ಇಂಜಿನಿಯರ್ ಗಳ ದಿನ -15 ಸೆಪ್ಟೆಂಬರ್
ಇಂಜಿನಿಯರ್ ಎಂದರೆ ಹೇಗಿರಬೇಕು ಎಂಬ ಪ್ರಶ್ನೆಗೆ ‘ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ’ ನಂತಿರಬೇಕು ಎಂದು ಪ್ರಪಂಚವೇ ಕೊಂಡಾಡಿದ ಭಾರತದ ಅದ್ವಿತೀಯ ಮೇಧಾವಿ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು (ಸರ್. ಎಮ್. ವಿ) ಹುಟ್ಟಿದುದು 15 ಸೆಪ್ಟೆಂಬರ್ 1860 ರಂದು. ಅವರ ನೆನಪಿಗಾಗಿ 15 ಸೆಪ್ಟೆಂಬರ್ ಅನ್ನು ‘ಇಂಜಿನಿಯರ್ ಗಳ ದಿನ’ ವನ್ನಾಗಿ ಆಚರಿಸಲಾಗುತ್ತಿದೆ.
ಇವರು ತಮ್ಮ ಬಾಲ್ಯದಲ್ಲಿ ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿದ್ದರು. ಅವರಿಗೆ ಬಾಲ್ಯದಲ್ಲಿ ಬಡತನವಿತ್ತು. ಅವರು ಬೀದಿದೀಪದ ಬೆಳಕಿನಲ್ಲಿ ಓದಿದ್ದರು ಎಂದು ಕೇಳಿದ್ದೆ. ಅವರು ವಾಸವಿದ್ದ ಮನೆ ಈಗ ನವೀಕರಣಗೊಂಡು ಮ್ಯೂಸಿಯಂ ಆಗಿದೆ. ಅದೇ ಆವರಣದಲ್ಲಿ ಅವರು ಹಿಂದೆ ವಾಸಿಸುತ್ತಿದ್ದ ಹೆಂಚಿನ ಮನೆಯೂ ಇದೆ. ಅವರಿಗೆ ಲಭಿಸಿದ ನೂರಾರು ಉಪಾಧಿಗಳು, ಪ್ರಶಸ್ತಿಗಳು, ಬಳಸುತ್ತಿದ್ದ ವಸ್ತುಗಳು ಇತ್ಯಾದಿಗಳನ್ನು ಅಲ್ಲಿ ಪ್ರದರ್ಶನಕ್ಕಿಡಲಾಗಿದೆ.
ತನ್ನ ಉದ್ಯೋಗ ಪರ್ವದಲ್ಲಿ ದೇಶದ ವಿವಿದೆಡೆ ಮತ್ತು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲದಲ್ಲಿ ಕರ್ನಾಟಕಕ್ಕೆ ಸರ್. ಎಮ್. ವಿ ಕೊಡುಗೆ ಅಪಾರ. ಅವರ ಶಿಸ್ತಿನ ಜೀವನ, ಸಮಯಪರಿಪಾಲನೆ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಇವೆಲ್ಲಾ ಪ್ರಶ್ನಾತೀತ. ಪ್ರಸಿದ್ಧ ಕೃಷ್ಣರಾಜಸಾಗರ ಅಣೆಕಟ್ಟಿನ ವಾಸ್ತುಶಿಲ್ಪಿ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಅವರ ಅಧಿಕಾರಾವಧಿಯಲ್ಲಿ ಹಲವಾರು ಕೈಗಾರಿಕೆಗಳು ರೂಪುಗೊಂಡುವು.
.
.
ಮುದ್ದೇನಹಳ್ಳಿ ಈಗಲೂ ಪುಟ್ಟ ಹಳ್ಳಿಯಾಗಿಯೇ ಇದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಿಂದ ಸುಮಾ3 ಕಿ.ಮಿ ದೂರದಲ್ಲಿದೆ. ಅಲ್ಲಿ ವಿಶ್ವೇಶ್ವರಯ್ಯನವರ ಸಮಾಧಿಯಿದೆ. 2014ರ ಜುಲೈ ತಿಂಗಳಿನಲ್ಲಿ ನಂದಿಬೆಟ್ಟಕ್ಕೆ ಚಾರಣ ಹೋಗಿದ್ದಾಗ ಮುದ್ದೇನಹಳ್ಳಿಗೂ ಹೋಗಿ ಸರ್. ಎಮ್. ವಿ ಗೆ ನಮನ ಸಲ್ಲಿಸಿದ್ದೆವು.
.
– ಹೇಮಮಾಲಾ.ಬಿ
ದೇವತಾ ಸ್ವರೂಪಿಯಾದ ಸರ್ .ಎಂ.ವಿ ಅವರು ನಮ್ಮ ಮಾರ್ಗದರ್ಶಕರು, ನೀವು ಬರೆದ ಸಚಿತ್ರ ಲೇಖನ ಅದ್ಭುತವಾಗಿದೆ. ನಿಮ್ಮ ಸಾಹಿತ್ಯ ಬರವಣಿಗೆ ಇದೇ ರೀತಿ ಮುಂದುವರಿಯಲಿ.
The great
I SALUTE THE GREATEST ENGINEER OF ALL TIMES.