ನಡುವೆ…
ಜನನ ಮರಣಗಳ
ಊರುಗಳ ನಡುವೆ
ಅನಿರೀಕ್ಷಿತ ತಿರುವುಗಳ
ಜೀವನದ ಪಯಣವು.
ಸೋಲು ಗೆಲುವುಗಳ
ಪಂದ್ಯಾವಳಿ ನಡುವೆ
ಅನಿರೀಕ್ಷಿತ ತೀರ್ಪುಗಳ
ಜೀವನದ ಆಟವು.
ವಾಸ್ತವ ಭ್ರಮೆಗಳ
ತಿಕ್ಕಾಟದ ನಡುವೆ
ಅನಿರೀಕ್ಷಿತ ಪಾತ್ರಗಳ
ಜೀವನದ ನಾಟಕವು.
ಬೇಕು ಬೇಡಗಳ
ಕಗ್ಗಟ್ಟಿನ ನಡುವೆ
ಅನಿರೀಕ್ಷಿತ ದಾಳಿಗಳ
ಜೀವನದ ಕದನವು.
ನಿನ್ನೆ ಇಂದು ನಾಳೆಗಳ
ಲೆಕ್ಕಾಚಾರದ ನಡುವೆ
ಅನಿರೀಕ್ಷಿತ ಫಲಗಳ
ಜೀವನದ ಪಾಠವು.
–ಶಿವಮೂರ್ತಿ.ಹೆಚ್. ದಾವಣಗೆರೆ
ಕವನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು
ನಡುವೆ..ಎಂಬ ಶ್ರೀಷಿಕೆ ಹೊತ್ತ ಕವನ..ಅರ್ಥಪೂರ್ಣ ವಾಗಿದೆ..ಅಭಿನಂದನೆಗಳು ಸಾರ್.
ಧನ್ಯವಾದಗಳು ಮೇಡಂ
ಬದುಕಿನ ಪಯಣ ಇಲ್ಲಿ ಬಹಳ ಚೆನ್ನಾಗಿ ಅನಾವರಣ ಗೊಂಡಿದೆ.
ಧನ್ಯವಾದಗಳು ಮೇಡಂ
ಜೀವನದ ಕವನ ಚೆನ್ನಾಗಿದೆ.
ಧನ್ಯವಾದಗಳು ಮೇಡಂ
ಎಷ್ಟು ಕಲಿತರೂ ಸಾಲದೆನ್ನುವ ಜೀವನ ಪಾಠದ ಮತ್ತೊಂದು ಸರಳ ಕಾವ್ಯಾತ್ಮಕ ನಿರೂಪಣೆ
ಧನ್ಯವಾದಗಳು ಮೇಡಂ