ಗಝಲ್
ಸೋಗೆಮನೆ ಸೋರಿದರೂ ಸೋಲದೆ ಬಾಳ ಕಟ್ಟಿರುವೆಯಲ್ಲ ನೀನು
ಸೋನೆಮಳೆ ಸುರಿದರೂ ತಪ್ಪದೆ ಗುರಿ ಮುಟ್ಟಿರುವೆಯಲ್ಲ ನೀನು
ಬುವಿಯಲ್ಲಿ ಬವಣೆ ನರಕದಿಂದ ಮುಕ್ತಿ ಯಾರಿಗಿದೆ ಹೇಳು
ನವೆಯದೆ ಸುಖವುಂಟೇ ಅಳುಕದೆ ಹೆಜ್ಜೆ ಇಟ್ಟಿರುವೆಯಲ್ಲ ನೀನು
ಸಪ್ತವರ್ಣದ ಮಳೆಬಿಲ್ಲ ನೋಡದೆ ಮುಚ್ಚಿಕೊಳ್ಳುವವರುಂಟೆ ಕಣ್ಣ
ಸುಪ್ತಮನದ ಮಾತಕೇಳಿ ಅಂಜದೆ ಕನಸ ಮೆಟ್ಟಿರುವೆಯಲ್ಲ ನೀನು
ಇಷ್ಟಗಳ ಬದಿಸರಿಸಿ ನೀತಿ ಮಾರ್ಗದಲಿ ಸಾಗುತಿಹೆಯಲ್ಲ
ಕಷ್ಟಗಳ ಮಳೆ ಸುರಿಯೆ ಬೆಚ್ಚದೆ ಧೈರ್ಯ ಕೊಟ್ಟಿರುವೆಯಲ್ಲಾ ನೀನು
ಉತ್ತಮರ ಸಂಗದಲಿ ಬದುಕ ಹಸನಾಗಿಸಿಕೊಂಡವಳು ಸುಜಿ
ಕುತ್ತುಗಳ ದಾಟುತಲಿ ಕುಂದದೆ ಎದೆಯ ತಟ್ಟಿರುವೆಯಲ್ಲ ನೀನು
–ಸುಜಾತಾ ರವೀಶ್ , ಮೈಸೂರು
ಸ್ಪೂರ್ತಿಯ ನೀಡುತ ಸಾಗಿದ ಸ್ವಗತ ಸುಂದರ ಕವನ
ತುಂಬಾ ಚೆನ್ನಾಗಿದೆ
ಧನ್ಯವಾದಗಳು ವಿದ್ಯಾ ಅವರೇ
ಸುಜಾತಾ ರವೀಶ್
ವಾವ್…ಸಕಾರಾತ್ಮಕ ನಿಟ್ಟಿನಲ್ಲಿ ಸಾಗುವ..ಗಝಲ್.. ಚೆನ್ನಾಗಿದೆ ಸೋದರಿ.
ಧನ್ಯವಾದಗಳು
ಚೆನ್ನಾಗಿದೆ
ಆಹಾ ಇದನ್ನು ನಿಜವಾಗಿಯೂ ನಾವು ಅರ್ಥ ಮಾಡಿಕೊಂಡರೆ ನಾವು ಒಳ್ಳೆಯ ಜೀವನವನ್ನು ಕಟ್ಡಿಕೊಳ್ಳಬಹುದು ಜೊತೆಗೆ ನಮ್ಮ ಜೀವನ ಸಹ ಸಾರ್ಥಕತೆಯನ್ನು ಹೊಂದುತ್ತೆ
ಅರ್ಥ ಪೂರ್ಣ ಗಝಲ್ ಮೇಡಂ
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಗಜಲ್
Very meaningful & inspiring gazal…
ಸೊಗಸಾದ ಅರ್ಥಪೂರ್ಣ ಸಾಲುಗಳು.
ದಿಟ್ಟ ಹೆಜ್ಜೆ ಇಡಲು ಬೆನ್ನು ತಟ್ಟುವ ಸ್ಫೂರ್ತಿದಾಯಕ ಕವನ
ಭಾವಪೂರ್ಣ ಗಜಲ್ ಧನ್ಯವಾದಗಳು
ಅರ್ಥಪೂರ್ಣವಾದ ಗಝಲ್ ಚೆನ್ನಾಗಿದೆ