ಚೆಂದಕ್ಕೊಂದು……
ಚೆಂದಕ್ಕೊಂದು ಮಲ್ಲಿಗೆ ಗಿಡ
ಜಾಗ ಇರುವಲ್ಲಿ ನೆಟ್ಟು ಬಿಡೋಣ
ಸುಮ್ಮನೆ ಹಸಿರು ಹೆಚ್ಚಿ
ಚಿಗುರಿತು ಮತ್ತೆ ಮತ್ತೆ
ಕಾಲದಲ್ಲೊಮ್ಮೆ ಹೂ ಬಿಟ್ಟು
ನಗುತಾ ನಿಂತು ಕರೆದೀತು ಸುಮ್ಮನೇ
ನಿಂತು ಹಗುರಾಗೋಣ
ಅದರ ಚೆಲುವು ನಗುವಿಗೆ
ಮಣ್ಣಿನ ಪ್ರೀತಿಯ ಗುರುತಿಗೆ
ಬೆಳ್ಳಗಿನ ಹೂವಿನ ಉಳಿವನು
ಅರಿವಾಗಿಸಿ ಬದುಕೋಣ
ನೆಟ್ಟು ಬೆಳೆಸಿದ ಹಸಿರು
ಸಂಭ್ರಮವ ಕೊಟ್ಟೀತು ಉಸಿರಿಗೆ
ಜೀವ ಜಾಲದ ಉಳಿವಿಗೆ
ಆಸರೆ ಕೊಟ್ಟೀತು ಬದುಕಿಗೆ
ಹಬ್ಬಿ ನಿಂತ ಎಳೆ ಲತೆಗಳಲ್ಲಿ
ರಾಗ ಕೇಳಿತು ಸುಮ್ಮನೇ
ಮಾತು ಮರೆಸಿ ಮೌನ ಹೆಚ್ಚಿ
ಪ್ರೀತಿ ಉಸಿರಿದ ಗಾನಕೇ
ಮತ್ತೆ ಮತ್ತೆ ಬದುಕಿ ಉಳಿಯಲಿ
ಹಸಿರು ತುಂಬಿದ ಇಳೆಯು
ನಾಳಿನ ಆಸೆ ಬೆರಗಿನ ರೂಪದಿ
ತುಂಬಿಕೊಳ್ಳಲಿ ಈ ಬುವಿಯು
–ನಾಗರಾಜ ಬಿ.ನಾಯ್ಕ, ಕುಮಟಾ
ಹೂ..ಮನಕೆ..ಮುದತಂದಂತೆ..ಹಸಿರು.
ಇಳೆಗೆಬೇಕೆಂಬ…ಆಶಯ ಹೊತ್ತ ಕವನ ಚೆನ್ನಾಗಿ ದೆ.
ಧನ್ಯವಾದಗಳು ತಮ್ಮ ಓದಿಗೆ
ಬಹಳ ಸುಂದರವಾದ ಸಾಲುಗಳು
ಧನ್ಯವಾದಗಳು ತಮ್ಮ ಓದಿಗೆ
ಹಸಿರೇ ಉಸಿರು…! ಪ್ರಕೃತಿಯನ್ನು ಉಳಿಸುವ ಆಶಯವನ್ನು ಹೊತ್ತ ಸುಂದರ ಸಾಲುಗಳು ಅರ್ಥಪೂರ್ಣವಾಗಿವೆ.
ಧನ್ಯವಾದಗಳು ತಮ್ಮ ಓದಿಗೆ