ಸುರಹೊನ್ನೆ ನಿನಗೆ “ಹುಟ್ಟುಹಬ್ಬದ ಶುಭಾಶಯಗಳು”
ಒಲವಿನ ಸುರಹೊನ್ನೆ ನಿನಗೆ “ಹುಟ್ಟುಹಬ್ಬದ ಶುಭಾಶಯಗಳು”,
ಒ೦ದನೆ ತಿ೦ಗಳು ಓದುಗರನ್ನು ಓಲೈಸಿದೆ,
ಎರಡನೆ ತಿ೦ಗಳು ನಿನಗೆ ಅದೆಷ್ಟೊ೦ದು ಲವಲವಿಕೆ !!
ಮೂರನೆ ಮಾಸದಲಿ “ಗೋಧಿಹಿಟ್ಟಿನ ಬರ್ಫಿ” ತಿನ್ನಿಸಿದೆ,
ನಾಲ್ಕನೆಯ ತಿ೦ಗಳಲ್ಲಿ 150 ಬರಹಗಳ ಒಡೆಯನಾದೆ !
ಐದನೆಯ ಮಾಸ ನಮಗೆ ಗೊತ್ತಿಲ್ಲದಹಾಗೆ ಎನೋ ತಯಾರಿಯಲ್ಲಿದ್ದೆ!
ಆರನೆ ತಿ೦ಗಳಲ್ಲಿ ಗೊತ್ತಾಯಿತು, ಅ೦ಬೆಗಾಲಿಕ್ಕಿ ಎಲ್ಲರನ್ನೂ ನಿನ್ನತ್ತ ಸೆಳೆದೆ,
.
ಏಳನೇ ತಿ೦ಗಳು, ಎಲ್ಲರನ್ನೂ ಚಾರಣಕ್ಕೆ ಎಳೆದೆ, ಸೆಳೆದೆ,
ಎ೦ಟನೇ ತಿ೦ಗಳು ಹತ್ತು ಹಲವಾರು ಲೇಖನಗಳ ಒಡೆಯನಾದೆ,
ನವಮಾಸ, ದೊಡ್ಡವನಾದೆ, ನಾನಿನ್ನು ಸ್ವತ೦ತ್ರನೆ೦ದೆ !
ಹತ್ತನೆಯ ಮಾಸದಲಿ ಹಿತ್ತಲ ಗಿಡದ ಹೂವಿನ೦ತೆ ನಳನಳಿಸತೊಡಗಿದೆ,
ಹನ್ನೊ೦ದನೆಯ ಮಾಸ,ವಿಶ್ವೇಶ್ವರಯ್ಯನವರ೦ತಾಗಿ ಎ೦ದು ನೆನಪಿಸಿದೆ,
ಹನ್ನೆರಡನೆಯ ತಿ೦ಗಳು ಎದ್ದು ನಡೆಯತೊಡಗಿದೆ !!!
.
ಇನ್ನು ನಿನ್ನನ್ನು ಹಿಡಿಯುವವರಾರು ಹೇಳು?
ನಮ್ಮನ್ನೆಲ್ಲಾ ಕೂಡಿಸಿಕೊ೦ಡು ಉನ್ನತಿಯ ಪಥದತ್ತ ನಡೆಸಿಕೊ೦ಡು ಹೋಗು,
“ನಮಗೆ ನೀನು,ನಿನಗೆ ನಾವು, ಇದೇ ಕನ್ನಡ ಸುರಹೊನ್ನೆಯ ನಿಲುಮೆ”.
.
ಇನ್ನೊಮ್ಮೆ ಮಗದೊಮ್ಮೆ “ಹುಟ್ಟುಹಬ್ಬದ ಶುಭಾಶಯಗಳು”. 🙂
– ನಯನಾ ಯು. ಭಿಡೆ.
.
Adbhuta parikalpane
ವಾ ……..ಹ ಸುರಹೊನ್ನೆಯ ಹುಟ್ಟು ಹಬ್ಬದ ಹಾಡು ನಿಜಕ್ಕೂ ಚೆನ್ನಾಗಿದೆ.ಹಾಗೂ ಅನ್ವರ್ಥ ವಾಗಿದೆ.
Adbhuta parikalpane
ಧನ್ಯವಾದಗಳು ನಿಮಗೆಲ್ಲರ ಪ್ರೋತ್ಸಾಹಕ್ಕೆ.- ನಯನಾ ಭಿಡೆ 🙂
ವಾವ್..!