ಕಾವ್ಯ ಭಾಗವತ : ಕಪಿಲ – ೧
14. ತೃತೀಯ ಸ್ಕಂದ
ಅಧ್ಯಾಯ – ೪
ಕಪಿಲ – ೧
ಕರ್ದಮ ಮಹರ್ಷಿಯ ಪತ್ನಿ
ದೇವಹೂತಿ
ಪತಿನಿಷ್ಠೆ ಪಾರಾಯಣೆ
ಸಂತಾನಾಪೇಕ್ಷಿಯಾಗಿ
ಕಾಮಾತುರಳಾಗಿ
ಕೃಶಳಾಗಿ
ಪರಿತಪಿಸುತಿಹ
ಭಾರ್ಯೆಗೆ
ಸಕಲ ಸೌಭಾಗ್ಯಗಳ
ತನ್ನ ಯೋಗಶಕ್ತಿಯಿಂ
ಸೃಷ್ಟಿಸಿ
ನೂರು ವರುಷಗಳ
ದಾಂಪತ್ಯ ಸುಖವ
ಕ್ಷಣವೆಂಬಂತೆ ಕಳೆದು
ತನ್ನ ತೇಜಸ್ವೀ ವೀರ್ಯವಂ
ಒಂಭತ್ತು ಭಾಗಗಳಾಗಿ ಮಾಡಿ
ಪತ್ನಿಯ ಗರ್ಭದಲಿ ಸ್ಥಾಪಿಸಿ
ಒಂಭತ್ತು ಗುಣಶೀಲೆಯರು
ಕಲೆ, ಅನಸೂಯ, ಶ್ರದ್ಧಾ, ಹವಿರ್ಬು,
ಗತಿ , ಕ್ರಿಯೆ, ಖ್ಯಾತಿ, ಅರುಂಧತಿ, ಶಾಂತಿ,
ಎಂಬ ನಾರೀಮಣಿಗಳು
ಪುಟ್ಟಿ ಬಾಲ್ಯಕಳೆದ
ನಂತರದಿ, ಒಂಭತ್ತು ಮಹರ್ಷಿ
ಮುನಿಪುಂಗವರೊಂದಿಗೆ
ಕಲ್ಯಾಣವಂ ಗೈದನಂತರದಿ
ವಾನಪ್ರಸ್ಥಕ್ಕೆ ತೆರಳುವ ಸಮಯದಿ
ಸತಿಯ ಸಾಂತ್ವನಿಸುತ –
ನಿನ್ನುದರದಲಿ ಪರಮಪುರುಷನೋರ್ವ
ಜನಿಪನು, ಲೋಕಕಲ್ಯಾಣವೆಸಗುವನು
ಅದು ನಮ್ಮೆಲ್ಲರ
ಮುಕ್ತಿಗೆ ಮಾರ್ಗ-
ಎಂದರುಹಿ,
ಹರಸಿದ ಪತಿಯ ಬೀಳ್ಕೊಟ್ಟು
ಪರಮಪುರುಷ ಕಪಿಲ ದೇವಗೆ
ಜನ್ಮವಿತ್ತ ದೇವಹೂತಿ
ತಾನೇ ಧನ್ಯ
ಎಂದು
ಸಂಭ್ರಮಿಸಿದಳು
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41115
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಅಂತೂ ಭಾಗವತ ಅರ್ಥಮಾಡಿಕೊಳ್ಳಲು ಒದ್ದಾಡುತ್ತಿದ್ದ ನನಗೆ ಈ ಕಾವ್ಯ ಭಾಗದಿಂದ.. ಮತ್ತೆ ಓದುವಂತೆ ಪ್ರೇರಣೆ ನೀಡುತ್ತಿದೆ..ಅದಕ್ಕಾಗಿ ಧನ್ಯವಾದಗಳು ಸಾರ್..
ಪ್ರತಿಕ್ರಿಯೆಗಾಗಿ ಧನ್ಯವಾದಗಳು
ನಾಗರತ್ನ ಮೇಡಂ ಹೇಳಿದ್ದು ನಿಜ. ಸುಲಭವಾಗಿ ಅರ್ಥಮಾಡಿಕೊಳ್ಳುವಂತಿದೆ ಕಾವ್ಯ ಭಾಗವತ.
ಓದಿ ಪ್ರತಿಕ್ರಿಯೆ ನೀಡಿದಕ್ಕಾಗಿ ವಂದನೆಗಳು
ಪ್ರಕಟಿಸಿದ ಸುರಹೊನ್ನೆ ಗೆ ಧನ್ಯವಾದಗಳು
ಕ್ಲಿಷ್ಟ ಭಾಗವತದ ಸರಳ ಸುಂದರ ಕಾವ್ಯ ಭಾಗವತ ಅವತರಣಿಕೆಯು ಕ್ಷಿಪ್ರವಾಗಿ ಓದುಗರ ಮನಮುಟ್ಟುವಂತಿದೆ… ಧನ್ಯವಾದಗಳು ಸರ್.
ಕಪಿಲ ಮುನಿಯ ಹುಟ್ಟಿನ ಕುರಿತಾದ ವಿವರಗಳುಳ್ಳ ಭಾಗವತ ಕಾವ್ಯಭಾಗ ಸೊಗಸಾಗಿದೆ.