ಅತಿಥಿ ದೇವೋ ಭವ
ಬಾಗಿಲಿಗೆ ಬಂದಿರುವನು ಬಿಕ್ಷುಕನೋ ಇಲ್ಲ ಭಗವಂತನೂ /
ಅರಿವಿಲ್ಲದೆ ಇಕ್ಕಟ್ಟಿನಲ್ಲಿರುವಾಗ ತಿಳಿಯದೆ ಬಿಕ್ಕಟ್ಟಿನಲ್ಲಿರುವಾಗ /
ಬಾಗಿಲಿಗೆ ಬಂದಿರುವನು ಸುಕರ್ಮಿಯೋ ಇಲ್ಲ ದುಷ್ಕರ್ಮಿಯೋ /
ಅರಿವಿಲ್ಲದೆ ಸಮಸ್ಯೆಯಾಗಿರುವಾಗ ತಿಳಿಯದೆ ಸಂದಿಗ್ದಲ್ಲಿರುವಾಗ /
ಬಂದವರೆಲ್ಲರೊ ದೈವಸಮಾನರೆಂದು ಕೈಮುಗಿದು ಗೌರವದಲ್ಲಿ /
ಅತಿಥಿ ದೇವೋ ಭವದ ಭಾವದಲ್ಲಿ ಸನ್ಮಾನಿಸಿರಿ /
ಆಗಮಿಸಿದರೆಲ್ಲರೂ ದೈವರೂಪವರೆಂದು ಬಗೆದು ಮಾನ್ಯತೆಯಲ್ಲಿ /
ಅತಿಥಿ ದೇವೋ ಭವದ ಭಾವದಲ್ಲಿ ಅಭಿನಂದಿಸಿರಿ/
ಮಾನವರೆಲ್ಲರು ದೈವ ತುಣುಕುಗಳಾಗಿ ಜನಿಸಿದವರೇ ಭುವಿಯಲ್ಲಿ /
ಸಂಕೋಚವೇಕೆ ಮನ್ನಣೆಯಲ್ಲಿ ಸತ್ಕರಿಸಲು ಆದರಿಸಲು ಅಕ್ಜರೆಯಲ್ಲಿ /
ಮನುಜರೆಲ್ಲರೂ ದೈವ ಕಿಡಿಗಳಾಗಿ ಹುಟ್ಟಿದವರೇ ಭೂಲೋಕದಲ್ಲಿ /
ಹಿಂಜರಿಕೆಯೇಕೆ ಅಭಿನಂದನೆಯಲ್ಲಿ ಸ್ವಾಗತಿಸಲು ಆಹ್ವಾನಿಸಲು ಮರ್ಯಾದೆಯಲ್ಲಿ /
–ಮಿತ್ತೂರು ಎನ್. ರಾಮಪ್ರಸಾದ್
ಸರಳ ಸುಂದರ ಕವನ…ಧನ್ಯವಾದಗಳು ಸಾರ್
.
Nice one
ಮಾನವರೆಲ್ಲರು ದೈವ ಸಮಾನರು ಎಂಬ ಭಾವ ಬಿಂಬಿಸುವ ಸೊಗಸಾದ ಕವನ.
ಸುಂದರ ಭಾವಸೂಸುವ ಕವನ