ’ ಹೂ ಗಿಡವನ್ನು ನೆಟ್ಟೆ. ಈ ಉದ್ಯಾನವನದಿಂದ ಹೊರಹೊಮ್ಮುತ್ತಿದ್ದ ಹೂವುಗಳ ‘FRAGRANCE’ ಆಹ್ಲಾದಕರವಾಗಿದೆ. ಇಲ್ಲಿನ ಹಕ್ಕಿಗಳ ‘ಇಂಚರ’ಮಂತ್ರ ಮುಗ್ಧ ಗೊಳಿಸುತ್ತಿದೆ.

ಎಡಬದಿಯಲ್ಲಿರುವ ವಿಶಾಲವಾದಸೂಪರ್-ಪಾಕ’ ಪಾಕಶಾಲೆಯಿಂದ ತರಹೇವಾರಿ ಅಡುಗೆಗಳ ಘಮ ಹೊರಸೂಸುತ್ತಿದೆ. ಹೊಸ ಹೊಸ ಅಡುಗೆಗಳ ಪ್ರಯೋಗ ನಡೆಯುತ್ತಲೇ ಇದೆ. ಎಲ್ಲವೂ ಒಂದಕ್ಕಿಂತ ಎಂದು ರುಚಿ.ಬಲಬದಿಯಲ್ಲಿ ‘ಛಾಯಾ-click’ ಎಂಬ ಛಾಯಾಚಿತ್ರಗಳ ಸಂಗ್ರಹಾಲಯವೇ ಇದೆ.ಇವೆಲ್ಲದರ ಜೊತೆಗೆ ‘ಪುಸ್ತಕ-ನೋಟ’ವನ್ನು ಪರಿಚಯಿಸುವ ಗ್ರಂಥಾಲಯ.ಈ ಸುರಗಿಯೆಂಬ ಪ್ರಪಂಚದಲ್ಲಿ ನೇಸರನೂ ಜ್ಞಾನ ‘ಲಹರಿ‘ಯ ಕಿರಣವನ್ನು ಹೊರಸೂಸುತ್ತಿದ್ದಾನೆ.

‘ಸುರಹೊನ್ನೆ-ಸುರಗಿ’. ನಿನ್ನ ಪ್ರಥಮ ವರುಷದ ಹುಟ್ಟುಹಬ್ಬದ ಈ ಸಂಭ್ರಮಕ್ಕೆ ಇದು ನನ್ನದೊಂದು ಪುಟ್ಟ ‘ಉಡುಗೊರೆ’ .ಇನ್ನಷ್ಟೂ ಹೊಸ ಹೊಸ ಅಂಕಣಗಳು ಮೂಡಲಿ,ಈಗತಾನೆ ಬರವಣಿಗೆಯ ಲೋಕಕ್ಕೆ ಅಂಬೆಗಾಲು ಇಡುತ್ತಿರುವವರನ್ನು ಎತ್ತಿಕೊಂಡು,ಬೆಳೆಸುವಂತಾಗಲಿ ಎಂದು ಹಾರೈಸುತ್ತೇನೆ…ALL THE BEST ‘SURAGI’..

ಹುಟ್ಟುಹಬ್ಬದ ಶುಭಾಶಯಗಳು ‘ಸುರಹೊನ್ನೆ-ಸುರಗಿ’.

 

– ಸಹನಾ ಪುಂಡಿಕಾಯಿ

 

2 Responses

  1. Ranganna Nadgir says:

    “Sura HonneGe” Inthaha Huttu Habbagalu Savira . savira Barali Endu Haraisuttewe”

  2. Pushpa Nagathihalli says:

    ಸುರಹೊನ್ನೆ ನಿನ್ನ. ಹೆಸರೇ ಅದ್ಭುತ . ನಿನಗೆ ಹುಟ್ಟುಹಬ್ಬದ ಶುಭಾಶಯಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: