Elephant Yam .. ಸುವರ್ಣಗಡ್ಡೆ.
ಇಂಗ್ಲಿಷ್ ನಲ್ಲಿ Elephant Yam – ಕನ್ನಡದಲ್ಲಿ ಸುವರ್ಣಗಡ್ಡೆ ಎಂದು ಕರೆಯಲ್ಫಡುವ ಈ ಗಡ್ಡೆ ತರಕಾರಿಯಿಂದ ಸಾಂಬಾರ್, ಮಜ್ಜಿಗೆ ಹುಳಿ, ಪಲ್ಯ,ಕೂಟು ಇತ್ಯಾದಿ ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸಬಹುದು. ಸ್ವಲ್ಪ ಆಧುನಿಕೀಕರಿಸಿ ಚಿಪ್ಸ್,ಕಟ್ಲೇಟ್ ಇತ್ಯಾದಿ ತಯಾರಿಸಿದರೂ ರುಚಿಯಾಗಿರುತ್ತದೆ.
ಕೆಲವು ಸುವರ್ಣ ಗಡ್ಡೆಗಳನ್ನು ಹೆಚ್ಚುವಾಗ ಕೈ ತುರಿಕೆಯಾಗುತ್ತದೆ. ಹಾಗಾಗಿ ಮುಂಜಾಗರೂಕತೆಯಿಂದ ಕೈಗೆ ತೆಂಗಿನ ಎಣ್ಣೆ ಅಥವಾ ಹುಣಸೇಹಣ್ಣನ್ನು ಉಜ್ಜಿ ಆಮೇಲೆ ಗಡ್ಡೆ ಹೆಚ್ಚುವ ಅಭ್ಯಾಸವಿದೆ. ಇನ್ನು ಕೆಲವರು ಹೆಚ್ಚಿದ ಕೂಡಲೇ ಕೈಗೆ ಮಜ್ಜಿಗೆ ಹಾಕಿ ತೊಳೆಯುತ್ತಾರೆ. ಮಾಡರ್ನ್ ಯುವತಿಯರು, ಕೈಗೆ ಗ್ಲೌಸ್ ಹಾಕಿಕೊಂಡು ಸುವರ್ಣಗಡ್ಡೆ ಹೆಚ್ಚುವುದೂ ಇದೆ!
ಸುವರ್ಣ ಗಡ್ಡೆಯ ಹಸಿರು ಗಿಡ ಸೊಗಸಾಗಿದೆ. ಅದರ ಹೂವು ನೋಡಲು ಚೆನ್ನಾಗಿದೆ. ಆದರೆ ಸುವರ್ಣ ಗಡ್ಡೆಯ ಹೂವಿನ ‘ಗಂಧ’ ಮಾತ್ರ ಮೂಗು ಮುಚ್ಚಿಸುತ್ತದೆ. (ಚಿತ್ರಕೃಪೆ: ಅಂತರ್ಜಾಲ)
– ಸುರಗಿ
idara stem koodaa olleya (tasty) tharakaari…
GOOD INFORMATION ,HIGHLY. APPRECIABLE
ತಿರುಳು ಕೆಂಬಣ್ಣ ಇದ್ದರೆ ರುಚಿ ಹೆಚ್ಚು.ಕಾಂಡ ಕೂಡಾ ಉಪಯೋಗಕಾರಿ.ಮಾರುಕಟ್ಟೆಯಲ್ಲಿ ಸಿಗೋ ಸುವರ್ಣ ಗಡ್ಡೆ ಯಾವ ಪ್ರದೇಶದಲ್ಲಿ ಬೆಳೆಸಿದ್ದಾರೆ ಅಂತ ಊಹಿಸೊದು ಕಷ್ಟ, ಕೊಳಚೆಯಲ್ಲಿ ಬೆಳೆದ ಗಡ್ಡೆಯಾದರೆ ಆರೋಗ್ಯ ಸಮಸ್ಯೆ.ಆರೋಗ್ಯ ದೃಷ್ಟಿಯಿಂದ ಇದರ ಅಡುಗೆಯಲ್ಲಿ ಅರಿಶಿನ ಪುಡಿ ಬಳಸೋದು ಸೂಕ್ತ.
Nice
good information…istella….. heilida mele chips madi kaliso javab dhaaari nimmadu…………OK
ನರಸಿಂಹರಾಜಪುರದಲ್ಲಿ ಈ ಗೆಡ್ಡೆಯನ್ನು ದಾಖಲೆ ಪ್ರಮಾಣದಲ್ಲಿ ಬೆಳೆಯುತ್ತಾರೆ.ಸರಾಸರಿ ವರ್ಷಕ್ಕೆ ೫ಕೋಟಿ ರೂಗಳ ವ್ಯವಹಾರ ನಡೆಯುತ್ತದೆ.