ಅಂತರ
ನೋವಿಗೂ ನಗುವಿಗೂ
ಎಷ್ಟು ಅಂತರ
ಪ್ರೀತಿ ಅರಿವು ಹಂಚಿದಷ್ಟು
ಬಾಳು ಸುಂದರ
ನವ್ಯ ನಲಿವು ಒಲಿದ ಒಲವು
ಬಾಳ ಗೆಲುವಿಗೆ
ನಾಳೆ ದಿನವ ಸದಾ ನೆನೆವ
ಮೌನ ಚೆಲುವಿಗೆ
ಆಪ್ತದೊಂದು ಸುಪ್ತ ಮಾತು
ಸುತ್ತಿಕೊಳ್ಳಲು
ನೋಟಕೊಂದು ಕಣ್ಣು ಸಾಕು
ಜಗವ ನೋಡಲು
ಹಸಿದ ಹಸಿವೆಗೆ ಮಣ್ಣೊಳಗಿನ
ಅನ್ನ ಉಸಿರಾಗಿದೆ
ನಿದ್ದೆ ಕನಸಿನ ಕಣ್ಣಿಗೆ
ನೆಮ್ಮದಿ ಮುನ್ನುಡಿಯಾಗಿದೆ
ಹಸಿರು ಮಡಿಲಿಗೆ ಚಿನ್ನದೆಳೆಗಳು
ನಗುತಾ ಹರಡಿವೆ ಸೊಬಗನು
ಪ್ರೀತಿ ಚೆಲುವಿಗೆ ಬಾಳು ನಗುತಿದೆ
ಹಾಡಿ ಹೊಗಳಿದೆ ಬದುಕನು
–ನಾಗರಾಜ ಬಿ.ನಾಯ್ಕ , ಕುಮಟಾ
ಸರಳ ಸುಂದರ ಕವನ..ಸಾರ್
ಧನ್ಯವಾದಗಳು ತಮ್ಮ ಓದಿಗೆ
ಸುಂದರವಾದ ಸಾಲುಗಳು.
ಧನ್ಯವಾದಗಳು ತಮ್ಮ ಓದಿಗೆ
ಪ್ರೀತಿ ಬಾಳನ್ನು ಚಂದಗೊಳಿಸುವ ಸಂದೇಶವನ್ನು ಹೊತ್ತ ಕವನ ಸೊಗಸಾಗಿದೆ.
ಧನ್ಯವಾದಗಳು ತಮ್ಮ ಓದಿಗೆ
ಸುಂದರವಾದ ಕವನ
ಧನ್ಯವಾದಗಳು ತಮ್ಮ ಓದಿಗೆ
ಸುಂದರವಾದ ಕವನ
ಅದಕ್ಕೆ ನನ್ನ ನಮನ
ಧನ್ಯವಾದಗಳು
Super.
ಧನ್ಯವಾದಗಳು
ಪ್ರೀತಿಯಲ್ಲಿನ ನೆಮ್ಮದಿಯನ್ನು ಸಾರುವ ಕವನದ ಸಾಲು ಸುಂದರ ಸರ್.
ಧನ್ಯವಾದಗಳು
ಸುಂದರ ಕವನ.
ಧನ್ಯವಾದಗಳು ತಮ್ಮ ಓದಿಗೆ
ಸೂಪರ್ ಸರ್
ಬದುಕಿನ ಹಲವು ನೋಟಗಳು ಮತ್ತು ಸುತ್ತಲಿನ ಸೊಬಗನ್ನು ಕವಿತೆಯಲ್ಲಿ ಸುಂದರವಾಗಿ ವರ್ಣಿಸಲಾಗಿದೆ. ಕವಿತೆ ಮನವ ಕಟ್ಟುತ್ತದೆ. ಖುಷಿಯ ನೀಡುತ್ತದೆ.
ಧನ್ಯವಾದಗಳು ತಮ್ಮ ಓದಿಗೆ
ಸೊಗಸಾದ ಕವನ
ಧನ್ಯವಾದಗಳು ತಮ್ಮ ಓದಿಗೆ
ಸರಳವಾಗಿರುವ ಕವನ ಸುಂದರವಾಗಿದೆ.
ಧನ್ಯವಾದಗಳು ತಮ್ಮ ಓದಿಗೆ
ಪ್ರತಿಕ್ರಿಯೆಗೆ ಧನ್ಯವಾದಗಳು
ಚನ್ನಾಗಿದೆ. ಅಭಿನಂದನೆಗಳು
ಧನ್ಯವಾದಗಳು ತಮ್ಮ ಓದಿಗೆ