ಕನ್ನಡಾಂಬೆಯ ಕರುನಾಡು

Share Button

ಸೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿ
ಕನ್ನಡಾಂಬೆಯ ಕರುನಾಡಿನ ಪುಣ್ಯಕರ ಕ್ಷೇತ್ರದಲ್ಲಿ/
ಹಲವಾರು ಹರಿಯುವ ಪವಿತ್ರ ನದಿಗಳ ತೀರದಲ್ಲಿ/
ಮಲೆನಾಡಿನ ಸಹ್ಯಾದ್ರಿಯ ಮಲೆಗಳ ಬುಡಗಳಲ್ಲಿ/
ಶೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿ
 
ಕರುಣೆಯಿಂದ ಕೆತ್ತಿರುವನು ಕನ್ಸೆಳೆಯುವ ದೇಗುಲಗಳ/
ಕಲ್ಲು ಕಲ್ಲುಗಳಲ್ಲಿ ಹಾಡಿಸಿರುವನು ಸುಸ್ವರ ಮಾಧುರ್ಯಗಳ/
ಸಿಂಪಡಿಸಿರುವನು ಪರಿಮಳ ಚೆಲ್ಲುವ ಶ್ರೀಗಂಧ ಮರಗಳ/
ಮಾರ್ಧ್ವನಿಸಿರುವನು ಕನ್ನಡದ ಕವಿ ಕೋಗಿಲೆಯ ಹಾಡುಗಳ/
 
ಕನ್ನಡಾಂಬೆಯ ಕರುನಾಡಿನ……
 
ಸಿಂಪಡಿಸಿರುವನು ಎಲ್ಲೆಡೆ ಕಾವೇರಿ ತಾಯಿಯ ಆಶೀರ್ವಾದವ/
ಬಯಲು ಸೀಮೆಯಿಂದ ಕರಾವಳಿವರೆಗೆ ಹರಡಿರುವನು ಚೆಲುವ/
ತಳಿರು ತೋರಣಗಳಲ್ಲಿ ಶೃಂಗರಿಸಿರುವನು ಸಗ್ಗದ ಅಂದಚಂದವ/
ತಣ್ಣನೆ ತಂಗಾಳಿಯಲ್ಲಿ ತಣಿಸಿರುವನು ಕನ್ನಡಿಗರ ಮನದಂಗಳವ/
 
ಕನ್ನಡಾಂಬೆಯ ಕರುನಾಡಿನ……
 
ಕರ್ನಾಟಕದ ಮಣ್ಣಲ್ಲಿ ಸೃಜಿಸಿದ ಕಾವ್ಯ ಕವನ ಕವಿತೆಗಳ ಬಂಡಾರವ/
ನಿರ್ಮಿಸಿದ ಕತೆ ಹೇಳುವ ಕೋಟೆಗಳ ನೃತ್ಯ  ನಾಟಕಗಳ ರಂಗಸ್ಥಳವ/
ರಸ ಋಷಿಗಳ ನಾಡಾಗಿಸಿದ ಸಾಧುಸಂತರ ಬೀಡಾಗಿಸಿದ ಪುಣ್ಯಸ್ಥಳವ/
ರಸ ಕವಿಗಳ ವನಸಿರಿಗಳ ಪುಣ್ಯಧಾಮದಲ್ಲಿ ಧ್ವನಿಸಿದ ಹಕ್ಕಿಗಳ ಇಂಚರವ
 
ಕನ್ನಡಾಂಬೆಯ ಕರುನಾಡಿನ ,,,,,,,
 
ಬೇಲೂರು ಹಳೇಬೀಡು ಬಾದಾಮಿ ಐಹೊಳೆಯಲ್ಲಿ ಚಿತ್ತರಿಸಿದ ಚಿತ್ರಕಲೆಯ/
ಶೃಂಗೇರಿ ಗೋಕರ್ಣ ಮೈಸೂರು ಬೆಂಗಳೂರಿನಲ್ಲಿ ಚೆಲ್ಲಿದ ಸೌಂದರ್ಯತೆಯ/
ದಾಸರ ಪದಗಳಲ್ಲಿ ಅಕ್ಕಮಹಾದೇವಿ ವಚನಗಳಲ್ಲಿ ಚೆಲ್ಲಿದ ದೈವಿಕತೆಯ/
ಬಸವಣ್ಣನವರ ಕುಮಾರವ್ಯಾಸನ ಪದಗಳಲ್ಲಿ ಹರಿಸಿದ ಜೇನಿನ ಹೊಳೆಯ/
 
ಕನ್ನಡಾಂಬೆಯ ಕರುನಾಡಿನ……
 
ರನ್ನ ಪಂಪರ ಬೇಂದ್ರೆ ಕುವೆಂಪು ಪುತಿನ ಅವರು ನೆಲೆಯಾಗಿ ಹರಸಿದ/
ಹಕ್ಕಾ ಬುಕ್ಕರಾಳಿದ ಶ್ರೀ ವಿದ್ಯಾರಣ್ಯರ ವಿಜಯನಗರವನ್ನು ಬೆಳಗಿಸಿದ/
ದೇವ ವಿರೂಪಾಕ್ಷ ಶ್ರೀ ಚಾಮುಂಡೇಶ್ವರಿಯ ಭುವನೇಶ್ವರಿಯ ರಕ್ಷೆ ನೀಡಿದ/
ಗೊಮ್ಮಟೇಶ್ವರನ ಸ್ವಯಂಬಿಸಿದ ಶರಾವತಿಯ ಜೋಗಪತವ ಬೋರ್ಗೆರೆಸಿದ/
 
ಕನ್ನಡಾಂಬೆಯ ಕರುನಾಡಿನ……
 
ಎಂದೆಂದಿಗೂ ಹಾರಿಸಿರಿ ಕನ್ನಡದ ಬಾವುಟವ/
ಜಯ ಕರ್ನಾಟಕ ಜಯ ಕರ್ನಾಟಕ ಜಯ ಕರ್ನಾಟಕ/
ನಮಿಸಿರಿ ಪೂಜಿಸಿರಿ ಕನ್ನಡಾಂಬೆಯ ಮುಕುಟವ/
ಜಯ ಕರ್ನಾಟಕ ಜಯ ಕರ್ನಾಟಕ ಜಯ ಕರ್ನಾಟಕ/

-ಮಿತ್ತೂರು ನಂಜಪ್ಪ ರಾಮಪ್ರಸಾದ್

5 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ ಕವನ

  2. ಸೊಗಸಾದ.. ಕವನ..ಅಭಿನಂದನೆಗಳು ಸಾರ್

  3. Padma Anand says:

    ಕನ್ನಡದ ನಾಡು ನುಡಿಯ ಸಮೃದ್ಧತೆಯ ಸಾರುವ ಸುಂದರ ಕವನ.

  4. Padmini Hegde says:

    ಹಾರಿಸುವ ಏರಿಸುವ ಕನ್ನಡದ ಬಾವುಟ!

  5. ಶಂಕರಿ ಶರ್ಮ says:

    ಕನ್ನಡಾಂಬೆಗೆ ನಮನ….ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: