ಹಕ್ಕಿ ಹಾಡೊಳಗೆ
ತರತರದ ಹಕ್ಕಿಗಳು
ಈ ಜಗದಿ ಉಳಿದು
ಬರುವ ಮೋಡವ ನೋಡಿ
ಚಂದದಲಿ ಹಾಡಿವೆ
ತಂಗಾಳಿ ತರುವ ಗಾಳಿಯಲ್ಲಿ
ಮಳೆ ಹನಿಯ ಕರೆದು
ಹೇಳಿದ ಸಾಲಿನ ಹಾಡಿನಲ್ಲಿ
ಇಳೆ ಮಣ್ಣ ಪ್ರೀತಿಯಿದೆ
ಹಣ್ಣು ಚಿಗುರು ಬೇರು ಹೂವು
ಹಕ್ಕಿ ಹಾಡಿನ ಉಳಿವು
ಗೂಡೊಳಗಿನ ಆಡಿದ ಮಾತು
ಸಗ್ಗ ಒಲವಿನ ಸೇತು
ಹಕ್ಕಿ ಹಾಡೊಳಗೆ ತುಂಬಿದೆ
ನಾಲ್ಕು ದಿನದ ಕವಿತೆ
ಬರೆಯದ ಮೋಡದಿ ಕುಳಿತಿದೆ
ಹನಿ ಮಳೆಯ ಚರಿತೆ
ಮೋಡ ಮಳೆ ಹನಿ ಹಕ್ಕಿಹಾಡು
ಮಳೆ ಕಾಲನ ಚಿತ್ರ ನೋಡು
ದುಡಿಮೆ ಪ್ರೀತಿ ಅಭಿಮಾನ
ಬುವಿಗೆ ಮಳೆಯೇ ಬಹುಮಾನ
–ನಾಗರಾಜ ಬಿ. ನಾಯ್ಕ, ಕುಮಟಾ .
ನಾಲ್ಕನೆಯ ಸ್ಟ್ಯಾಂಜ಼ಾ ಇಷ್ಟವಾಯಿತು ಸ್ನೇಹಿತರೇ….
ಅಭಿನಂದನೆ ಮತ್ತು ಧನ್ಯವಾದ
ಸರ್ ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ
ಸರಳ ಸುಂದರ ಕವನ ಮನಕ್ಕೆ ಮುದ ತಂದಿತು ಸಾರ್..
ಧನ್ಯವಾದಗಳು ತಮ್ಮ ಓದಿಗೆ
ಇಳೆ,, ಮಳೆ … ಗಾಳಿ.. ಚಿಗುರು ಹೂವು ಹಣ್ಣು ಹಕ್ಕಿಯ ಹಾಡು ಒಂದಕ್ಕೊಂದು ಪೂರಕವಾಗಿ ಕವಿತೆಯ ಸಾಲಲ್ಲಿ ಸುಂದರವಾಗಿ ಮೂಡಿ ಬಂದಿದೆ
ಎನ್. ಜಿ
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ
ಸುಂದರ ಕವನ
ಧನ್ಯವಾದಗಳು ತಮ್ಮ ಓದಿಗೆ
ಭುವಿಗೆ ಮಳೆಯೇ ಬಹುಮಾನ! ಚೆಂದದ ಸಾಲು
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ
ಬರೆಯದ ಮೋಡದಿ ಕುಳಿತಿದೆ ಹನಿ ಮಳೆಯ ಚರಿತೆ
ಸೊಗಸಾದ ಅರ್ಥವತ್ತಾದ ಸಾಲುಗಳು…
ಕವನ ಚೆನ್ನಾಗಿದೆ.
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ
ಬುವಿಗೆ ಮಳೆಯೇ ಬಹುಮಾನ.
ಚಂದದ ಕವಿತೆಯ ಮುಕುಟದಂತಿದೆ ಈ ಸಾಲುಗಳು.
ಧನ್ಯವಾದಗಳು ತಮ್ಮ ಓದಿಗೆ