ಜಗದ ಜೀವದಾತ
ಜಗದ ಕಿರಣ ಸೂರ್ಯ
ಬರದೆ ಭುವಿಯು
ಅರಳದು
ಜನರ ಕಿರಣ ರೈತ
ಇರದೆ ಜನರ
ಜೀವವುಳಿಯದು ….
ಹಸನು ಮಾಡಿ ನೆಲವ
ತಾನು ಉತ್ತು ಕಳೆಯ
ಕಿತ್ತುವ
ಕೆಸರು ಏನೇಯಿರಲಿ
ಬಿಡದೆ ನಾಟಿಮಾಡಿ
ಬಿತ್ತುವ….
ಜಾವ ನಾಲ್ಕರಲ್ಲಿ ಎದ್ದು
ಸೂರ್ಯನನ್ನು
ಬೇಡುವ
ಬೆಳೆಗೆ ನೀರು ಉಣಿಸಲು
ವರುಣನನ್ನು
ಬೇಡುವ….
ಪಚ್ಚೆ ಬೆಳೆದು ಧಾನ್ಯ
ಸಿಗಲು ಸುಗ್ಗಿಮಾಡಿ
ಹಿಗ್ಗುವ
ರಾಶಿಗಿಷ್ಟು ಪೂಜೆಗೈದು
ಲೋಕಕೆಲ್ಲಾ
ಹಂಚುವ…..
ಕಪಟವಿರದ ಮನಸಿನವನು
ಅನ್ನದಾತ
ರೈತನು
ದೇವನಂತೆ ಸಲಹುತಿರುವ
ನಮಿಸಿ ಬಂದು
ಎಲ್ಲರೂ……….
-ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ
ಸರಳ ಸುಂದರ ಕವನ ಅಭಿನಂದನೆಗಳು ಗೆಳತಿ ಭಾಗ್ಯ.
ಚಂದದ ಕವನ
ಅನ್ನದಾತನ ಕುರಿತ ಸರಳ, ಸುಂದರ ಕವನ
ಅನ್ನದಾತನ ಮಹಿಮೆಯನ್ನು ಬಣ್ಣಿಸಿರುವ ನಿಮಗಿದೋ ವಂದನೆ