ಹದಿಹರೆಯಕ್ಕೆ ಕಾಲಿಟ್ಟಾಗ…..
ಎಷ್ಟೊಂದು ಮುಗ್ದತೆ ಇದೆ ಮೊಗದಲ್ಲಿ
ಅಷ್ಟೊಂದು ನಿಸ್ವಾರ್ಥ ಭಾವವಿದೆ ಆ ನಗೆಯಲ್ಲಿ
ಅಮ್ಮನ ಕಾಡಿ ಬೇಡಿ ಜಾತ್ರೆಯಲಿ ತಂದ ಮಣಿಸರ
ಅಕ್ಕನಿಗೆ ಗೊತ್ತಾಗದಂತೆ ಕದ್ದು ಬಳೆದುಕೊಂಡ ತುಟಿಯ ಬಣ್ಣ
ಮಾಮ ಕೊಡಿಸಿದ ಜರತಾರಿ ಲಂಗ
ಈ ಕಿವಿಯಿಂದ ಆ ಕಿವಿಯವರೆಗೆ ದೊಡ್ಡಮ್ಮ ಮುಡಿಸಿದ ಕನಕಾಂಬರಿ ಮಾಲೆ
ಸೇರಿದ ಬಂಧು ಬಳಗವೆಲ್ಲಾ ಎನ್ನ ಹೊಗಳಿ ಬಣ್ಣಿಸುತಿರಲು
ಬಂದವರೆಲ್ಲಾ ನನ್ನ ಜೊತೆಗೆ ಪೋಟೋ ತೆಗೆದುಕೊಳ್ಳಲು ಮುಗಿಬಿದ್ದಿರಲು
ಅಪ್ಪನಿಗೆ ವಿಶೇಷವಾಗಿ ಹೇಳಿ ಮಾಡಿಸಿದ ತಿನಿಸು ಕೈ ಬೀಸಿ ಕರೆಯುತಿರಲು
ಆಗಮಿಸಿದ ಅಕ್ಕಂದಿರೆಲ್ಲಾ ಮುದ್ದು ಮಾಡಿ ದೃಷ್ಟಿ ತೆಗೆಯುತ್ತಿರಲು
ಬೆಳಗಿನಿಂದ ಓಡಾಡಿದ ಅಪ್ಪನಲ್ಲಿ ಸಂತೃಪ್ತ ಭಾವ ಕಾಣುತ್ತಿರುವೆ
ನಗುವ ಅಮ್ಮನ ಕಣ್ಣಲ್ಲಿ ಕಂಬನಿ ತುಂಬಿರುವುದ ಕಂಡಿರುವೆ
ಏನೋ ಆಗಿಹೋಯಿತು ಎಂದು
ಹೆದರಿಸುವ ಅಜ್ಜಿಯ ಗಮನಿಸಿರುವೆ
ಸಂತಸಪಡುವ ಸಂಗತಿಗೆ ತೊಳಲಾಡುವ ಆ ಹಿರಿಯ ಜೀವ ಕಂಡು ಕಸಿವಿಸಿ ಪಟ್ಟಿರುವೆ
ಹೀಗೆ ಯಾವುದಾದರೂ ಚಿಕ್ಕ ಕಾರಣಕ್ಕೆ ಎಲ್ಲರೂ ಯಾವಾಗಲೂ ಸೇರಬಾರದೆ ?
ಮನ ಮನೆ ತುಂಬಿ ಸಕಲರೂ ನಕ್ಕು ನಲಿಯಬಾರದೆ…,…..ನಲಿಯಬಾರದೆ?…….
– ಶರಣಬಸವೇಶ ಕೆ. ಎಂ
ಸರಳ ಸುಂದರ.. ಅರ್ಥಗರ್ಬಿತ ಕವನ ಚೆನ್ನಾಗಿದೆ ಸಾರ್..
ಚೆನ್ನಾಗಿದೆ
ಧನ್ಯವಾದಗಳು ಬಿ.ಆರ್ ನಾಗರತ್ನ ಮೇಡಂ ಗೆ ಹಾಗೂ ಪದ್ಮಿನಿ ಹೆಗ್ಡೆ ಮೇಡಂ ಗೆ
Sharani ,Nice explanation about simple middle class family teen aged beautiful girl fantasy feelings in this lovely poetry form ,is simply outstanding saharani thank you for such a heart touching poetry.
Sharani ,Nice explanation about simple middle class family teen aged beautiful girl fantasy feelings in this lovely poetry form ,is simply outstanding saharani thank you for such a heart touching poetry.
ಧನ್ಯವಾದಗಳು ಪ್ರಕಾಶ್…..ಹೀಗೆ ನಮ್ಮ ಸುರಹೊನ್ನೆ ಪತ್ರಿಕೆ ಓದುತ್ತಾ ನಮಗೆ ಪ್ರೋತ್ಸಾಹ ನೀಡಿ……ಬೆಳಕು ಬಳ್ಳಿ ಮೇಲೆ ಕ್ಲಿಕ್ ಮಾಡಿದರೆ ಸಂಪೂರ್ಣ ಪತ್ರಿಕೆ ಸಿಗುತ್ತದೆ…. ಅಲ್ಲಿ ವಿಧ ವಿಧವಾದ ಬರಹಗಳು ಸಿಗುತ್ತವೆ
ಸರಳ, ಸುಂದರ ಕವಿತೆ ಚೆನ್ನಾಗಿದೆ.
ಚಂದದ ಕವಿತೆ, ಸರಳವಾಗಿಯೂ ಸುಂದರವಾಗಿಯೂ ಮೂಡಿ ಬಂದಿದೆ.