‘ಸ್ರೀಯಾನ’ ಕಾದಂಬರಿ, ಲೇ : ಎಂ.ಆರ್. ಆನಂದ
‘ಸ್ರೀಯಾನ’ ಹೆಸರೇ ಹೇಳುವಂತೆ ಈ ಕಾದಂಬರಿ ಮೂರು ತಲೆಮಾರಿನ ಸ್ರೀಯರ ಬದುಕು ಬವಣೆಗಳ ಅನಾವರಣ. ಒಂದೊಂದು ತಲೆಮಾರಿನ ಸ್ರೀಯರು ಹಂತ ಹಂತವಾಗಿ ಸಹನೆ ,ತಾಳ್ಮೆ, ಸಂದರ್ಭೋಚಿತ ಬುದ್ಧಿವಂತಿಕೆ, ದಾಷ್ಟಿಕತನ, ಯೋಚನಾಲಹರಿ,ಯೋಜನೆ ಕರ್ತವ್ಯ ಪಾಲನೆ, ಕಾಲಮಾನಕ್ಕೆ ತಕ್ಕಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಈ ಪರಿಧಿಯಲ್ಲಿ ಪುರುಷರ ದಬ್ಬಾಳಿಕೆ, ನಿರ್ಲಜ್ಜ ನಡವಳಿಕೆ, ದುಶ್ಚಟಗಳ ಅನಾವರಣ, ಬೋಳೆ ಸ್ವಭಾವ, ಗಂಡುಮಕ್ಕಳ ಮೇಲೆ ಅತಿಯಾದ ವ್ಯಾಮೋಹ, ಆಸ್ತಿಗೋಸ್ಕರ ರಕ್ತ ಸಂಬಂಧಗಳನ್ನು ಕಡೆಗಳಿಸುವ ಮನೋ ಸ್ಥಿತಿ, ಅಲ್ಲೊಂದು ಇಲ್ಲೊಂದು ಸಹಾಯಮಾಡುವ ಹಸ್ತ ನಿರ್ವಾಜ್ಯ ಪ್ರೇಮ, ಈ ಎಲ್ಲಾ ಬಹುಮುಖದ ಮನೋಭಾವವನ್ನು ಬಹಳ ಮನೋಜ್ಞವಾಗಿ ಪಡಿಮೂಡಿಸಿದ್ದಾರೆ ಕಾದಂಬರಿಕಾರರು. ಅಂತ್ಯದಲ್ಲಿ ಜವಾಬ್ದಾರಿಯ ನೊಗ ಹೊರುವವರಿಗೆ ಕೊನೆಯಿಲ್ಲದ ಸರ್ವಕಾಲಿಕ ಸತ್ಯ ವನ್ನು ಎತ್ತಿ ಹಿಡಿದಿದ್ದಾರೆ.
ಸರಾಗವಾಗಿ ಓದಿ ಸಿಕೊಂಡು ಹೋಗುವ ಭಾಷೆ ಮತ್ತು ಕಾದಂಬರಿಗೆ ಪೂರಕವಾಗಿ ಬರುವ ಮೈಸೂರು, ಶ್ರೀರಂಗಪಟ್ಟಣ, ದಾವಣಗೆರೆ, ಶಿವಮೊಗ್ಗ, ಮುಂತಾದ ಸ್ಥಳಗಳ ಪರಿಚಯ ಅಲ್ಲಿನ ಪ್ರಕೃತಿ ವರ್ಣನೆ ಸಮಯೋಚಿತ ರೀತಿಯಲ್ಲಿ ಮೂಡಿಬಂದಿದೆ. ಈ ಕಾದಂಬರಿ ಕಥಾನಕ ದೀರ್ಘವಾಗಿದೆ ಎಂದು ಒಮ್ಮೊಮ್ಮೆ ಅನಿಸಿದ್ದಾದರೂ…ಕುತೂಹಲ ಕೆರಳಿಸುವ ನಿಟ್ಟಿನಲ್ಲಿ ಆ ಅನಿಸಿಕೆ ಮರೆಯಾಗುತ್ತದೆ.
ಇವರ ಲೇಖನಿಯಿಂದ ಮತ್ತಷ್ಟು ಮಗದಷ್ಟು ಕಾದಂಬರಿಗಳು ಹೊರಹೊಮ್ಮಲಿ ಹಾಗೂ ಸಾಹಿತ್ಯವಲಯಕ್ಕೆ ಉತ್ತಮ ಕೊಡುಗೆ ಯಾಗಲಿ ಎಂದು ಹಾರೈಸುತ್ತೇನೆ.
–ಬಿ.ಅರ್.ನಾಗರತ್ನ, ಮೈಸೂರು.
ಸೊಗಸಾದ ಪುಸ್ತಕ ಪರಿಚಯ…ಧನ್ಯವಾದಗಳು ನಾಗರತ್ನ ಮೇಡಂ.
ವಂದನೆಗಳು ಮೇಡಂ
ಸೂಪರ್. ಕಾತರದಿಂದ ಕಾಯುತ್ತೇವೆ
ಯಾವುದಕ್ಕೆ ಕಾತುರದಿಂದ ಕಾಯುತ್ತೀರಾ ..ನಯನಮೇಡಂ ಇದು ಪುಸ್ತಕ ಪರಿಚಯ
ಮಹಿಳಾ ಪ್ರಧಾನ ಕಾದಂಬರಿಯ ಪುಸ್ತಕ ಪರಿಚಯ, ಕಾದಂಬರಿಯ ಕುರಿತಾಗಿ ಕುತೂಹಲ ಹುಟ್ಟಿಸುವಂತಿದೆ. ವಂದನೆಗಳು.
ಧನ್ಯವಾದಗಳು ಪದ್ಮಾ ಮೇಡಂ